ಕರೊನಾ ಲಾಕ್ಡೌನ್ ಶುರುವಾದಾಗ ಬೇರೆಡೆಗಳಲ್ಲಿ ಇದ್ದವರೆಲ್ಲ ಆತುರಾತುರವಾಗಿ ತಮ್ಮ ತಮ್ಮ ಊರುಗಳಿಗೆ ತೆರಳಿದ್ದರು. ಅಂತೆಯೇ, ಉತ್ತರ ಲಂಡನ್ ಎನ್ಫೀಲ್ಡ್ನಲ್ಲಿ ನೆಲೆಸಿದ್ದ ವಿದ್ಯಾರ್ಥಿ ಕೂಡ ಪಾಲಕರ ಒತ್ತಾಯದ ಮೇರೆಗೆ ಊರಿಗೆ ಹೋಗಿದ್ದ. ಆದರೆ ಐದು ತಿಂಗಳ ಬಳಿಕ ಶಾಕ್ ಆಗುವ ಸರದಿ ಆತನದ್ದಾಗಿತ್ತು.
ಒಲುವಜಾರ್ಜ್ ಜಾನ್ಸನ್ 20 ವರ್ಷದ ವಿದ್ಯಾರ್ಥಿಯಾಗಿದ್ದು, ಫ್ಲ್ಯಾಟ್ವೊಂದರಲ್ಲಿ ನೆಲೆಸಿದ್ದ. ಕರೊನಾ ಸಂಕಷ್ಟದಿಂದ ಕಾಲೇಜು ಬಂದ್ ಆದ ಕಾರಣ ಮನೆಯವರ ಒತ್ತಾಯದ ಮೇರೆಗೆ ಆತುರಾತುರವಾಗಿ ಊರಿಗೆ ಹೋಗಿದ್ದ. ಫ್ಲ್ಯಾಟ್ನಲ್ಲಿ ಕೆಲ ವಸ್ತುಗಳನ್ನು ಬಿಟ್ಟು ಹೋಗಿದ್ದ. ಆತ ಮಾಡಿದ ಎಡವಟ್ಟೆಂದರೆ ಕಿಟಕಿಯೊಂದನ್ನು ತೆರೆದಿಟ್ಟು ಹೋಗಿದ್ದ.
ಇದನ್ನೂ ಓದಿ; ಪ್ರಧಾನಿ ನರೇಂದ್ರ ಮೋದಿ ಈವರೆಗೆ ನೀಡಿದ ದೇಣಿಗೆ ಎಷ್ಟು ಗೊತ್ತೆ? 103 ಕೋಟಿ ರೂ….; ಹೀಗಿದೆ ಲೆಕ್ಕಾಚಾರ…!
ಇದಾಗಿ ಐದು ತಿಂಗಳ ಬಳಿಕ ಕಟ್ಟಡವನ್ನು ನೋಡಿಕೊಳ್ಳುತ್ತಿದ್ದವರು ಆತನಿಗೆ ಇ-ಮೇಲ್ ಮೂಲಕ ಆತನ ಫ್ಲ್ಯಾಟ್ನ ಕೆಲ ಫೋಟೋಗಳನ್ನು ಕಳುಹಿಸಿದ್ದರು. ಅದನ್ನು ನೋಡಿ ಜಾನ್ಸನ್ಗೆ ಶಾಕ್ ಆಗಿತ್ತು. ತೆರೆದಿದ್ದ ಕಿಟಕಿಯ ಮೂಲಕ ಪಾರಿವಾಳಗಳ ಹಿಂಡು ನುಗ್ಗಿ ಇಡೀ ಫ್ಲ್ಯಾಟ್ ಆವರಿಸಿಕೊಂಡಿದ್ದವು. ಮನೆಯ ತುಂಬೆಲ್ಲ ಹಿಕ್ಕೆಗಳ ದಪ್ಪ ಪದರವೇ ಉಂಟಾಗಿತ್ತು.
ಇಷ್ಟೇ ಅಲ್ಲ, ಸಿಂಕ್ನಲ್ಲಿ ಪಾರಿವಾಳದ ಕೆಲ ಮೊಟ್ಟೆಗಳಿದ್ದವು. ಫರ್ನಿಚರ್ ಸೇರಿ ಅಲ್ಲಿದ್ದ ವಸ್ತುಗಳ ಮೇಲೆಲ್ಲ ಹಿಕ್ಕೆ ತುಂಬಿಕೊಂಡಿತ್ತು. ಪಾರಿವಾಳದ ಪುಕ್ಕಗಳು, ಕಸ-ಕಡ್ಡಿ ತುಂಬಿಕೊಂಡಿತ್ತು.
ಇದನ್ನೂ ಓದಿ; ಒಂದೇ ಢಾಬಾದ 65 ಸಿಬ್ಬಂದಿಗೆ ಕರೊನಾ ಸೋಂಕು….! ಸೂಪರ್ಸ್ಪ್ರೆಡರ್ ಆಗುವ ಆತಂಕ
ಫ್ಲ್ಯಾಟ್ನಲ್ಲಿ ವಿಚಿತ್ರ ಶಬ್ಧ ಉಂಟಾಗುತ್ತಿದ್ದರಿಂದ ಅದನ್ನು ಪರಿಶೀಲಿಸಲೆಂದು ಬಾಗಿಲು ತೆರೆದಾಗ ಉಂಟಾಗಿದ್ದ ಅವಾಂತರ ಬೆಳಕಿಗೆ ಬಂದಿದೆ. ಕೂಡಲೇ ಫ್ಲ್ಯಾಟ್ಗೆ ತೆರಳಬೇಕೆಂದಿದ್ದೆ. ಅದರ ಸ್ಥಿತಿ ನೋಡಿ ಶಾಕ್ ಆಗಿದೆ. ಅದನ್ನು ಸ್ವಚ್ಛಗೊಳಿಸುವವರೆಗೂ ಕಾಯ್ದು ಇನ್ನೊಂದು ವಾರದ ಬಳಿಕ ಹೋಗುತ್ತೇನೆ ಎಂದು ಜಾನ್ಸನ್ ಹೇಳಿದ್ದಾನೆ. ಇನ್ನೊಂದು ಪ್ರಕರಣದಲ್ಲಿ ಮೂರು ತಿಂಗಳ ಬಳಿಕ ಮನೆಗೆ ಬಂದಿದ್ದ ಯುವತಿಗೆ ಮನೆಯ ತುಂಬೆಲ್ಲ ಆಲೂಗಡ್ಡೆ ಬೆಳೆದುಕೊಂಡಿದ್ದನ್ನು ನೋಡಿ ಅಚ್ಚರಿಗೆ ಒಳಗಾಗಿದ್ದಳು.
ಗ್ರಾಹಕರ ಬ್ಯಾಂಕ್ ಖಾತೆಗೆ ಬರಲ್ಲ ಎಲ್ಪಿಜಿ ಸಬ್ಸಿಡಿ ಹಣ; ಕಾರಣವೇನು ಗೊತ್ತೆ?