More

    ಕರೊನಾ ಲಸಿಕೆ ಪಡೆದ ಮೇಲೆ ಏನೆಲ್ಲ ಆಗಬಹುದು?; ಇಲ್ಲಿವೆ ನೋಡಿ ಅಡ್ಡಪರಿಣಾಮಗಳ ಮಾಹಿತಿ…

    ನವದೆಹಲಿ: ಈಗ ಸಾಮಾನ್ಯವಾಗಿ ಎಲ್ಲಿ ನೋಡಿದರೂ, ಯಾರನ್ನು ಕೇಳಿದರೂ ಕರೊನಾ ಲಸಿಕೆಯದ್ದೇ ಸುದ್ದಿ. ಕರೊನಾ ಲಸಿಕೆ ಬಂದಿದೆ ಎಂಬ ಖುಷಿ ಒಂದೆಡೆಯಾದರೆ, ಅದನ್ನು ಪಡೆದ ಹಲವರಿಗೆ ಆಗಿರುವ ಅಡ್ಡಪರಿಣಾಮಗಳ ಭಯ ಮತ್ತೊಂದೆಡೆ. ಅದೇ ಕಾರಣಕ್ಕೆ ಲಸಿಕೆ ಪಡೆಯಲಿಕ್ಕೆ ಕೆಲವರು ಹಿಂಜರಿಯುತ್ತಿರುವ ಪ್ರಕರಣಗಳು ಕೂಡ ಕೇಳಿ ಬಂದಿವೆ. ಹಾಗಾದರೆ ಆ ಅಡ್ಡಪರಿಣಾಮಗಳೇನು ಎಂಬ ಕುತೂಹಲ ಹಲವರಲ್ಲಿ ಇರುವಂಥದ್ದೇ.. ಅದಕ್ಕಿಲ್ಲಿ ಉತ್ತರಗಳಿವೆ.

    ಭಾರತದಲ್ಲಿ ಕರೊನಾ ವಿರುದ್ಧ ಎರಡು ಲಸಿಕೆಗಳಿಗೆ ಮಾನ್ಯತೆ ಲಭಿಸಿದೆ. ಆಕ್ಸ್​ಫರ್ಡ್​ ಆಸ್ಟ್ರಾಜೆನೆಕಾ ಸಂಶೋಧಿಸಿರುವ ಕೋವಿಶೀಲ್ಡ್​ ಹಾಗೂ ಭಾರತ್ ಬಯೋಟೆಕ್ ಕಂಪನಿ ಸಂಶೋಧಿಸಿರುವ ಕೊವ್ಯಾಕ್ಸಿನ್ ಲಸಿಕೆಗಳನ್ನು ಈಗ ದೇಶಾದ್ಯಂತ ನೀಡಲಾಗುತ್ತಿದೆ. ಲಸಿಕೆ ಪಡೆದ ಹಲವರಿಗೆ ಅಡ್ಡಪರಿಣಾಮಗಳು ಉಂಟಾಗಿವೆ. ಹೀಗಾಗಿ ಲಸಿಕೆ ಪಡೆದ ಮೇಲೆ ಸಾಮಾನ್ಯವಾಗಿ ಉಂಟಾಗಬಹುದಾದ ಅಡ್ಡಪರಿಣಾಮಗಳೇನು ಎಂಬುದನ್ನು ಈಗ ಬಹಿರಂಗಪಡಿಸಲಾಗಿದ್ದು, ಅಂಥ ಲಕ್ಷಣಗಳು ಉಂಟಾದರೆ ಗಾಬರಿಗೊಳ್ಳಬೇಕಾದ ಅಗತ್ಯವಿಲ್ಲ ಎಂದು ಹೇಳಲಾಗಿದೆ.

    ಇದನ್ನೂ ಓದಿ: ರಾಜಧಾನಿಯಲ್ಲಿ ಕರೊನಾ ಲಸಿಕೆ ಪಡೆದ 51 ಮಂದಿಯಲ್ಲಿ ಅಡ್ಡ ಪರಿಣಾಮ!

    ಕರೊನಾ ಸೋಂಕನ್ನು ಎದುರಿಸುವ ನಿಟ್ಟಿನಲ್ಲಿ ಲಸಿಕೆ ಪಡೆಯಬೇಕಾದ್ದು ಅನಿವಾರ್ಯ. ಆದರೆ ಅದನ್ನು ತೆಗೆದುಕೊಂಡ ಬಳಿಕ ಕೆಲವು ಅಡ್ಡ ಪರಿಣಾಮಗಳು ಕಾಣಿಸಬಹುದು. ಇದರಿಂದ ದೈನಂದಿನ ಕೆಲಸಗಳಿಗೆ ತಾತ್ಕಾಲಿಕ ಅಡ್ಡಿ ಎದುರಾಗಬಹುದು. ಆದರೆ ಅವುಗಳಿಗೆ ಭಯ ಬೀಳಬೇಕಾಗಿಲ್ಲ, ಸ್ವಲ್ಪ ಸಮಯದಲ್ಲಿ ಅವು ಇಲ್ಲವಾಗುತ್ತವೆ ಎಂದು ಮೂಲಗಳು ತಿಳಿಸಿವೆ.

    ಕೋವಿಶೀಲ್ಡ್​ನಿಂದ ಆಗಬಹುದಾದ ಲಘು ಅಡ್ಡಪರಿಣಾಮಗಳು.

    • ಲಸಿಕೆ ನೀಡಿದ್ದ ಜಾಗದಲ್ಲಿ ನೋವು
    • ತಲೆನೋವು
    • ಸುಸ್ತು
    • ಸ್ನಾಯುಸೆಳೆತ
    • ಚಳಿ
    • ವಾಕರಿಕೆ ಬಂದಂತನಿಸುವುದು

     

    ಕೊವ್ಯಾಕ್ಸಿನ್​ನಿಂದ ಆಗಬಹುದಾದ ಅಡ್ಡಪರಿಣಾಮಗಳು.

    • ಲಸಿಕೆ ನೀಡಿದ್ದ ಜಾಗದಲ್ಲಿ ನೋವು
    • ತಲೆನೋವು
    • ಸುಸ್ತು
    • ಜ್ವರ
    • ಮೈಕೈ ನೋವು
    • ಹೊಟ್ಟೆನೋವು
    • ವಾಕರಿಕೆ ಬಂದಂತನಿಸುವುದು ಅಥವಾ ವಾಂತಿ
    • ತಲೆಸುತ್ತು
    • ನಡುಕ
    • ಬೆವರು
    • ಶೀತ
    • ಕೆಮ್ಮು
    • ಲಸಿಕೆ ನೀಡಿದ್ದ ಜಾಗದಲ್ಲಿ ಊತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts