More

    ಚೀನಿ ಯೋಧರ ಕೈಯಲ್ಲಿ ರಾಡ್, ಮಚ್ಚು, ಸುತ್ತಿಗೆ, ಬಡಿಗೆ: ಆಕ್ಷೇಪ ದಾಖಲಿಸಿದ ಭಾರತ

    ನವದೆಹಲಿ: ಚೀನಾ ಜತೆ ಬ್ರಿಗೇಡ್ ಕಮಾಂಡರ್ ಹಂತದ ಮಾತುಕತೆ ಮುಂದುವರಿದಿದ್ದು, ಚೀನಿ ಯೋಧರು ರಾಡ್, ಮಚ್ಚು, ಭರ್ಜಿ, ಮುಳ್ಳು ತಂತಿ ಸುತ್ತಿಗೆ, ಬಡಿಗೆಗಳನ್ನು ರೆಜ್ವಾಂಗ್ ಲಾ, ಮುಖ್ಪರಿ ಗಡಿ ಬಳಿಗೆ ತಂದು, ಗಾಳಿಯಲ್ಲಿ ಗುಂಡು ಹಾರಿಸಿ ಆಕ್ರಮಣಕಾರಿಯಾಗಿ ವರ್ತಿಸಿದ್ದರ ಬಗ್ಗೆ ಭಾರತ ಗುರುವಾರ ಆಕ್ಷೇಪ ದಾಖಲಿಸಿದೆ.

    ಸೋಮವಾರದ ಮುಖಾಮುಖಿ ನಂತರ ಈ ಮಾತುಕತೆಯಲ್ಲಿ ನಾಲ್ಕು ತಾಸು ಚರ್ಚೆ ನಡೆದಿದೆ. ಗುರುವಾರ ಕೂಡ ಚರ್ಚೆ ಮುಂದುವರಿಯಿತು ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ, ಪ್ಯಾಂಗಾಂಗ್ ತ್ಸೊ ಸರೋವರದ ದಕ್ಷಿಣ ದಂಡೆಯಲ್ಲಿ ಕಳೆದ ಸೋಮವಾರ ಒತ್ತುವರಿಗೆ ಪ್ರಯತ್ನಿಸಿ ವಿಲವಾಗಿದ್ದ ಚೀನಾ ಸೇನೆ, ಮಂಗಳವಾರ ಸಂಜೆ ಸರೋವರದಲ್ಲಿ ಮೋಟಾರ್ ಬೋಟ್ ಮೂಲಕ ಜಲಗಡಿ ಉಲ್ಲಂಸಲು ಯತ್ನಿಸಿತ್ತು ಎಂದು ತಿಳಿದುಬಂದಿದೆ. ಪ್ಯಾಂಗಾಂಗ್ ಸರೋವರದ ಪಶ್ಚಿಮ ದಂಡೆಯಿಂದ ಎರಡು ಮೋಟಾರ್ ಬೋಟ್‌ಗಳ ಮೂಲಕ ಸುಮಾರು 40 ಯೋಧರು ಭಾರತದ ಗಡಿಯತ್ತ ಧಾವಿಸಿದರು. ಆದರೆ, ಭಾರತೀಯ ಸೈನಿಕರು ಎದುರಾದ ಕಾರಣ ವಾಪಸ್ ಹೋದರು ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ವಾಹನದ ನಂಬರ್​ ಪ್ಲೇಟ್​ಗೆ ಕೆಸರು ಮೆತ್ತಿಕೊಂಡು 3 ಕೊಲೆ ಮಾಡಿದ್ದವರ ಬಂಧನ

    ಫಿಂಗರ್-3 ಗಸ್ತು ಪಾಯಿಂಟ್‌ನಲ್ಲಿ ಕಾವಲಿದ್ದ ಭಾರತೀಯ ಪಡೆಯು ಚೀನಾ ಯೋಧರು ಬೋಟ್‌ನಲ್ಲಿ ಬರುತ್ತಿರುವುದನ್ನು ಕಂಡು ಎಚ್ಚರಿಕೆಯ ಸಂದೇಶವನ್ನು ಗಡಿ ಚೌಕಿಗೆ ರವಾನಿಸಿತು. ಹೀಗಾಗಿ ಚೀನಾ ಪಡೆಗಳನ್ನು ಹಿಮ್ಮೆಟ್ಟಿಸಲು ಸಾಧ್ಯವಾಯಿತು ಎಂದು ಮೂಲಗಳು ಹೇಳಿವೆ.

    ಇದನ್ನೂ ಓದಿ: ಡ್ರಗ್ ಕೇಸ್: ಬಂಧಿತ ನಟಿಯರಿಗೆ ಚಿಕನ್ ಬಿರಿಯಾನಿ ಕೊಡಿಸಿದ ಪೊಲೀಸರು!

    ಇದಲ್ಲದೆ, ಪ್ಯಾಂಗಾಂಗ್ ತ್ಸೊ ಸರೋವರದ ಉತ್ತರ ದಂಡೆಯ ಫಿಂಗರ್ಸ್‌-4 ಗಸ್ತು ಪಾಯಿಂಟ್ ಬಳಿಯ ಹಲವು ಎತ್ತರದ ದಿಣ್ಣೆಗಳನ್ನು ಭಾರತೀಯ ಸೇನೆ ವಶಕ್ಕೆ ಪಡೆದುಕೊಂಡಿದೆ. ಆದರೂ ಚೀನಾ ಪಡೆಗಳು ಫಿಂಗರ್- 4ರ ಎಲ್‌ಎಸಿ ಬಳಿ ಈಗಲೂ ಇವೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಚಿನ್ನದ ತೊಟ್ಟಿಲಿನಲ್ಲಿ ಕೃಷ್ಣ: ಈಶಪ್ರಿಯ ತೀರ್ಥರಿಂದ ಲಕ್ಷ ತುಳಸಿ ಅರ್ಚನೆ

    ಬುಧವಾರ ಸಂಜೆ ಬೆಳವಣಿಗೆಗೆ ಹೋಲಿಸಿದರೆ ಫಿಂಗರ್-4ರಲ್ಲಿ ಭಾರತ ಕೊಂಚ ಮುನ್ನಡೆ ಸಾಧಿಸಿದೆ ಎನ್ನಲಾಗಿದೆ. ಪ್ಯಾಂಗಾಂಗ್ ಸರೋವರದ ಉತ್ತರ ದಂಡೆಯಲ್ಲಿ 8 ಫಿಂಗರ್ ಪಾಯಿಂಟ್‌ಗಳು ಭಾರತೀಯ ಸೇನೆಯ ಗಸ್ತು ಪ್ರದೇಶ. ಆದರೆ, ಕಳೆದ ಏಪ್ರಿಲ್ ಕಡೆಯ ವಾರದವರೆಗೆ ಸೇನೆಯು ಫಿಂಗರ್-4ರ ಆಚೆಗೆ ಗಸ್ತು ನಡೆಸಿರಲಿಲ್ಲ. ಪರಿಸ್ಥಿತಿಯ ಲಾಭ ಪಡೆದ ಚೀನಾ ಫಿಂಗರ್-5ರವರೆಗೂ ಸೇನಾ ಜಮಾವಣೆ, ಅನೇಕ ಕಾಮಗಾರಿಯನ್ನು ಮಾಡಿಕೊಂಡಿದೆ. ಮೇ ಮೊದಲ ವಾರದಲ್ಲಿ ಭಾರತದ ಸೇನೆ ಮತ್ತೆ ಗಸ್ತು ಹೊರಟಾಗ ಚೀನಾ ಸೇನೆ ಜತೆಗೆ ಘರ್ಷಣೆ ನಡೆದಿತ್ತು.

    ಇದನ್ನೂ ಓದಿ: VIDEO: ಪಾರ್ಕ್​​ಗಳು ಮತ್ತೆ ತೆರೆದ ಖುಷಿಯಲ್ಲಿ ಪರಮಾವಧಿ ಮೂರ್ಖತನ ತೋರಿದ ಸಾರ್ವಜನಿಕರು

    ಸೇನಾ ಲಾಜಿಸ್ಟಿಕ್ ಬಳಕೆಗೆ ಜಪಾನ್ ಜತೆ ಒಪ್ಪಂದ: ಈ ನಡುವೆ, ಸೇನಾ ಸೌಕರ್ಯ, ಸಾಗಣೆ ವ್ಯವಸ್ಥೆ (ಲಾಜಿಸ್ಟಿಕ್) ಬಳಕೆ ಸಂಬಂಧ ಭಾರತ ಮತ್ತು ಜಪಾನ್ ಒಪ್ಪಂದ ಮಾಡಿಕೊಂಡಿವೆ. ಚೀನಾವನ್ನು ದ್ವೇಷಿಸುವ ಜಪಾನ್ ಜತೆಗೆ ಹಿಂದು ಮಹಾಸಾಗರ ಮತ್ತು ಶಾಂತ ಸಾಗರದಲ್ಲಿ ಸೇನಾ ಸೌಕರ್ಯ ಬಳಕೆಯ ಒಡಂಬಡಿಕೆಗೆ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಮತ್ತು ನವದೆಹಲಿಯಲ್ಲಿರುವ ಜಪಾನ್ ರಾಯಭಾರಿ ಸುಜುಕಿ ಸಟೋಶಿ ಸಹಿ ಹಾಕಿದ್ದಾರೆ. ಈ ಒಪ್ಪಂದದ ಪ್ರಕಾರ, ಉಭಯ ರಾಷ್ಟ್ರಗಳು ಗುರುತಿಸಿದ ಪರಿಧಿಯಲ್ಲಿ ಸೇನಾ ಸೌರ್ಕಯಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಉಭಯ ದೇಶಗಳ ತರಬೇತಿ ಕಾರ್ಯಕ್ರಮ, ಸಾಮಗ್ರಿ ಮತ್ತು ಸೇವೆ ಹಂಚಿಕೆ ಕುರಿತೂ ಒಪ್ಪಂದವಾಗಿದೆ. ಜಪಾನ್ ಪ್ರಧಾನಿ ಶಿಂಜೊ ಅಬೆ ಜತೆಗೆ ಪ್ರಧಾನಿ ಮೋದಿ ದೂರವಾಣಿ ಮೂಲಕ ಮಾತುಕತೆ ನಡೆಸಿದರು.

    ಪಬ್‌ಜಿ ಆಡಬೇಡ ಎಂದಿದ್ದಕ್ಕೆ ಈ ಹುಡುಗ ಹೀಗೆ ಮಾಡೋದಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts