More

    ಕರ್ನಾಟಕ ರಾಜ್ಯ ಮನಪಾ ನಿವೃತ್ತ ನೌಕರರ ಸಂಘಗಳ ಒಕ್ಕೂಟ ಸಭೆವಿವಿಧ ಬೇಡಿಕೆ ಮಂಡಿಸಲು ನಿರ್ಣಯ, ರಾಜ್ಯ ಸಮಾವೇಶಕ್ಕೆ ನಿರ್ಧಾರ

    ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ನಿವೃತ್ತ ನೌಕರರ ಸಂಘದ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನಿವೃತ್ತ ನೌಕರರ ಸಂಘಗಳ ಒಕ್ಕೂಟದ ಸಭೆಯು ರಾಜ್ಯಾಧ್ಯಕ್ಷ ವೀರಭದ್ರ ಸಿಂಪಿ ಅವರ ಅಧ್ಯಕ್ಷತೆಯಲ್ಲಿ ನಗರದ ಖಾಸಗಿ ಸಭಾಂಗಣದಲ್ಲಿ ಭಾನುವಾರ ಜರಗಿತು.


    ರಾಜ್ಯಾಧ್ಯಕ್ಷ ವೀರಭದ್ರ ಸಿಂಪಿ ಸಭೆ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರಿ ನೌಕರರರಲ್ಲಿ ಇಲಾಖಾವಾರು ಭೇದಭಾವ ಸರಿಯಲ್ಲ. ಮಹಾನಗರ ಪಾಲಿಕೆಯ ನೌಕರರೂ ಕೂಡ ಸರ್ಕಾರಿ ನೌಕರರಾಗಿದ್ದಾರೆ. ನಗರದ ಸ್ವಚ್ಚತೆ, ಆರೋಗ್ಯ ರಕ್ಷಣೆಯ ಜತೆಗೆ ಜನರ ಜತೆ ದೈನಂದಿನ ಚಟುವಟಿಕೆಯಲ್ಲಿ ಸದಾ ಬೆರೆತು ಕೆಲಸ ಮಾಡುವವರು. ಇಂತಹ ಪ್ರಮುಖ ನೌಕರರ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು. ನಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಒಗ್ಗಟ್ಟಿನ ಹೋರಾಟದ ಮೂಲಕ ಹೋದರೆ ಯಶಸ್ಸು ಸಾಧ್ಯ ಎಂದರು.


    ಕೆಸಿಎಸ್‌ಆರ್ ನಿಯಮದನ್ವಯ ಪಿಂಚಣಿಯ ಎಲ್ಲಾ ಸವಲತ್ತುಗಳನ್ನು ರಾಜ್ಯದ ಮನಪಾ ನಿವೃತ್ತ ನೌಕರರಿಗೆ 7-8 ವರ್ಷವಾದರು ನೀಡದಿರುವುದನ್ನು ಖಂಡಿಸಿ ಸರ್ಕಾರಿ ನಿವೃತ್ತ ನೌಕರರಿಗೆ ನೀಡಿದಂತೆ ನಮಗೂ ನೀಡಿ ತಾರತಮ್ಯ ತಪ್ಪಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಿ ನಿರ್ಣಯಿಸಿ ಸರ್ಕಾರದ ಗಮನಕ್ಕೆ ತರಲು ನಿರ್ಧರಿಸಲಾಯಿತು.


    ರಾಜ್ಯ ಸಂಘದ ನೋಂದಣಿ ನಿಯಮಗಳ ಕರಡು ಪ್ರತಿಯ ಉಪಸಮಿತಿ ತೀರ್ಮಾನಿಸಿದ ನಡಾವಳಿ ಮಂಡನೆ, ರಾಜ್ಯ ಮಹಾನಗರ ಪಾಲಿಕೆಯ ನಿವೃತ್ತ ನೌಕರರ ರಾಜ್ಯ ಮಟ್ಟದ ಪ್ರಥಮ ಸಮ್ಮೇಳನ ನಡೆಸುವ ಕುರಿತು ನಿರ್ಣಯಿಸಿತು,ಬೆಂಗಳೂರಿನಲ್ಲಿ ರಾಜ್ಯ ಸಂಘದ ಕಚೇರಿ ಸ್ಥಾಪನೆ,ಮಂಗಳೂರು ಪಾಲಿಕೆ ನಿವೃತ್ತ ನೌಕರರ ಸಂಘದ ಮತ್ತು ಸದಸ್ಯರ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚಿಸಿ, ಪರಿಹಾರಕ್ಕೆ ಯೋಜನೆ ರೂಪಿಸಲಾಯಿತು.


    ನಿವೃತ್ತ ನೌಕರರ ಬೇಡಿಕೆಯನ್ನು ಸರ್ಕಾರದ ಮಟ್ಟದಲ್ಲಿ ಇಟ್ಟು ನೆರವೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಿಂಪಿ ಅವರನ್ನು ಸನ್ಮಾನಿಸಲಾಯಿತು.
    ಮನಪಾ ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷ ಜಗನ್ನಾಥ ಶೆಟ್ಟಿ, ಅಧ್ಯಕ್ಷರಾದ ಎ.ಪದ್ಮನಾಭ, ಪ್ರಧಾನ ಕಾರ್ಯದರ್ಶಿ ಚಿನ್ನಪ್ಪ ಮೂಲ್ಯ, ಜತೆ ಕಾರ್ಯದರ್ಶಿ ಶಿವಣ್ಣ ನಾಯಕ್,ಕೋಶಾಧಿಕಾರಿ ಟಿ.ರಘುರಾಮ ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು. ಮಂಗಳೂರು ಪಾಲಿಕೆ ಕಾರ್ಯದರ್ಶಿ ಶಿವಣ್ಣ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts