More

    ಟಿಕೆಟ್‌ ಪಡೆಯದ ಪ್ರಯಾಣಿಕರಿಂದ ಬರೋಬ್ಬರಿ 1 ಕೋಟಿ ರೂ. ದಂಡ ಸಂಗ್ರಹಿಸಿದ ಮಹಿಳಾ ಟಿಸಿ!

    ನವದೆಹಲಿ: ಮಹಿಳಾ ಟಿಕೆಟ್‌ ತಪಾಸಣೆ ಸಿಬ್ಬಂದಿಯೊಬ್ಬರು ಪ್ರಯಾಣಿಕರಿಂದ 1 ಕೋಟಿ ರೂಪಾಯಿಗೂ ಅಧಿಕ ದಂಡ ವಸೂಲಿ ಮಾಡಿದ್ದು, ರೈಲ್ವೆ ಸಚಿವಾಲಯದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    ದಕ್ಷಿಣ ರೈಲ್ವೆಯ ಮುಖ್ಯ ಟಿಕೆಟ್ ಪರಿವೀಕ್ಷಕಿ ರೊಸಾಲಿನ್ ಅರೋಕಿಯಾ ಮೇರಿ ಅವರು, ಟಿಕೆಟ್ ಪಡೆಯದೆ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರಿಂದ 1.03 ಕೋಟಿ ರೂಪಾಯಿ ದಂಡವನ್ನು ಸಂಗ್ರಹಿಸಿದ್ದಾರೆ. ಈ ಮೂಲಕ ಪ್ರಯಾಣಿಕರಿಂದ 1 ಕೋಟಿ ರೂಪಾಯಿಗೂ ಅಧಿಕ ದಂಡ ವಸೂಲಿ ಮಾಡಿದ ರೈಲ್ವೆ ಇಲಾಖೆಯ ಮೊದಲ ಮಹಿಳಾ ಟಿಕೆಟ್ ತಪಾಸಣೆ ಸಿಬ್ಬಂದಿ ಅನಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಏಕಕಾಲದಲ್ಲಿ ಅಜ್ಜಿ, ಅಮ್ಮ, ಅತ್ತೆ ಪ್ರೆಗ್ನೆಂಟ್ ; ಫೋಟೋಶೂಟ್​​ ಅಸಲಿ ಕಥೆ ಏನು..?

    ದಕ್ಷಿಣ ರೈಲ್ವೆಯ ಮುಖ್ಯ ಟಿಕೆಟ್ ಪರಿವೀಕ್ಷಕಿ ರೋಸಲಿನ್ ಅರೋಕಿಯಾ ಮೇರಿ ಅವರು ಟಿಕೆಟ್ ಪಡೆಯದ ಪ್ರಯಾಣಿಕರಿಂದ 1.03 ಕೋಟಿ ರೂ. ದಂಡವನ್ನು ಸಂಗ್ರಹಿಸಿದ್ದಾರೆ. ರೈಲ್ವೆ ಸಚಿವಾಲಯವು ಮೇರಿ ಪ್ರಯಾಣಿಕರಿಂದ ದಂಡವನ್ನು ಸಂಗ್ರಹಿಸುತ್ತಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಅವರ ಕೆಲಸದ ದಕ್ಷತೆಯನ್ನು ಶ್ಲಾಘಿಸಿದೆ.

    ಇದನ್ನೂ ಓದಿ: VIDEO| ಮನೆಗೆ ಡಿಕ್ಕಿ ಹೊಡೆದ ಗ್ಲೈಡರ್ ವಿಮಾನ; ಇಬ್ಬರ ಸ್ಥಿತಿ ಗಂಭೀರ
    ಮೇರಿ ಪ್ರಯಾಣಿಕರಿಂದ ದಂಡವನ್ನು ಸಂಗ್ರಹಿಸುತ್ತಿರುವುದನ್ನು ಮತ್ತು ಪ್ರಯಾಣಿಕರಿಂದ ಟಿಕೆಟ್‌ಗಳನ್ನು ಪರೀಕ್ಷಿಸುತ್ತಿರುವ ಫೋಟೋವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಈ ಫೋಟೋ ಈಗ ಎಲ್ಲ ಕಡೆಯಲ್ಲೂ ವೈರಲ್ ಆಗಿದ್ದು, ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಆಧುನಿಕ ಶ್ರವಣಕುಮಾರ; ತಾಜ್‌ಮಹಲ್ ನೋಡಲು ಸ್ಟ್ರೆಚರ್‌ನಲ್ಲಿ ಅಮ್ಮನ ಕರೆತಂದ ಮಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts