More

  ಕೆಂಪುಕಲ್ಲು ವ್ಯವಹಾರ ಸಮಸ್ಯೆಗೆ ಶಾಶ್ವತ ಪರಿಹಾರ

  ವಿಜಯವಾಣಿ ಸುದ್ದಿಜಾಲ ಉಳ್ಳಾಲ

  ಮಾಲೀಕರಿಗೆ ಎಷ್ಟು ಪಾಯ, ಲಾರಿಗಳು ಇದೆ, ವ್ಯವಹಾರ ಎಷ್ಟಿದೆ ಎನ್ನುವುದಕ್ಕಿಂತ ಒಗ್ಗಟ್ಟು ಎಷ್ಟಿದೆ ಎನ್ನುವುದು ಮುಖ್ಯ. ರಾಜ್ಯ ಮಟ್ಟಕ್ಕೆ ರೂಪಿಸುವ ನಿಯಮ ಎಲ್ಲ ಜಿಲ್ಲೆಗಳಿಗೆ ಹೊಂದಾಣಿಕೆ ಆಗುವುದಿಲ್ಲ. ಈ ನಿಟ್ಟಿನಲ್ಲಿ ಕೆಂಪುಕಲ್ಲು ವ್ಯವಹಾರದಲ್ಲಿರುವ ಸಮಸ್ಯೆಗಳ ಬಗ್ಗೆ ಸರ್ಕಾರ, ರಾಜ್ಯಮಟ್ಟದ ಅಧಿಕಾರಿಗಳ ಮುಂದೆ ಚರ್ಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.

  ದ.ಕ.ಜಿಲ್ಲಾ ಕೆಂಪುಕಲ್ಲು ಪಾಯ ಮತ್ತು ಲಾರಿ ಮಾಲೀಕರ ಒಕ್ಕೂಟ ಮುಡಿಪು ವಲಯ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಶಕ್ತ ಕುಟುಂಬದ ಚಿಕಿತ್ಸೆಗೆ ಸಹಾಯ ಧನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

  ಡಾ.ನರೇಂದ್ರ ಕೆ. ಅವರನ್ನು ಸನ್ಮಾನಿಸಲಾಯಿತು. ಕೆಂಪುಕಲ್ಲು ಪಾಯ ಮತ್ತು ಲಾರಿ ಮಾಲೀಕರ ಒಕ್ಕೂಟ ಜಿಲ್ಲಾಧ್ಯಕ್ಷ ಸತೀಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

  ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ, ಪಜೀರ್ ಗ್ರಾಪಂ ಅಧ್ಯಕ್ಷ ರಫೀಕ್ ಪಜೀರ್, ಕಂಬಳಪದವು ಶ್ರೀ ದುರ್ಗಾಕಾಳಿ ದೇವಸ್ಥಾನದ ಅಧ್ಯಕ್ಷ ಜಯಂತ್ ಶೆಟ್ಟಿ ದೊಡ್ಡಮನೆ, ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕೂವೆತ್ತಬೈಲ್, ಮಂಜೇಶ್ವರ ವಲಯ ಪ್ರದಾನ ಕಾರ್ಯದರ್ಶಿ ಹರೀಶ್ ಶೆಟ್ಟಿ, ವಿಟ್ಲ ವಲಯ ಅಧ್ಯಕ್ಷ ರಮೇಶ್, ಬಂಟ್ವಾಳ ವಲಯ ಅಧ್ಯಕ್ಷ ಮೋಹನ್ ಶೆಟ್ಟಿ, ಪುತ್ತೂರು ವಲಯ ಅಧ್ಯಕ್ಷ ಹೇಮಚಂದ್ರ ಮುರಾ, ಜಿಲ್ಲಾ ಕೋಶಾಧಿಕಾರಿ ರಾಮಣ್ಣ ಮುಗರೋಡಿ, ವಿಟ್ಲ ವಲಯ ಮಾಜಿ ಅಧ್ಯಕ್ಷ ಸುನೀಲ್ ಕುಮಾರ್, ಮುಡಿಪು ವಲಯ ಅಧ್ಯಕ್ಷ ವಿಶ್ವನಾಥ ರೈ ಕುಂಜತ್ತೂರು, ವಲಯ ಕೋಶಾಧಿಕಾರಿ ಗಿಲ್ಬರ್ಟ್ ಮಾರ್ಷಲ್ ಡಿಸೋಜ, ಕಾಸರಗೋಡು ವಲಯ ಅಧ್ಯಕ್ಷ ನಿಝಾಮುದ್ದೀನ್ ಸೆರ್ಕಳ, ಜೆಸಿಬಿ ಮಾಲಕರ ಸಂಘದ ಉಪಾಧ್ಯಕ್ಷ ರಂಜಿತ್ ರೈ ಉಪಸ್ಥಿತರಿದ್ದರು.

  ವಲಯ ಉಪಾಧ್ಯಕ್ಷ ಹೈದರ್ ಕೈರಂಗಳ ಸ್ವಾಗತಿಸಿ, ವಲಯ ಪ್ರದಾನ ಕಾರ್ಯದರ್ಶಿ ಕಮರುದ್ದೀನ್ ಮೂಳೂರು ಪ್ರಾಸ್ತಾವಿಕ ಮಾತನಾಡಿದರು. ಪ್ರೇಮಾನಂದ ಶೆಟ್ಟಿ ವಂದಿಸಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ರವಿ ರೈ ಪಜೀರ್ ಕಾರ್ಯಕ್ರಮ ನಿರೂಪಿಸಿದರು.

  ಕೆಂಪುಕಲ್ಲು ವ್ಯವಹಾರ ಉದ್ಯಮವಲ್ಲ, ಇದೊಂದು ರೀತಿಯಲ್ಲಿ ಭತ್ತ ಕೃಷಿ ಇದ್ದಂತೆ. ಕೆಂಪು ಕಲ್ಲು ಉದ್ಯಮಕ್ಕೆ ಭದ್ರತೆ ಇಲ್ಲದಿರುವುದೂ ಸಾಕಷ್ಟು ಸಮಸ್ಯೆಗೆ ಕಾರಣ. ಈ ವ್ಯವಹಾರಕ್ಕೆ ಭದ್ರತೆ ಜತೆ ಸಂಘಟನೆ ಮೂಲಕ ಸ್ಪರ್ಧಾತ್ಮಕ ದರ ನಿಗದಿ ಅನಿವಾರ್ಯ.

  -ಪ್ರಶಾಂತ ಕಾಜವ ಮಿತ್ತಕೋಡಿ
  ಅಧ್ಯಕ್ಷ, ಮುಡಿಪು ಬ್ಲಾಕ್ ಕಾಂಗ್ರೆಸ್

  ಕೆಂಪುಕಲ್ಲು ಗಣಿಗಾರಿಕೆ ವ್ಯಾಪ್ತಿಗೆ ಬರುವುದಿಲ್ಲ, ಇದು ಕೆಂಪು ಇಟ್ಟಿಗೆಯಾಗಿದ್ದು ಗಣಿಗಾರಿಕೆಯಿಂದ ಹೊರಗಿಡಬೇಕೆನ್ನುವ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿದರೂ ನಿರೀಕ್ಷಿತ ಫಲ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಸಂಘಟನೆ ಇನ್ನಷ್ಟು ಬಲಪಡಿಸುವ ಅಗತ್ಯವಿದೆ. ವಿಜಯವಾಣಿ ಪತ್ರಿಕೆ ಕೆಂಪು ಕಲ್ಲು ಕ್ವಾರಿಗಳ ಸಮಸ್ಯೆಗೆ ಸ್ಪಂದನೆ ನೀಡಿದೆ.

  -ಸತೀಶ್ ಆಚಾರ್ಯ
  ಜಿಲ್ಲಾಧ್ಯಕ್ಷ, ಕೆಂಪುಕಲ್ಲು ಪಾಯ ಮತ್ತು ಲಾರಿ ಮಾಲೀಕರ ಒಕ್ಕೂಟ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts