More

    ಆಧುನಿಕ ಶ್ರವಣಕುಮಾರ; ತಾಜ್‌ಮಹಲ್ ನೋಡಲು ಸ್ಟ್ರೆಚರ್‌ನಲ್ಲಿ ಅಮ್ಮನ ಕರೆತಂದ ಮಗ

    ನವದೆಹಲಿ: ಅನೇಕರಿಗೆ ಸಾಯುವ ಮೊದಲು ದೇಶ ಪ್ರಪಂಚ ಸುತ್ತಬೇಕು ಎಂಬ ಆಸೆ ಇದೆ. ನಡೆಯಲಾಗದೆ ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯ ಆಸೆಯನ್ನು ನೆರವೇರಿಸಲು ಮಗ ಮಾಡಿರುವ ಕೆಲಸ ಕೇಳಿದರೆ ನಿಮ್ಮ ಕಣ್ಣೀನಲ್ಲಿ ನೀರು ಬರುವುದು ಖಂಡಿತಾ ಹೌದು.

    ಗುಜರಾತ್‌ನ ಕಚ್‌ ಮೂಲದ 85 ವರ್ಷದ ವೃದ್ಧೆಯೊಬ್ಬರು ತಮ್ಮ ಮಗ ಇಬ್ರಾಹಿಂನೊಂದಿಗೆ ಉತ್ತರಪ್ರದೇಶದ ಆಗ್ರಾದಲ್ಲಿರುವ ವಿಶ್ವ ಪ್ರಸಿದ್ಧ ತಾಜ್‌ಮಹಲ್ ಅನ್ನು ವೀಕ್ಷಿಸಬೇಕು ಎಂದು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ತಾಯಿ ಆಸೆಯನ್ನು ಕೇಳಿದ ಮಗ ಆಯಕೆ ಆಸೆಯನ್ನು ನೆರವೇರಿಸಬೇಕು ಎಂದು ತೀರ್ಮಾನ ಮಾಡಿದ್ದಾರೆ.

    ಕಳೆದ 32 ವರ್ಷಗಳಿಂದ ತಾಯಿ ಹಾಸಿಗೆ ಹಿಡಿದವರಾಗಿದ್ದು, ಅವರಿಗೆ ನಡೆಯಲಾಗುತ್ತಿರಲಿಲ್ಲ ಹೀಗಾಗಿ ಮಗ ಇಬ್ರಾಹಿಂ ಅಮ್ಮನ ಆಸೆ ಈಡೇರಿಸುವ ಸಲುವಾಗಿ ಸ್ಟ್ರೆಚರ್‌ನಲ್ಲಿ ಅಮ್ಮನನ್ನು ತಾಜ್‌ಮಹಲ್‌ಗೆ ಕರೆದುಕೊಂಡು ಬಂದಿದ್ದಾರೆ.

    ಇದನ್ನೂ ಓದಿ: ಸಾಕು ನಾಯಿ ಮಾಲೀಕರೆ ಎಚ್ಚರ; ನಿಮ್ಮ ಶ್ವಾನ ಎಲ್ಲಂದ್ರಲ್ಲಿ ಮಲವಿಸರ್ಜಿಸಿದ್ರೆ 10,000 ರೂ.ದಂಡ!
    ಸ್ಟ್ರೆಚರ್‌ನಲ್ಲಿ ಮಲಗಿಕೊಂಡು ತಾಯಿ ವಿಶ್ವದ ಅದ್ಭುತವನ್ನು ನೋಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರನ್ನು ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಆಧುನಿಕ ಶ್ರವಣಕುಮಾರ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

    ಕಂಪ್ಯೂಟರ್ ಬಿಡಿಭಾಗ ಮಾರಾಟ ಕುಸಿತ; 300 ಉದ್ಯೋಗಿಗಳು ವಜಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts