More

    ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಜು ಕಾಣಿಸಿದ್ರೆ ಓಕೆ, ಪಂಜು ಯಾಕೆ?: ಉತ್ತರ ಇಲ್ಲಿದೆ…

    ಉಡುಪಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಜು ಕಾಣಿಸುವುದಿದೆ, ಇದೇನಿದು ಪಂಜು? ಹಾಗಂತ ಈ ಹೆದ್ದಾರಿಯಲ್ಲಿ ಸಾಗಿದವರಿಗೆ ಅನಿಸಿದ್ದರೆ ಅದರಲ್ಲಿ ಅಚ್ಚರಿ ಏನೂ ಇಲ್ಲ. ಏಕೆಂದರೆ ಇಲ್ಲೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಉದ್ದಕ್ಕೂ ಪಂಜುಗಳು ಕಾಣಿಸಿಕೊಂಡಿವೆ. ಹೀಗೆ ಪಂಜುಗಳು ಕಾಣಿಸಿಕೊಂಡಿದ್ದು ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ.

    ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿನ ಅವ್ಯವಸ್ಥೆಯ ಕುರಿತು ಬೆಳಕು ಚೆಲ್ಲುವ ಸಲುವಾಗಿ ಸ್ಥಳೀಯರು ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದು ಅದಕ್ಕೆ ಪಂಜುಗಳನ್ನು ಬಳಸಿದ್ದಾರೆ. ಈ ಹೆದ್ದಾರಿಯಲ್ಲಿ ಸುಮಾರು ಐದು ಕಿಲೋಮೀಟರ್ ದೂರ ದಾರಿದೀಪಗಳಿಲ್ಲ. ಪಾದಚಾರಿಗಳು ಮತ್ತು ವಾಹನಸವಾರರಿಗೆ ಇದರಿಂದ ಸಮಸ್ಯೆ ಆಗುತ್ತಿದೆ.

    ಇದನ್ನೂ ಓದಿ: ಕೈ ಬಿಟ್ಟ ಕ್ಯಾಪ್ಟನ್​; ಎಲ್ಲದಕ್ಕೂ ಸೋನಿಯಾ ಮತ್ತವರ ಇಬ್ಬರು ಮಕ್ಕಳ ವರ್ತನೆಯೇ ಕಾರಣ ಎಂದ ಮಾಜಿ ಸಿಎಂ

    ದಾರಿದೀಪ ಇಲ್ಲದೆ ಆಗುತ್ತಿರುವ ಸಮಸ್ಯೆ ಕುರಿತು ಹಲವು ಬಾರಿ ಮನವಿ ನೀಡಿದ್ದರೂ ನಿರ್ಲಕ್ಷಿಸುತ್ತಿರುವ ಜಿಲ್ಲಾಡಳಿತಕ್ಕೆ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಈ ಮೂಲಕ ಚುರುಕು ಮುಟ್ಟಿಸಲು ಯತ್ನಿಸಿದೆ. ದಾರಿಯುದ್ದಕ್ಕೂ ಕಂಬಗಳನ್ನು ನೆಟ್ಟ ಸಮಿತಿ, ಅದಕ್ಕೆ ಪಂಜುಗಳನ್ನು ಅಳವಡಿಸಿದೆ. ಮಾತ್ರವಲ್ಲದೆ ಶೀಘ್ರ ದಾರಿದೀಪ ಅಳವಡಿಸುವಂತೆ ಒತ್ತಾಯಿಸಿದೆ. ತಪ್ಪಿದರೆ ಆಗುವ ಅನಾಹುತಕ್ಕೆ ಹೆದ್ದಾರಿ ಪ್ರಾಧಿಕಾರವೇ ಹೊಣೆ ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಸಂಚಾಲಕ ನಿತ್ಯಾನಂದ ಒಳಕಾಡು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

    ಗಂಡನನ್ನು ಕೊಂದು ಗುಂಡಿ ತೋಡಿ ಮುಚ್ಚಿದ ಪತ್ನಿ; ಬಳಿಕ ಮೊಬೈಲ್​ಫೋನ್​ ಸ್ವಿಚ್ಡ್​ ಆಫ್ ಮಾಡಿ ಪರಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts