More

    ಪರೀಕ್ಷಾ ​ಕೊಠಡಿಯಲ್ಲಿ 500 ಜನ ಹುಡುಗಿಯರನ್ನು ಕಂಡು ಮೂರ್ಛೆ ಹೋದ ಯುವಕ!

    ಬಿಹಾರ: ಜನರಿಂದ ತುಂಬಿರುವ ಸಭೆಯಲ್ಲಿ ಮಾತನಾಡುವುದು, ಕಿಕ್ಕಿರಿದ ಸಭೆಯ ನಡುವೆ ನಡೆದಾಡುವುದು, ಇಂತಹ ಕೆಲಸಗಳನ್ನು ಮಾಡುವುದು ಸೋಷಿಯಲ್​ ಆ್ಯಂಕ್ಸೈಟಿ ಅಥವಾ ಸಾಮಾಜಿಕ ಆಂಕ ಹೊಂದಿರುವವರಿಗೆ ದೊಡ್ಡ ವಿಚಾರವೇ. ಈ ನಮ್ಮ ವಿದ್ಯಾರ್ಥಿಗೂ ಬಹುಶಃ ಅಂತಹದ್ದೇ ಪರಿಸ್ಥಿತಿ ಎದುರಾಗಿತ್ತು ಎಂದು ಕಾಣುತ್ತದೆ. ಬಿಹಾರದ ಬೋರ್ಡ್​ ಪರೀಕ್ಷೆ ಬರೆಯಲು ಈ ಹದಿಹರೆಯದ ಯುವಕ ನಳಂದಾ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ. ಕೊಠಡಿಯಲ್ಲಿ ಬರೋಬ್ಬರಿ 500 ಜನ ಹೆಣ್ಣು ಮಕ್ಕಳು ಪರೀಕ್ಷೆ ಬರೆಯಲು ಬಂದಿದ್ದು ಒಬ್ಬನೇ ಒಬ್ಬ ಹುಡುಗನೂ ಇಲ್ಲದ್ದನ್ನು ಕಂಡು ಈತ ಮೂರ್ಛೆ ಹೋಗಿದ್ದಾನೆ.

    ಅಲ್ಲಮ ಇಕ್ಬಾಲ್ ಕಾಲೇಜಿನ 17 ವರ್ಷದ ಮನೀಶ್ ಶಂಕರ್ ಪ್ರಸಾದ್, ಸುಂದರ್‌ಗಢ್‌ನ ಬ್ರಿಲಿಯಂಟ್ ಕನ್ವೆನ್ಷನ್ ಸ್ಕೂಲ್‌ನಲ್ಲಿ ಬುಧವಾರ ಗಣಿತ ಪರೀಕ್ಷೆ ಬರೆಯುತ್ತಿದ್ದಾಗ 500 ಜನರಿಂದ ಸುತ್ತುವರಿದಿರುವ “ಏಕೈಕ ಹುಡುಗ” ಎಂದು ತಿಳಿದು ಮೂರ್ಛೆ ಹೋಗಿದ್ದಾನೆ.

    “ಆತ ಪರೀಕ್ಷಾ ಕೇಂದ್ರದಲ್ಲಿ ಸುಮಾರು 500 ಹುಡುಗಿಯರ ನಡುವೆ ಏಕಾಂಗಿಯಾಗಿ ಪರೀಕ್ಷೆ ಬರೆಯುತ್ತಿದ್ದ. ಇದರಿಂದಾಗಿ ಆತ ಮೂರ್ಛೆ ತಪ್ಪಿದ್ದು ಜ್ವರಕ್ಕೆ ತುತ್ತಾಗಿದ್ದಾನೆ” ಎಂದು ಯುವಕ ಪ್ರಸಾದನ ಚಿಕ್ಕಮ್ಮ ವಿವರಿಸಿದ್ದಾರೆ. ಈತನನ್ನು ತಕ್ಷಣ ಆಂಬ್ಯುಲೆನ್ಸ್ ಮೂಲಕ ವೈದ್ಯಕೀಯ ಮೌಲ್ಯಮಾಪನಕ್ಕಾಗಿ ಸದರ್ ಆಸ್ಪತ್ರೆಗೆ ಕರೆತರಲಾಯಿತು. ಟ್ವಿಟರ್‌ನಲ್ಲಿ ವೈರಲ್ ಆದ ವೀಡಿಯೊದಲ್ಲಿ ವಿದ್ಯಾರ್ಥಿಯು ಚೇತರಿಸಿಕೊಳ್ಳುತ್ತಿರುವುದನ್ನು ತೋರಿಸಲಾಗಿದೆ. ಯುವಕ ಪ್ರಸಾದ್​ನ ತಂದೆ ಸಚ್ಚಿದಾನಂದ, “ಕೆಲವು ಗಂಟೆಗಳ ನಂತರ ಆತ ಮೂರ್ಛೆಯಿಂದ ಎದ್ದಿದ್ದಾನೆ ಎಂದು ಆತನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts