More

    ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಉಗ್ರನ ಬಳಿ ಪತ್ತೆಯಾಯ್ತು ಹೊಸ ಮಾದರಿಯ ಬಾಂಬ್​!

    ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಹೊಸ ರೀತಿಯ ಬಾಂಬ್​ ವಶಪಡಿಸಿಕೊಳ್ಳಲಾಗಿದ್ದು ಅದು ಪಕ್ಕಾ ಸುಗಂಧದ್ರವ್ಯದ ರೂಪದಲ್ಲಿ ಇದೆ. ಆದರೆ ವಿಷೇಶ ಇರುವುದು ಕೇವಲ ಈ ಬಾಂಬ್​ನಲ್ಲಿ ಮಾತ್ರವಲ್ಲ, ಇದನ್ನು ಹೊಂದಿದ್ದ ಉಗ್ರನೂ ವಿಶೇಷ ವ್ಯಕ್ತಿಯೇ. ಆತ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ!

    ಪೊಲೀಸ್ ಮುಖ್ಯಸ್ಥರು ಕೇಂದ್ರಾಡಳಿತ ಪ್ರದೇಶದಲ್ಲಿ ಇಂತಹ ಬಾಂಬ್ ವಶಪಡಿಸಿಕೊಂಡಿರುವುದು ಇದೇ ಮೊದಲು ಎಂದು ಹೇಳಿದ್ದಾರೆ. ವೈಷ್ಣೋದೇವಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್‌ನಲ್ಲಿ ಸ್ಫೋಟ ಸೇರಿದಂತೆ ಹಲವು ಸ್ಫೋಟಗಳನ್ನು ನಡೆಸಿದ ಆರೋಪದ ಮೇಲೆ ಸರ್ಕಾರಿ ಶಾಲೆಯ ಶಿಕ್ಷಕ-ಭಯೋತ್ಪಾದಕನನ್ನು ಬಂಧಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಗುರುವಾರ ತಿಳಿಸಿದ್ದಾರೆ.

    ಜಮ್ಮುವಿನ ನರ್ವಾಲ್‌ನಲ್ಲಿ ಇತ್ತೀಚೆಗೆ ನಡೆದ ಅವಳಿ ಸ್ಫೋಟದ ತನಿಖೆಯ ನಂತರ ರಿಯಾಸಿ ಜಿಲ್ಲೆಯ ನಿವಾಸಿ ಆರಿಫ್ ಅವರನ್ನು ಬಂಧಿಸಲಾಗಿದ್ದು, ಒಂಬತ್ತು ಜನರು ಗಾಯಗೊಂಡಿದ್ದಾರೆ. ಈತನ ಬಂಧನದ ಸಂದರ್ಭದಲ್ಲಿ ಈತ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಎನ್ನುವುದನ್ನು ತಿಳಿದಾಗ ಎಲ್ಲರೂ ದಂಗಾಗಿದ್ದಾರೆ

    ಬಂಧಿತ ಆರಿಫ್, ತನ್ನ ಪಾಕಿಸ್ತಾನಿ ಹ್ಯಾಂಡ್ಲರ್‌ಗಳ ಇಚ್ಛೆಯ ಮೇರೆಗೆ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವರ್ಷ ನಾಲ್ವರನ್ನು ಬಲಿತೆಗೆದುಕೊಂಡ ವೈಷ್ಣೋದೇವಿ ಯಾತ್ರಿಕರ ಬಸ್ ಬ್ಲಾಸ್ಟ್​, ಫೆಬ್ರವರಿ 2022ರಲ್ಲಿ ಜಮ್ಮುವಿನ ಶಾಸ್ತ್ರಿನಗರ ಪ್ರದೇಶದಲ್ಲಿ ಐಇಡಿ ಸ್ಫೋಟ, ಜನವರಿ 21 ರಂದು ನರ್ವಾಲ್‌ನಲ್ಲಿ ಅವಳಿ ಸ್ಫೋಟದಲ್ಲಿ ಆರಿಫ್ ಭಾಗಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    “ಜನವರಿ 20 ರಂದು ಎರಡು ಬಾಂಬ್‌ಗಳನ್ನು ಪ್ಲಾಂಟ್​ ಮಾಡಲಾಯಿತು. ಜನವರಿ 21 ರಂದು 20 ನಿಮಿಷಗಳ ಅಂತರದಲ್ಲಿ ಸಾಧ್ಯವಾದಷ್ಟು ಜನರನ್ನು ಕೊಲ್ಲಲು ಎರಡು ಸ್ಫೋಟಗಳು ಸಂಭವಿಸಿದವು. ಮೊದಲ IED ಸ್ಫೋಟದ ನಂತರ ಒಂಬತ್ತು ಜನರು ಗಾಯಗೊಂಡರು. ಮೂರು ವರ್ಷಗಳಿಂದ ಪಾಕಿಸ್ತಾನದ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದ ಆರಿಫ್‌ನನ್ನು ಪೊಲೀಸರು ಬಂಧಿಸಿದ್ದಾರೆ.

    ತನಿಖೆಯ ವೇಳೆ ಜಮ್ಮು ಪೊಲೀಸರು ಆರಿಫ್‌ನಿಂದ ಸುಗಂಧ ದ್ರವ್ಯದ ಐಇಡಿಯನ್ನು ವಶಪಡಿಸಿಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥರು ಕೇಂದ್ರಾಡಳಿತ ಪ್ರದೇಶದಲ್ಲಿ ಇಂತಹ ಬಾಂಬ್ ವಶಪಡಿಸಿಕೊಂಡಿರುವುದು ಇದೇ ಮೊದಲು ಎಂದು ಹೇಳಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts