More

    ಗರ್ಭಿಣಿಯಿಂದ 3 ಜಿಲ್ಲೆಗಳಲ್ಲಿ ಆತಂಕ; ಏನೇನೆಲ್ಲ ಆಗಿದೆ ನೋಡಿ ಈಕೆಯಲ್ಲಿ ಸೋಂಕು ದೃಢವಾಗುವ ಮೊದಲು..

    ಬಾಗಲಕೋಟೆ: ಇಲ್ಲಿನ ಗರ್ಭಿಣಿಯೋರ್ವರಲ್ಲಿ ನಿನ್ನೆ ಕರೊನಾ ಸೋಂಕು ಕಾಣಿಸಿಕೊಂಡಿದೆ. ಆದರೆ ಈ ಪ್ರಕರಣ ಬಗೆದಷ್ಟೂ ಜಟಿಲವಾಗುತ್ತಿದೆ. ಈ ಸೋಂಕಿತ ಗರ್ಭಿಣಿಯಿಂದಾಗಿ ಮೂರು ಜಿಲ್ಲೆಗಳಲ್ಲಿ ಆತಂಕ ಶುರುವಾಗಿದೆ !

    ಈ ಗರ್ಭಿಣಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮದವರು. ಇಲ್ಲಿ ಇಂದು ಒಂದೇ ದಿನ 13 ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಇವರೆಲ್ಲರೂ ಸೋಂಕಿತ ಗರ್ಭಿಣಿಯ ಸಂಪರ್ಕಕ್ಕೆ ಬಂದವರು ಎನ್ನಲಾಗಿದೆ.

    ಇದನ್ನೂ ಓದಿ: ಈ 2 ಶ್ರೀಮಂತ ರಾಷ್ಟ್ರಗಳಲ್ಲಿ ಕರೊನಾ ಕೇಸ್​ ಹೆಚ್ಚಿದ್ರೂ ಮರಣ ಪ್ರಮಾಣ ಮಾತ್ರ ತುಂಬಾ ಕಡಿಮೆ ಏಕೆ?

    ಗರ್ಭಿಣಿ ಏ.27ರಂದು ಬಾಗಲಕೋಟೆಯ ಢಾಣಕಶಿರೂರ ಗ್ರಾಮದಿಂದ ತನ್ನ ತವರುಮನೆ ಗದಗ ಜಿಲ್ಲೆಯ ರೋಣ ತಾಲೂಕಿನ ಕೃಷ್ಣಾಪುರ ಗ್ರಾಮಕ್ಕೆ ಹೋಗಿದ್ದರು. ಏ.28ರಂದು ಆರೋಗ್ಯದಲ್ಲಿ ಏರುಪೇರಾಗಿತ್ತು. ಕೂಡಲೇ ರೋಣದ ಒಂದು ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿಂದ ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಾಗದು ಎಂದು ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಅಲ್ಲೂ ಗರ್ಭಿಣಿಗೆ ಚಿಕಿತ್ಸೆ ನೀಡುವುದು ಕಷ್ಟವಾದಾಗ ಹುಬ್ಬಳ್ಳಿಯ ಕಿಮ್ಸ್​ಗೆ ಸೇರಿಸಲಾಯಿತು.

    ಇಷ್ಟೆಲ್ಲ ಆಗಿ ಆಕೆ ಕಿಮ್ಸ್​​ನಲ್ಲಿ ಇರುವಾಗ, ಮೇ 3ರಂದು ಕರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಗರ್ಭಿಣಿಯಲ್ಲಿ ಸೋಂಕು ಪತ್ತೆಯಾಗುತ್ತಿದ್ದಂತೆ ಢಾಣಕಶಿರೂರ ಗ್ರಾಮದ ಒಟ್ಟು 128 ಮಂದಿಯನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿತ್ತು. ಅವರೆಲ್ಲರ ಗಂಟಲು ದ್ರವದ ಮಾದರಿಯನ್ನೂ ತಪಾಸಣೆಗೆ ಕಳಿಸಲಾಗಿದೆ. ಇದೀಗ 13 ಜನರ ತಪಾಸಣೆ ವರದಿ ಬಂದಿದ್ದು ಅವರೆಲ್ಲರಿಗೂ ಕರೊನಾ ಪಾಸಿಟಿವ್​ ಇದೆ. ಅಷ್ಟೂ ಜನರೂ ಈ ಗರ್ಭಿಣಿಯ ಸಂಪರ್ಕಕ್ಕೆ ಬಂದಿದ್ದವರೇ.

    ಇದನ್ನೂ ಓದಿ: ಒಬ್ಬನಿಂದ 13 ಮಂದಿ ಜೀವಹಿಂಡುತಿದೆ ಕರೊನಾ! ನಿಮ್ಮೂರಿಗೂ ಬಂದಿದ್ಯಾ? ಇಲ್ಲಿದೆ ವಿವರ

    ಗರ್ಭಿಣಿ ತವರು ಮನೆಗೆ ಹೋಗುವ ಮುನ್ನ ಢಾಣಕಶಿರೂರ ಗ್ರಾಮದಲ್ಲಿ ಹಲವು ಕುಟುಂಬಗಳು ಅವರನ್ನು ಊಟಕ್ಕೆ ಆಹ್ವಾನಿಸಿದ್ದರು. ಇದೇ ಹೀಗೆ ಸೋಂಕು ಹರಡಲು ಕಾರಣವಾಯಿತು ಎನ್ನಲಾಗಿದೆ.
    ಗದಗದಲ್ಲೂ ಭಯ

    ಇನ್ನು ಗರ್ಭಿಣಿಯ ತವರು ಮನೆ ಗದಗದ ಕೃಷ್ಣಾಪುರ ಗ್ರಾಮದಲ್ಲೂ ಕರೊನಾ ಭಯ ಪ್ರಾರಂಭವಾಗಿದೆ. ಅಷ್ಟೇ ಅಲ್ಲ ಧಾರವಾಡ ಆಸ್ಪತ್ರೆ, ರೋಣದ ಎರಡು ಆಸ್ಪತ್ರೆಯ ವೈದ್ಯರು, ನರ್ಸ್​ಗಳನ್ನೂ ಕ್ವಾರಂಟೈನ್​ಗೆ ಒಳಪಡಿಸಬೇಕು. ಈ ಗರ್ಭಿಣಿ ಬಂದು ಹೋದಮೇಲೆ ಅವರು ಇನ್ಯಾರಿಗೆ ಚಿಕಿತ್ಸೆ ನೀಡಿದ್ದಾರೆ ಎಂದು ಪರಿಶೀಲಿಸಿ ಅವರನ್ನೂ ತಪಾಸಣೆಗೆ ಒಳಪಡಿಸುವ ಅನಿವಾರ್ಯತೆ ಒದಗಿದೆ, (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಕಮಲ್ ಜಾಗಕ್ಕೆ ಬರ್ತಾರಂತೆ ವಿಜಯ್ ಸೇತುಪತಿ … ಕಾಲಿವುಡ್‌ನಲ್ಲೊಂದು ಬ್ರೇಕಿಂಗ್ ನ್ಯೂಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts