More

    ಪಾಕಿಸ್ತಾನದಲ್ಲಿ ಕಾಣಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಪೋಸ್ಟರ್

    ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರಪಟವನ್ನು ಹಿಡಿದು ಪಾಕಿಸ್ತಾನದಿಂದ ಸ್ವಾತಂತ್ರ್ಯ ಕೇಳಿದ ರ‍್ಯಾಲಿಯೊಂದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಿಂದ ವರದಿಯಾಗಿದೆ. ಸಿಂಧಿ ನಾಯಕ ಘುಲಾಮ್ ಮುರ್ತಜಾ ಸೈಯದ್ ಅವರ 117ನೇ ಜಯಂತಿಯ ಅಂಗವಾಗಿ ಸನ್ನ್ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಿಂಧುದೇಶ ಸ್ವಾತಂತ್ರ್ಯ ಚಳುವಳಿ ಇದಾಗಿದೆ.

    ಸಿಂಧ್ ಪ್ರಾಂತ್ಯವು ಸಿಂಧು ತೀರದ ನಾಗರಿಕತೆ ಮತ್ತು ವೈದಿಕ ಧರ್ಮದ ಮನೆಯಾಗಿದ್ದು, ಬ್ರಿಟಿಷರು ಅದನ್ನು ಆಕ್ರಮಿಸಿ ನಂತರ ಭಾರತದ ವಿಭಜನೆಯ ವೇಳೆ ಇಸ್ಲಾಮೀಯ ದೇಶವಾದ ಪಾಕಿಸ್ತಾನದ ಕೈಗೆ ನೀಡಿದ್ದಾರೆ. ತಮಗೆ ಪಾಕಿಸ್ತಾನದಿಂದ ಸ್ವತಂತ್ರವಾದ ಪ್ರತ್ಯೇಕ ಸಿಂಧುದೇಶ ಬೇಕೆಂಬುದಾಗಿ ಚಳುವಳಿಗಾರರು ಆಗ್ರಹಿಸಿದರು.

    ಇದನ್ನೂ ಓದಿ: ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!

    ಮೋದಿಯವರ ಪೋಸ್ಟರ್​ನೊಂದಿಗೆ ಅಮೆರಿಕ ನೂತನ ಅಧ್ಯಕ್ಷ ಜೊ ಬೈಡೆನ್, ನ್ಯೂಜಿಲೆಂಡ್ ಪ್ರಧಾನಿ ಜಕಿಂದಾ, ಫ್ರಾನ್ಸ್ ಅಧ್ಯಕ್ಷ ಎಮಾನ್ಯುಲ್ ಮಕ್ರನ್, ಇಂಗ್ಲೆಂಡ್​ ಪ್ರಧಾನಿ ಬೋರಿಸ್ ಜಾನ್ಸನ್ ಅವರುಗಳ ಚಿತ್ರಪಟಗಳನ್ನೂ ಚಳುವಳಿಗಾರರು ಹಿಡಿದಿದ್ದರು. ಈ ನಾಯಕರು ತಮಗೆ ಪಾಕಿಸ್ತಾನದಿಂದ ಸ್ವಾತಂತ್ರ್ಯ ಪಡೆಯಲು ಸಹಾಯ ಮಾಡಬೇಕೆಂಬ ಅಹವಾಲು ಅವರದಾಗಿತ್ತು. 

    ಗರ್ಭಿಣಿಯಾದಾಗ ಎಲ್ಲವೂ ಸರಿಯಾಗುತ್ತದೆ- ಗಾತ್ರದ ಬಗ್ಗೆ ಮುಜುಗರ ಬೇಡ…

    ಕರೊನಾ ಲಸಿಕೆ ಪಡೆದ ಮೇಲೆ ಏನೆಲ್ಲ ಆಗಬಹುದು?; ಇಲ್ಲಿವೆ ನೋಡಿ ಅಡ್ಡಪರಿಣಾಮಗಳ ಮಾಹಿತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts