More

    ಕಂಪನಿಗಳನ್ನ ಪ್ರಶ್ನಿಸಿ, ಬಡ ಚಾಲಕರ ಮೇಲೇಕೆ ದೌರ್ಜನ್ಯ?;ಆಟೋ ಚಾಲಕರ ವಿರುದ್ಧ ಜನರ ಕಿಡಿ

    ಬೆಂಗಳೂರು: ರಾಜ್ಯದಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹಿಸಿ ಆಟೋ ಚಾಲಕರ‌ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಮುಂದುವರೆದ ಆಟೋ ಹಾಗೂ ಬೈಕ್ ಟ್ಯಾಕ್ಸಿ ಚಾಲಕರ ನಡುವೆ ಸಂಘರ್ಷದಲ್ಲಿ ಸೋಶಿಯಲ್​ ಮೀಡಿಯಾದಲ್ಲಿ ಆಕ್ರೋಶವ್ಯಕ್ತವಾಗುತ್ತಿದೆ.

    ನಗರದಲ್ಲಿ ಅಕ್ರಮ ವೈಟ್ ಬೋರ್ಡ್ ಬೈಕ್‌ ಟ್ಯಾಕ್ಸಿಗಳನ್ನು ನಿಷೇಧಿಸುವಂತೆ ಪಟ್ಟು ಹಿಡಿದಿರುವ ಆಟೋ ಚಾಲಕರು ಮತ್ತು ಸಂಘಟನೆಗಳು ಸೇವೆಯನ್ನು ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಿದ್ದಾರೆ. ಸಾರಿಗೆ ಇಲಾಖೆ ತಟಸ್ಥ ನಿಲುವಿಗೆ ಬೈಕ್ ಟ್ಯಾಕ್ಸಿ ಚಾಲಕರು ಇಕ್ಕಟಿಗೆ ಸಿಲುಕಿದ್ದಾರೆ.

    ಸರ್ಕಾರ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಏಕಾಏಕಿ ರೋಡಿಗೆ ಇಳಿದು ಬೈಕ್ ಟ್ಯಾಕ್ಸಿ ಚಾಲಕರಿಗೆ ಆಟೋದವರ ಕಿರುಕುಳ ನೀಡುತ್ತಿದ್ದಾರೆ. ಕಳೆದ ಎರಡು ದಿನದಲ್ಲಿ ಸುಮಾರು 5ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಆಟೋ ಚಾಲಕರ ದೌರ್ಜನ್ಯದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಆಟೋ ವಿರುದ್ಧ ಜನರಿಂದ ಟ್ವಿಟರ್​​ನಲ್ಲಿ #SAVEBIKETAXI ಅಭಿಯಾನ ಶುರುವಾಗಿದೆ. ಆಟೋ ಚಾಲಕರ ದೌರ್ಜನ್ಯದ ವಿರುದ್ಧ ಕಿಡಿಕಾರುತ್ತಿದ್ದಾರೆ.

    ಇದನ್ನೂ ಓದಿ: ಹಾಲಿಗಾಗಿ ಅಂಗಡಿಗೆ ಹೋಗಬೇಕಾಗಿಲ್ಲ..ಇನ್ಮುಂದೆ ಮನೆ ಬಾಗಿಲಿಗೇ ಬರಲಿದೆ ಫ್ರೆಶ್‌ ಮಿಲ್ಕ್
    ಆಟೋ ಚಾಲಕರ ವಿರುದ್ಧ ಜನರ ಕಿಡಿ: ಆಟೋಕ್ಕಿಂತ ಕಡಿಮೆ ದರದಲ್ಲಿ ಬ್ಯಾಕ್ಸಿ ಟ್ಯಾಕ್ಸಿ ದೊರೆಯುತ್ತದೆ. ಆದರೆ ಆಟೋ ಚಾಲಕರು ಜನರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಹೆಚ್ಚಿನ ಆಟೋ ಚಾಲಕರು ಮೀಟರ್ ಹಾಕುವುದೇ ಇಲ್ಲ. ಕರೆದ ಕಡೆ ಆಟೋ ಚಾಲಕರು ಬರುವುದಿಲ್ಲ, ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಾರೆ. ಕಂಪನಿಗಳನ್ನ ಪ್ರಶ್ನಿಸಿ, ಬಡ ಚಾಲಕರ ಮೇಲೆ ದೌರ್ಜನ್ಯ ಯಾಕೆ?. ಬಡ ಚಾಲಕರಿಗೆ ದುಡಿಯಲು ಅವಕಾಶ ನೀಡಿ ದೌರ್ಜನ್ಯ ಮಾಡಬೇಡಿ ಎಂದು ಆಕ್ರೋಶವ್ಯಕ್ತವಾಗುತ್ತಿದೆ.

    ಇದನ್ನೂ ಓದಿ: ಏಕಕಾಲದಲ್ಲಿ ಅಜ್ಜಿ, ಅಮ್ಮ, ಅತ್ತೆ ಪ್ರೆಗ್ನೆಂಟ್ ; ಫೋಟೋಶೂಟ್​​ ಅಸಲಿ ಕಥೆ ಏನು..?

    ಬೈಕ್ ಟ್ಯಾಕ್ಸಿ ವಿರುದ್ಧ ಆಕ್ರೋಶ: ವೈಟ್ ಬೋರ್ಡ್ ವಾಹನಗಳಿಗೆ ಬಾಡಿಗೆ ಡ್ಯೂಟಿ ಮಾಡಲು ಅವಕಾಶ ಇಲ್ಲ. ಆದರೂ ರಾಜಾರೋಷವಾಗಿ ಬಾಡಿಗೆ ಡ್ಯೂಟಿ ಮಾಡಲಾಗುತ್ತಿದೆ. ರ‍್ಯಾಪಿಡೋ ಕಂಪನಿಯಿಂದ ಸರ್ಕಾರಕ್ಕೆ ಯಾವುದೇ ತೆರಿಗೆ ಬರುವುದಿಲ್ಲ. ಲಕ್ಷ ಲಕ್ಷ ಕೊಟ್ಟು ಆಟೋ ಖರೀದಿ ಮಾಡಿ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುತ್ತೇವೆ.ರ‍್ಯಾಪಿಡೋದವರು ಆಟೋ ಚಾಲಕರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ಟ್ಯಾಕ್ಸ್‌ ಕಟ್ಟದ ಬೈಕ್‌ ಟ್ಯಾಕ್ಸಿಗೆ ಅನುಮತಿ ನೀಡೋದು ಯಾಕೆ? ಎನ್ನುವ ಪ್ರಶ್ನೆಯನ್ನು ಆಟೋಚಾಲಕರು ಮಾಡುತ್ತಿದ್ದಾರೆ.

    ಇದನ್ನೂ ಓದಿ: ಟಿಕೆಟ್‌ ಪಡೆಯದ ಪ್ರಯಾಣಿಕರಿಂದ ಬರೋಬ್ಬರಿ 1 ಕೋಟಿ ರೂ. ದಂಡ ಸಂಗ್ರಹಿಸಿದ ಮಹಿಳಾ ಟಿಸಿ!
    ಬೈಕ್ ಟ್ಯಾಕ್ಸಿ ಚಾಲಕರ ಅಳಲು: ನಾಲ್ಕು ಕಾಸು ದುಡಿಯಲು ನಾವು ಈ ಕೆಲಸ ಮಾಡುತ್ತಿದ್ದೇವೆ. ರ‍್ಯಾಪಿಡೋ ಕೆಲಸ ಕಾನೂನು ಬಾಹಿರ ಅಂತ ನಮಗೆ ಗೊತ್ತಿಲ್ಲ. ಪ್ಲೇ ಸ್ಟೋರ್ ನಲ್ಲೇ ರ‍್ಯಾಪಿಡೋ, ಜೂಮ್ ಕಾರ್ ಕಂಪನಿಗಳಿವೆ. ಈ ಕಂಪನಿಗಳಿಗೆ ಸರ್ಕಾರದ ಮಾನ್ಯತೆ ಇಲ್ಲ ಅಂತ ನಮಗೆ ಗೊತ್ತಿಲ್ಲ.  ವಾಹನಗಳನ್ನ ಹಿಡಿದು ಸೀಜ್ ಮಾಡಿದರೆ ನಾವೇನು ಮಾಡೋದು. ನಾಲ್ಕು ಕಾಸು ದುಡಿಯಲು ನಾವು ಈ ಕೆಲಸ ಮಾಡುತ್ತಿದ್ದೇವೆ ಎಂದು ಬೇಸರ ಹೊರಹಾಕುತ್ತಿದ್ದಾರೆ.

    ರ‍್ಯಾಪಿಡೋ ರಾದ್ಧಾಂತ: ಜನರಿಗೆ ಪಿಕಪ್, ಡ್ರಾಪ್ ಸೇವೆ ನೀಡುವ ರ್ಯಾಪಿಡೋದಲ್ಲಿ ಲಕ್ಷಾಂತರ ಜನ ಕಾರ್ಯನಿರ್ವಹಿಸುತ್ತಿದ್ದಾರೆ. ವೈಟ್ ಬೋರ್ಡ್ ಬೈಕ್​ಗಳಲ್ಲಿ ಟ್ಯಾಕ್ಸಿ ಸೇವೆ ನೀಡಲಾಗುತ್ತದೆ. ಟ್ಯಾಕ್ಸಿ ಸೇವೆಗೆ ವೈಟ್ ಬೋರ್ಡ್ ವೆಹಿಕಲ್ ಬಳಸುವಂತಿಲ್ಲ. ಸೇವೆ ನೀಡಲು ರ‍್ಯಾಪಿಡೋ ಸಂಸ್ಥೆ ಅನುಮತಿ ಸಹ ಪಡೆದಿಲ್ಲ.

    VIDEO|ಮದುವೆ ಶಾಸ್ತ್ರ ನಡೀತಿದ್ದಾಗ ಎಂಟ್ರಿ ಕೊಟ್ಟ ಮಂಗಗಳು; ಕಪಿಷೇಷ್ಟೆಗೆ ವಧು-ವರ ಶಾಕ್​​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts