More

    ಒಬ್ಬನಿಂದ 13 ಮಂದಿ ಜೀವಹಿಂಡುತಿದೆ ಕರೊನಾ! ನಿಮ್ಮೂರಿಗೂ ಬಂದಿದ್ಯಾ? ಇಲ್ಲಿದೆ ವಿವರ

    ಬೆಂಗಳೂರು: ಒಬ್ಬ ಕರೊನಾ ಸೋಂಕಿತನ ಸಂಪರ್ಕಕ್ಕೆ ಬಂದಿರುವ 13 ಮಂದಿಗೆ ಬಾಗಲಕೋಟೆಯ ಬಾದಾಮಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ ಮೂವರು ಮಕ್ಕಳೂ ಸೇರಿದ್ದಾರೆ.

    ಒಬ್ಬ ಸೋಂಕಿತನ ಸಂಪರ್ಕಕ್ಕೆ ಬಂದಿರುವ ಬೆಂಗಳೂರುನಗರದ ಇಬ್ಬರಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರಲ್ಲಿ, ಬಂಟ್ವಾಳ ಹಾಗೂ ಕಲಬುರಗಿಯ ತಲಾ ಒಬ್ಬರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.

    ಇದನ್ನೂ ಓದಿ: ಕನಸಲ್ಲಿ ಶಿವ ಬಂದನೆಂದು ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಳ್ಳೋದೆ?

    ಬಾದಾಮಿಯಲ್ಲಿ ಕಂಡುಬಂದಿರುವ ಸೋಂಕಿತರ ಪೈಕಿ 40 ವರ್ಷ ವಯಸ್ಸಿಗಿಂತ ಕಡಿಮೆ ವಯೋಮಾನದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇವರಲ್ಲಿ 16 ವರ್ಷದ ಬಾಲಕಿ ಸೇರಿದಂತೆ ಐದು ಮಂದಿ ಸ್ತ್ರೀಯರು ಹಾಗೂ 10 ಮತ್ತು 15 ವರ್ಷದ ಬಾಲಕರು ಸೇರಿದಂತೆ ಎಂಟು ಮಂದಿ ಪುರುಷರಲ್ಲಿ ಸೋಂಕು ಕಾಣಿಸಿಕೊಂಡಿದೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ 16 ಮತ್ತು 11 ವರ್ಷದ ಹೆಣ್ಣುಮಕ್ಕಳು ಈ ಮಹಾಮಾರಿ ಪೀಡಿತರಾಗಿದ್ದಾರೆ.
    ಈ ಮೂಲಕ ರಾಜ್ಯದಲ್ಲಿ ಇಲ್ಲಿಯವರೆಗೆ ಕರೊನಾ ಸೋಂಕಿತರ ಸಂಖ್ಯೆ 692ಕ್ಕೆ ಏರಿದ್ದು, 345 ಮಂದಿ ಈಗಾಗಲೇ ಬಿಡುಗಡೆ ಹೊಂದಿದ್ದಾರೆ. ಈವರೆಗೆ ಕರೊನಾ 29 ಮಂದಿಯನ್ನು ಬಲಿ ಪಡೆದಿದೆ.

    ಇದನ್ನೂ ಓದಿ: ಎಣ್ಣೆ ಪ್ರಿಯರ ಈ ಗುಟ್ಟು ನಿಮಗೆ ಗೊತ್ತೆ? ಕೇಂದ್ರ ಸರ್ಕಾರ ಏನ್​ ಹೇಳಿದೆ ನೋಡಿ…

    ನಿಜಾಮುದ್ದೀನ್‌ ಮರ್ಕಜ್‌ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ಉಚಿತ ಆರೋಗ್ಯ ಸಹಾಯವಾಣಿ 080-29711171 ಸಂಪರ್ಕಿಸುವಂತೆ ಸರ್ಕಾರ ಸೂಚಿಸಿದೆ.

    ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.

    ಇದನ್ನೂ ಓದಿ: “ನಾವು ನಿಮ್ಮ ಮಕ್ಕಳು” ಪೋಸ್ಟರ್​ ನೋಡಿ ಅಜ್ಜ ಗಳಗಳನೆ ಅತ್ತದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts