More

    ಕರೊನಾ ವಿರುದ್ಧ ಪ್ರಧಾನಿ ಮೋದಿಯ ದಿಟ್ಟ ಹೋರಾಟ

    ಕರೊನಾ ವಿರುದ್ಧ ಪ್ರಧಾನಿ ಮೋದಿಯ ದಿಟ್ಟ ಹೋರಾಟಚೀನಾ ಡಿಸೆಂಬರ್​ನಲ್ಲಿ ಕರೊನಾ ಸೋಂಕಿಗೆ ಒಳಗಾದಾಗಲೇ ಈ ಸಾಂಕ್ರಾಮಿಕ ರೋಗದ ಅಪಾಯವನ್ನು ಪ್ರಧಾನಿ ನರೇಂದ್ರ ಮೋದಿ ಗ್ರಹಿಸಿದ್ದರು ಎಂದೆನಿಸುತ್ತದೆ. ಆ ಸಮಯದಲ್ಲಿ ಭಾರತದಲ್ಲಿ ಯಾವುದೇ ರೋಗಿ ಇರಲಿಲ್ಲ. ಭಾರತದಲ್ಲಿ ಕರೊನಾಪೀಡಿತ ಮೊದಲ ರೋಗಿ ದಾಖಲಾಗಿದ್ದು 2020 ಜನವರಿ 30 ರಂದು. ‘ಈ ವೈರಾಣು ಚೀನಾಕ್ಕೆ ಮಾತ್ರ ಸೀಮಿತವಾಗುವುದಿಲ್ಲ’ ಎಂದು ಪ್ರತಿ ಸಂಪುಟ ಸಭೆಯ ನಂತರ ಅವರು ನಮಗೆ ಹೇಳುತ್ತಿದ್ದರು. ‘ಸೋಂಕು ಎಲ್ಲೆಡೆಯೂ ಹರಡುತ್ತದೆ. ಇದು ಗಂಭೀರವಾಗಿದ್ದು, ಭಾರತವು ಹೋರಾಟಕ್ಕೆ ಸಿದ್ಧವಾಗಬೇಕು’ ಎಂದು ಹೇಳುತ್ತಿದ್ದರು. ಬಳಿಕ, ಭಾರತಕ್ಕೆ ಬಂದ ಅಂತಾರಾಷ್ಟ್ರೀಯ ಪ್ರಯಾಣಿಕರ ಆರೋಗ್ಯ ತಪಾಸಣೆ ಆರಂಭವಾಯಿತು ಮತ್ತು ನಂತರ ಅದನ್ನು ಸಾರ್ವತ್ರಿಕಗೊಳಿಸಲಾಯಿತು. ಕೆಲವು ದಿನಗಳ ನಂತರ ವಿಮಾನ ಮತ್ತು ರೈಲು ಪ್ರಯಾಣವನ್ನು ಸ್ಥಗಿತಗೊಳಿಸಲಾಯಿತು. ಅನುಮಾನಾಸ್ಪದ ಪ್ರಯಾಣಿಕರನ್ನು ಮನೇಶರ್​ನಲ್ಲಿರುವ ಗೃಹ ಸಚಿವಾಲಯದ ಕಟ್ಟಡದಲ್ಲಿ ಇರಿಸಲಾಗಿತ್ತು. ಆ ಸಮಯದಲ್ಲಿ, ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದು ನಮಗೆ ತಿಳಿಯಿತು. ಅಂದಿನಿಂದಲೇ ಕರೊನಾ ಸೋಂಕಿನ ವಿರುದ್ಧ ಹೋರಾಡಲು ಭಾರತವನ್ನು ಸನ್ನದ್ಧಗೊಳಿಸುವ ಯೋಜನೆಗಳನ್ನು ಪ್ರಧಾನಿ ನೇತೃತ್ವದಲ್ಲಿ ಜಾರಿಗೆ ತರಲಾಯಿತು. ಕೋವಿಡ್​ಗೆ ಮೀಸಲಾದ ಆಸ್ಪತ್ರೆಗಳ ಪರಿಕಲ್ಪನೆಯೇ ಇರಲಿಲ್ಲ. ಇಂದು, ನಾವು 2 ಲಕ್ಷ ಪ್ರತ್ಯೇಕ ಹಾಸಿಗೆಗಳು ಮತ್ತು 15 ಸಾವಿರ ಐಸಿಯು ಹಾಸಿಗೆಗಳೊಂದಿಗೆ ಕೋವಿಡ್​ಗೆ ಮೀಸಲಾದ 700 ಆಸ್ಪತ್ರೆಗಳನ್ನು ಹೊಂದಿದ್ದೇವೆ.

    ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇಗಳು) ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ಇತರ ಸಿಬ್ಬಂದಿಯನ್ನು ರಕ್ಷಿಸುವ ಗುರಿಯನ್ನು ಹೊಂದಿವೆ. ಭಾರತದಲ್ಲಿ ಈ ಸೌಲಭ್ಯ ಇರಲಿಲ್ಲ. ಆದ್ದರಿಂದ, ಆಮದು ಮಾಡಿಕೊಳ್ಳಲು ಮೊದಲು ಆದೇಶಗಳನ್ನು ನೀಡಲಾಯಿತು. ಈಗ, ಭಾರತದಲ್ಲಿ 39 ಕಾರ್ಖಾನೆಗಳು ಪಿಪಿಇಗಳನ್ನು ತಯಾರಿಸುತ್ತಿವೆ. 22 ಲಕ್ಷಕ್ಕೂ ಹೆಚ್ಚು ಪಿಪಿಇ ಕಿಟ್​ಗಳನ್ನು ಈಗಾಗಲೇ ವಿತರಿಸಲಾಗಿದೆ.

    ಇದನ್ನೂ ಓದಿ ಗರ್ಭಿಣಿಯಿಂದ 3 ಜಿಲ್ಲೆಗಳಲ್ಲಿ ಆತಂಕ; ಏನೇನೆಲ್ಲ ಆಗಿದೆ ನೋಡಿ ಈಕೆಯಲ್ಲಿ ಸೋಂಕು ದೃಢವಾಗುವ ಮೊದಲು..

    ಎನ್95 ಬಿಡಿ, ನಾವು ಯಾವುದೇ ಮುಖಗವಸುಗಳನ್ನೂ ತಯಾರಿಸುತ್ತಿರಲಿಲ್ಲ. ಆದರೆ ಪರಿಸ್ಥಿತಿ ಎಷ್ಟು ಬದಲಾಗಿದೆ ಎಂದರೆ, ಈಗಾಗಲೇ 6 ಮಿಲಿಯನ್ ಮುಖಗವಸುಗಳನ್ನು ವಿತರಿಸಲಾಗಿದೆ ಮತ್ತು ಭಾರತದಲ್ಲಿ ಅನೇಕ ಹೊಸ ಕಾರ್ಖಾನೆಗಳು ಎನ್ 95 ಮುಖಗವಸು ನಿಟ್ಟಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿವೆ ಮತ್ತು ಅನೇಕ ಸಣ್ಣಘಟಕಗಳು ಸಾಮಾನ್ಯ ಜನರ ಬಳಕೆಗಾಗಿ ಮುಖಗವಸುಗಳನ್ನು ತಯಾರಿಸಲು ಪ್ರಾರಂಭಿಸಿವೆ.

    ಪರೀಕ್ಷೆಗಾಗಿ ಪುಣೆಯಲ್ಲಿ ಮಾತ್ರ ಒಂದು ಪ್ರಯೋಗಾಲಯ ಇತ್ತು. ಅಲ್ಲದೆ, ಪರೀಕ್ಷಾ ಸಾಮರ್ಥ್ಯ ದಿನಕ್ಕೆ ಕೇವಲ 4 ಸಾವಿರ ಆಗಿತ್ತು. ಪರೀಕ್ಷೆಗಳನ್ನು ನಡೆಸಲು ಮತ್ತು ಫಲಿತಾಂಶಗಳನ್ನು ನೀಡಲು ಈಗ 300 ಪ್ರಯೋಗಾಲಯಗಳಿದ್ದು, ದಿನಕ್ಕೆ 80 ಸಾವಿರಕ್ಕೂ ಹೆಚ್ಚು ಪರೀಕ್ಷೆಗಳನ್ನು ಮಾಡಬಹುದು. ಮುಂಚೆ 8400 ವೆಂಟಿಲೇಟರ್​ಗಳು ಮಾತ್ರ ಇದ್ದವು. ಆರಂಭಿಕ ಆದೇಶಗಳೊಂದಿಗೆ, ಈಗ 30 ಸಾವಿರ ವೆಂಟಿಲೇಟರ್​ಗಳಿವೆ. ಈಗಾಗಲೇ ಭಾರತೀಯ ತಯಾರಕರು ವೆಂಟಿಲೇಟರ್​ಗಳನ್ನು ತಯಾರಿಸಲು ಪ್ರಾರಂಭಿಸಿದ್ದಾರೆ ಮತ್ತು ದೇಶೀಯವಾಗಿ 30 ಸಾವಿರ ವೆಂಟಿಲೇಟರ್​ಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ.

    ಇದೇ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ಇಡೀ ಪ್ರಪಂಚದೊಂದಿಗೆ ಸಂಪರ್ಕದಲ್ಲಿದ್ದರು, ವಿವಿಧ ನಾಯಕರೊಂದಿಗೆ ಮಾತನಾಡಿದರು, ಅವರ ಮತ್ತು ತಮ್ಮ ಅನುಭವಗಳನ್ನು ಹಂಚಿಕೊಂಡರು, ಪರಸ್ಪರ ಕಲಿತರು ಮತ್ತು ಉಪಯುಕ್ತವೆನಿಸಿದ ಎಲ್ಲವನ್ನೂ ಕಾರ್ಯಗತಗೊಳಿಸಿದರು. ಹಾಗೆಯೇ, ಅವರು ಲಾಕ್​ಡೌನ್ ಮತ್ತು ಅದರ ಪರಿಣಾಮದ ಬಗ್ಗೆ ಯೋಚಿಸಿದರು. ಆದ್ದರಿಂದ, ಬಡವರ ರಕ್ಷಣೆಗಾಗಿ -ಠಿ; 1.70 ಲಕ್ಷ ಕೋಟಿಗಳ ಬೃಹತ್ ಪ್ಯಾಕೇಜ್ ಘೊಷಿಸಿದರು.

    ಇದನ್ನೂ ಓದಿ  ವೈದ್ಯಕೀಯ ಪಿಜಿ ವಿದ್ಯಾರ್ಥಿಗಳ ಸ್ಟೈಪೆಂಡ್ ಏರಿಕೆ ಸನ್ನಿಹಿತ; ಡಾ. ಸುಧಾಕರ್​ರಿಂದ ಗ್ರೀನ್​ ಸಿಗ್ನಲ್​…

    ಭಾರತವು ಅತಿದೊಡ್ಡ ಆಹಾರ ಭದ್ರತಾ ಕಾರ್ಯಕ್ರಮವನ್ನು ಹೊಂದಿದೆ, ಇದರಡಿಯಲ್ಲಿ ಎಲ್ಲ ದುರ್ಬಲ ವರ್ಗಗಳು ಮತ್ತು ಇನ್ನೂ ಹಲವು ಸೇರಿ ಒಟ್ಟು 80 ಕೋಟಿ ಜನರಿಗೆ ಕೆ.ಜಿ.ಗೆ 2/3 ರೂಪಾಯಿಗೆ 5 ಕೆಜಿ ಗೋಧಿ/ಅಕ್ಕಿಯನ್ನು ನೀಡಲಾಗುತ್ತಿದೆ. ಮೇ ಮತ್ತು ಜೂನ್ ತಿಂಗಳಲ್ಲಿ ಪ್ರತಿ ವ್ಯಕ್ತಿಗೆ 15 ಕೆಜಿ ಅಕ್ಕಿ /ಗೋಧಿ ಜತೆಗೆ 3 ಕೆಜಿ ಬೇಳೆಯನ್ನು ಉಚಿತವಾಗಿ ನೀಡಲು ಪ್ರಧಾನಿ ನಿರ್ಧರಿಸಿದರು. ಇದು ಮನೆಯಲ್ಲಿ ಅವಶ್ಯಕ ಪಡಿತರದ ಕಾಳಜಿಯನ್ನು ನಿವಾರಿಸಿತು.

    ಕಡಿಮೆ ಆದಾಯದ 20 ಕೋಟಿ ಮಹಿಳೆಯರ ಜನಧನ್ ಖಾತೆಗಳಿಗೆ ಮುಂದಿನ 3 ತಿಂಗಳವರೆಗೆ ಮಾಸಿಕ 500 ರೂ.ಗಳನ್ನು ನೇರವಾಗಿ ವರ್ಗಾಯಿಸಲಾಗುತ್ತಿದೆ. ಇದಲ್ಲದೆ, 8.4 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ 2,000 ರೂ.ಗಳನ್ನು ನೇರವಾಗಿ ವರ್ಗಾಯಿಸಲಾಯಿತು. ‘ಉಜ್ವಲಾ’ ಎಲ್​ಪಿಜಿ ಯೋಜನೆಯ 8 ಕೋಟಿ ಫಲಾನುಭವಿಗಳಿಗೆ 3 ಸಿಲಿಂಡರ್​ಗಳನ್ನು ಉಚಿತವಾಗಿ ನೀಡಲಾಗಿದೆ. ಕೋವಿಡ್ ವಿರುದ್ಧ ಹೋರಾಡಲು ಭವಿಷ್ಯನಿಧಿಯಿಂದ ಹಣವನ್ನು ಹಿಂತೆಗೆದುಕೊಳ್ಳುವ ಸೌಲಭ್ಯವನ್ನು ನೀಡಲಾಗಿದೆ. 9 ಲಕ್ಷ ಕಾರ್ವಿುಕರು -ಠಿ; 36 ಕೋಟಿಗಳನ್ನು ಹಿಂತೆಗೆದಿದ್ದಾರೆ.

    ಸಣ್ಣ ವ್ಯವಹಾರಗಳಿಗೆ ಮತ್ತು ಕಾರ್ವಿುಕರಿಗೆ ಒಟ್ಟಾಗಿ ಸಹಾಯ ಮಾಡುವುದಾಗಿ ಮೋದಿ ಘೊಷಿಸಿದರು. ಮಾಲೀಕರು ಮತ್ತು ಕಾರ್ವಿುಕರ ಭವಿಷ್ಯ ನಿಧಿ ಕೊಡುಗೆಯನ್ನು ಸರ್ಕಾರವೇ 3 ತಿಂಗಳವರೆಗೆ ಜಮಾ ಮಾಡುತ್ತದೆ ಎಂದು ಭರವಸೆ ನೀಡಿದರು. ಇದೂ ಒಂದು ದೊಡ್ಡ ಮೊತ್ತ. ರೆಪೊ ದರಗಳಲ್ಲಿ ವಿವಿಧ ಕ್ರಮಗಳ ಮೂಲಕ ಆರ್​ಬಿಐ -ಠಿ; 4 ಲಕ್ಷ ಕೋಟಿ ಹಣದ ಹರಿವನ್ನು ಬಿಡುಗಡೆ ಮಾಡಿತು. ಮಧ್ಯಮವರ್ಗಕ್ಕೆ ಇಎಂಐಗಳು ಮತ್ತು ಇತರ ಕಡ್ಡಾಯ ಸಲ್ಲಿಕೆಗಳಿಗೆ ಮುಂದೂಡಿಕೆಯ ಸೌಲಭ್ಯ ನೀಡಲಾಯಿತು.

    ಇದನ್ನೂ ಓದಿ ಕ್ಷುಲ್ಲಕ ವಿಚಾರಕ್ಕೆ ತುಂಬು ಗರ್ಭಿಣಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ಭಾವ‌

    ಸಮರ್ಪಕ ಕೋವಿಡ್ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರ -15 ಸಾವಿರ ಕೋಟಿ ರೂಗಳನ್ನು ಮೀಸಲಿರಿಸಿತು ಮತ್ತು 11 ಸಾವಿರ ಕೋಟಿ ರೂಗಳನ್ನು ‘ರಾಜ್ಯ ವಿಪತ್ತು ಪರಿಹಾರ ನಿಧಿ’ಯಾಗಿ (ಎಸ್​ಡಿಆರ್​ಎಫ್) ಬಿಡುಗಡೆ ಮಾಡಲಾಯಿತು. ಕಟ್ಟಡ ನಿರ್ಮಾಣ ಕಾರ್ವಿುಕರಿಗೆ ಸಹಾಯ ಮಾಡಲು -ಠಿ; 31 ಸಾವಿರ ಕೋಟಿಗಳನ್ನು ಬಿಡುಗಡೆ ಮಾಡಲಾಯಿತು ಮತ್ತು ತ್ವರಿತವಾಗಿ ವಿತರಿಸುವಂತೆ ಎಲ್ಲ ರಾಜ್ಯಗಳಿಗೂ ಸೂಚಿಸಲಾಯಿತು.

    ಜಮೀನಿನಿಂದ ಮಾರುಕಟ್ಟೆಯವರೆಗೆ ಕೃಷಿ ಸರಕುಗಳ ಸಂಪೂರ್ಣ ಕಾರ್ಯಾಚರಣೆಯನ್ನು ಪ್ರಧಾನಿ ಖಾತ್ರಿಪಡಿಸಿದರು. ಆ ಮೂಲಕ, ಕೃಷಿ ಆರ್ಥಿಕತೆ ಚೇತರಿಕೆ ನಿಟ್ಟಿನಲ್ಲಿ ತ್ವರಿತಸಂಚಾರ, ಹೆಚ್ಚು ಬಿತ್ತನೆ, ಬಂಪರ್ ಬೆಳೆಗಳು ಮತ್ತು ರೈತರಿಗೆ ಹಣವನ್ನು ಶೀಘ್ರವಾಗಿ ಪಾವತಿಸಲಾಗುತ್ತಿದೆ.

    ಲಾಕ್​ಡೌನ್ ಒಂದು ದೊಡ್ಡ ನಿರ್ಧಾರ. ಜನರು ಸ್ವಯಂಪ್ರೇರಣೆಯಿಂದ ಭಾಗವಹಿಸದಿದ್ದರೆ ಅದು ಎಂದಿಗೂ ಯಶಸ್ವಿಯಾಗುವುದಿಲ್ಲ. ಪ್ರಧಾನಿ ಜನರೊಂದಿಗೆ ನಿರಂತರ ಸಂವಾದ ನಡೆಸುತ್ತಿದ್ದಾರೆ. ‘ಪ್ರಧಾನಿ ನಮ್ಮ ಪ್ರಗತಿಗಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಅವರು ನಮ್ಮ ಬಗ್ಗೆ ಕಾಳಜಿ ವಹಿಸುತ್ತಾರೆ’ ಎಂದು ಕಡುಬಡವರಿಗೂ ಮನಟದ್ಟಾಗಿದೆ. ಆದ್ದರಿಂದ, ಅವರು ದೀರ್ಘ ಲಾಕ್​ಡೌನ್​ಗೆ ಮಾನಸಿಕವಾಗಿ ಸಿದ್ಧಗೊಂಡರು.

    ಪ್ರಧಾನಿ ಕರೆಯ ಮೇರೆಗೆ ಮಾರ್ಚ್ 22ರಂದು ‘ಜನತಾ ಕರ್ಫ್ಯೂ’ ಯಶಸ್ವಿಯಾಯಿತು. ಅಂದು ಸಂಜೆ 5 ಗಂಟೆಗೆ ಜನರು ಕೋವಿಡ್ ಯೋಧರಿಗೆ ಚಪ್ಪಾಳೆತಟ್ಟುವ, ಪಾತ್ರೆ, ಗಂಟೆ ಬಾರಿಸುವ ಮೂಲಕ ಗೌರವ ಸಲ್ಲಿಸುವಂತೆ ಕೇಳಿಕೊಂಡರು. ಇದು ಕೋವಿಡ್ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ಜನರನ್ನು ಪ್ರೇರೇಪಿಸಿತು.

    ಜನರ ಸುರಕ್ಷೆಗಾಗಿ ಮೋದಿ ನಾಲ್ಕು ಸರಳ ಸೂತ್ರಗಳನ್ನೂ ನೀಡಿದರು.

    ಇದನ್ನೂ ಓದಿ ಮೆಟ್ಟಿಲಿನಿಂದ ಉರುಳಿ ಬಿದ್ದು ಆಸ್ಪತ್ರೆ ಸೇರಿದ ಬಾಲಿವುಡ್ ಸಿನಿಮಾಟೋಗ್ರಾಫರ್

    ಮುಖಗವಸು ಧರಿಸುವುದು

    ನಿಯಮಿತವಾಗಿ ಕೈ ತೊಳೆಯುವುದು

    ವ್ಯಕ್ತಿಗತ ಅಂತರ ಕಾಪಾಡುವುದು

    ಮನೆಯಲ್ಲಿಯೇ ಇರುವುದು

    ಜನರು ಇದನ್ನೆಲ್ಲ ಅಳವಡಿಸಿಕೊಳ್ಳುತ್ತಿದ್ದಾರೆ. ನಂತರ, ಪ್ರಧಾನಿ ಏಪ್ರಿಲ್ 5ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪಗಳನ್ನು ಬೆಳಗಿಸಲು ಜನರನ್ನು ಕೋರಿದರು ಮತ್ತು ಇಡೀ ದೇಶವು ಉತ್ಸಾಹದಿಂದ ಇದರಲ್ಲಿ ಭಾಗವಹಿಸಿತು. ಕೊಳೆಗೇರಿ ನಿವಾಸಿಗಳು ಮತ್ತು ಕೆಲವು ಮನೆಯಿಲ್ಲದವರೂ ದೀಪಗಳನ್ನು ಬೆಳಗಿಸಿದರು. ‘ಮೋದಿಯವರಿಂದಾಗಿ ನಾವು ಉಳಿದಿದ್ದೇವೆ, ಆದ್ದರಿಂದ ನಾವು ಅವರ ಮಾತನ್ನು ಕೇಳುತ್ತೇವೆ’ ಎಂದು ಹೇಳಿದರು. ಈ ನಡುವೆ ಪ್ರಧಾನಿ ತಮ್ಮ ಸಂವಾದವನ್ನು ಮುಂದುವರಿಸಿದರು. ಮೇ 3ರಂದು, ಕರೊನಾ ಯೋಧರಿಗೆ ಆಕಾಶ ಮತ್ತು ಸಮುದ್ರದ ಮೂಲಕ ನಮಸ್ಕರಿಸುವ ನವೀನ ಕಾರ್ಯಕ್ರಮವು ಜನರಿಗೆ ಸ್ಪೂರ್ತಿ ನೀಡಿತು.

    ಆದ್ದರಿಂದ, ಮೋದಿ ಮುಂಚಿತವಾಗಿಯೇ ಯೋಜಿಸಿದರು, ನಿಖರವಾಗಿ ಅಭ್ಯಾಸ ಮಾಡಿದರು, ಪರಿಣಾಮಕಾರಿಯಾಗಿ ಸಂವಹನ ನಡೆಸಿದರು. ಆದ್ದರಿಂದ, ಇತರ ಹಲವು ಮುಂದುವರಿದ ದೇಶಗಳಿಗಿಂತ ಕೋವಿಡ್ ಬಿಕ್ಕಟ್ಟನ್ನು ಉತ್ತಮವಾಗಿ ನಿರ್ವಹಿಸುವಲ್ಲಿ ಭಾರತ ಯಶಸ್ವಿಯಾಗುತ್ತಿದೆ ಎಂಬುದು ಗಮನಸೆಳೆಯುವ ಸಂಗತಿ.

    (ಲೇಖಕರು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರು)

    ಮಂಡ್ಯವನ್ನು ಬಿಡದ ಕರೊನಾ ಗುಮ್ಮ: ಸಕ್ಕರೆ ನಾಡಿನಲ್ಲಿ ಮನೆಮಾಡಿದ ಮತ್ತೊಂದು ಆತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts