More

    ಕ್ರಿಕೆಟ್ V/s ಪಿತೃತ್ವ ರಜೆ; ಕ್ರಿಕೆಟಿಗರ ಪಿತೃತ್ವ ರಜೆ ಹೊಸದಲ್ಲ!

    ಬೆಂಗಳೂರು: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಪಿತೃತ್ವ ರಜೆಯ ಮೇರೆಗೆ ಆಸ್ಟ್ರೇಲಿಯಾ ಪ್ರವಾಸದ ಕೊನೆಯ 3 ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಇದರಿಂದಾಗಿ ರಾಷ್ಟ್ರಸೇವೆ ಮತ್ತು ಪಿತೃತ್ವದ ವಿಚಾರವಾಗಿ ಸಾಕಷ್ಟು ಚರ್ಚೆಗಳೂ ಹುಟ್ಟಿಕೊಂಡಿವೆ. ದೇಶದ ಪರ ಆಡುವುದಕ್ಕಿಂತ, ಮಗುವಿನ ಜನನದ ವೇಳೆ ಪತ್ನಿ ಅನುಷ್ಕಾ ಶರ್ಮ ಜತೆ ಇರುವ ವಿರಾಟ್ ಕೊಹ್ಲಿ ಅವರ ನಿರ್ಧಾರ ಸಾಕಷ್ಟು ಪರ-ವಿರೋಧಗಳನ್ನೂ ಪಡೆದುಕೊಂಡಿವೆ. ಜತೆಗೆ ಪುರುಷರ ಪಿತೃತ್ವ ರಜೆಯ ಕಾನೂನಿನ ಬಗ್ಗೆಯೂ ಗಂಭೀರ ಚರ್ಚೆಗಳಿಗೆ ಕಾರಣವಾಗಿದೆ.

    ಸಾಮಾನ್ಯ ದಿನಗಳಲ್ಲಾಗಿದ್ದರೆ ವಿರಾಟ್ ಕೊಹ್ಲಿ ಅವರು ಖಂಡಿತವಾಗಿಯೂ ಪಿತೃತ್ವ ರಜೆಗಾಗಿ ಇಷ್ಟೊಂದು ಪಂದ್ಯಗಳನ್ನು ತಪ್ಪಿಸಿಕೊಳ್ಳುವ ಪ್ರಸಂಗ ಬರುತ್ತಿರಲಿಲ್ಲ. ಆದರೆ ಇದೀಗ ಕರೊನಾ ಕಾಲದಲ್ಲಿ ಕ್ವಾರಂಟೈನ್ ನಿಯಮಾವಳಿಗಳಿಂದಾಗಿ ಕೊಹ್ಲಿ 3 ಪಂದ್ಯ ತಪ್ಪಿಸಿಕೊಳ್ಳುವುದು ಅನಿವಾರ‌್ಯವೆನಿಸಿದೆ. ಕೊಹ್ಲಿ ಪತ್ನಿ ಅನುಷ್ಕಾ ಜನವರಿ ಆರಂಭದಲ್ಲೇ ಮಗುವಿಗೆ ಜನ್ಮ ನೀಡುವ ನಿರೀಕ್ಷೆ ಇದೆ. ಆದರೆ ಆಸ್ಟ್ರೇಲಿಯಾದಲ್ಲಿನ 14 ದಿನಗಳ ಕಡ್ಡಾಯ ಕ್ವಾರಂಟೈನ್‌ನಿಂದಾಗಿ ಕೊಹ್ಲಿ, ಕೊನೆಯ ಟೆಸ್ಟ್‌ಗೂ ಮರಳಲು ಸಾಧ್ಯವಾಗುವುದಿಲ್ಲ. ಪ್ರಮುಖ ಕ್ರಿಕೆಟ್ ತಾರೆಯರು ಈ ಹಿಂದೆ ಮಗುವಿನ ಜನನಕ್ಕಾಗಿ ಪಿತೃತ್ವ ರಜೆ ಪಡೆದ ಮತ್ತು ಪಡೆಯದ ನಿದರ್ಶನಗಳು ಸಾಕಷ್ಟಿವೆ. ಅವುಗಳ ಸಂಕ್ಷಿಪ್ತ ಮೆಲುಕು ಇಲ್ಲಿದೆ…

    ಇದನ್ನೂ ಓದಿ: 2.5 ಕೋಟಿ ರೂ.ಗೆ ಬ್ರಾಡ್ಮನ್ ಕ್ಯಾಪ್ ಮಾರಾಟ; ಹರಾಜಿನ ಹಿಂದಿದೆ ಕ್ರಿಮಿನಲ್ ಸ್ಟೋರಿ!

    ಎಂಸ್ ಧೋನಿ 
    2015ರಲ್ಲಿ ಪುತ್ರಿ ಝಿವಾಗೆ ಪತ್ನಿ ಸಾಕ್ಷಿ ಜನ್ಮ ನೀಡಿದಾಗ ಎಂಎಸ್ ಧೋನಿ ಆಸ್ಟ್ರೇಲಿಯಾದಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದರು. ಮಗುವಿನ ನಿರೀಕ್ಷೆಯಲ್ಲಿ ತವರಿಗೆ ಮರಳುವ ಬದಲಾಗಿ ಧೋನಿ, ಆಸೀಸ್ ನೆಲದಲ್ಲಿ ಏಕದಿನ ವಿಶ್ವಕಪ್ ಟೂರ್ನಿಯ ಸಿದ್ಧತೆಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಧೋನಿ ಮೊಬೈಲ್ ಬಳಕೆಯಿಂದ ಸದಾ ದೂರ ನಿಲ್ಲುವುದರಿಂದಾಗಿ, ಪುತ್ರಿಯ ಜನನದ ಸುದ್ದಿಯನ್ನು ಧೋನಿಗೆ ತಿಳಿಸುವ ಸಲುವಾಗಿ ಸಾಕ್ಷಿ, ಸುರೇಶ್ ರೈನಾ ಅವರಿಗೆ ಕರೆ ಮಾಡಿದ್ದರಂತೆ! ಸುಮಾರು 2 ತಿಂಗಳ ಬಳಿಕ ಧೋನಿ ತವರಿಗೆ ಮರಳಿ ಮಗಳು ಝಿವಾಳ ಮುಖ ನೋಡಿದ್ದರು.

    ಸುನೀಲ್ ಗಾವಸ್ಕರ್
    ಬ್ಯಾಟಿಂಗ್ ದಿಗ್ಗಜ ಸುನೀಲ್ ಗಾವಸ್ಕರ್ 1976ರಲ್ಲಿ ಪುತ್ರ ರೋಹನ್ ಜನನದ ವೇಳೆ ತವರಿಗೆ ಮರಳದೆ ವೆಸ್ಟ್ ಇಂಡೀಸ್ ಪ್ರವಾಸದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಿದ್ದರು. ಅವರು ನ್ಯೂಜಿಲೆಂಡ್ ಪ್ರವಾಸದಿಂದ ನೇರವಾಗಿ ವಿಂಡೀಸ್‌ಗೆ ತೆರಳಿದ್ದರು. ಎರಡೂವರೆ ತಿಂಗಳ ಬಳಿಕ ಅವರು ಪುತ್ರನ ಮುಖ ನೋಡಿದ್ದರು. ಆ ಸಮಯದಲ್ಲಿ ಗಾವಸ್ಕರ್ ಪಿತೃತ್ವ ರಜೆ ಕೇಳಿದ್ದರೂ ಬಿಸಿಸಿಐ ನೀಡಿರಲಿಲ್ಲ ಎಂದು ವರದಿಯಾಗಿದ್ದರೂ, ಗಾವಸ್ಕರ್ ಅದನ್ನು ಇತ್ತೀಚೆಗೆ ನಿರಾಕರಿಸಿದ್ದರು. ನಾನು ಪಿತೃತ್ವ ರಜೆಯನ್ನು ಕೇಳಿಯೇ ಇರಲಿಲ್ಲ ಎಂದವರು ಸ್ಪಷ್ಟಪಡಿಸಿದ್ದರು.

    ಇದನ್ನೂ ಓದಿ:  ಅಬುಧಾಬಿ ಟಿ10 ಲೀಗ್‌ನಲ್ಲಿ ಆಡಲಿದ್ದಾರೆ ಟಿ20 ಸ್ಟಾರ್ ಕ್ರಿಕೆಟಿಗರು

    ಸೌರವ್ ಗಂಗೂಲಿ
    ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ 2001ರಲ್ಲಿ ತಂದೆಯಾದಾಗ ದಕ್ಷಿಣ ಆಫ್ರಿಕಾದಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದರು. ಈಗ ವಿರಾಟ್ ಕೊಹ್ಲಿಗೆ ಪೆಟರ್ನಿಟಿ ರಜೆಯನ್ನು ನೀಡಿರುವ ಗಂಗೂಲಿ, ಆಗ ತವರಿಗೆ ಮರಳದೆ ರಾಷ್ಟ್ರೀಯ ತಂಡದ ಸೇವೆಯಲ್ಲಿ ಮುಂದುವರಿದಿದ್ದರು. ಒಂದು ತಿಂಗಳಿಗೂ ಹೆಚ್ಚಿನ ಸಮಯದ ಬಳಿಕ ಗಂಗೂಲಿ ತವರಿಗೆ ಮರಳಿ ಪುತ್ರಿ ಸನಾರ ಮುಖವನ್ನು ಮೊದಲ ಬಾರಿಗೆ ನೋಡಿದ್ದರು. ಆದರೆ, ಪುತ್ರಿಯ ಜನನದ ಸುದ್ದಿ ನನಗಿಂತ ಮೊದಲು ಗಂಗೂಲಿಗೆ ತಿಳಿದಿತ್ತು. ಯಾಕೆಂದರೆ ಶಸಚಿಕಿತ್ಸೆಯಿಂದಾಗಿ ನಾನು ಕೆಲ ಗಂಟೆಗಳ ಕಾಲ ಪ್ರಜ್ಞೆ ತಪ್ಪಿದ್ದೆ ಎಂದು ಅವರ ಪತ್ನಿ ಡೋನಾ ಹಿಂದೊಮ್ಮೆ ಹೇಳಿದ್ದರು.

    ರಾಹುಲ್ ದ್ರಾವಿಡ್
    2009ರ ಐಪಿಎಲ್ ಟೂರ್ನಿಯ ವೇಳೆ ರಾಹುಲ್ ದ್ರಾವಿಡ್ ಅವರ 2ನೇ ಪುತ್ರ ಅನ್ವಯ್ ಜನಿಸಿದ್ದರು. ಐಪಿಎಲ್ ಟೂರ್ನಿ ಆಗ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದ್ದ ಕಾರಣ ದ್ರಾವಿಡ್ ಮಗುವಿನ ನಿರೀಕ್ಷೆಯಲ್ಲಿ ತವರಿಗೆ ಮರಳಿದ್ದರು.

    ರೋಹಿತ್ ಶರ್ಮ
    ಕಳೆದ ಆಸ್ಟ್ರೇಲಿಯಾ ಪ್ರವಾಸದ ವೇಳೆ ರೋಹಿತ್ ಶರ್ಮ ತಂದೆಯಾಗಿದ್ದರು. ಆಗ ರೋಹಿತ್ ಶರ್ಮ ಅವರು ಮಗುವಿನ ನಿರೀಕ್ಷೆಯಲ್ಲಿ ತವರಿಗೆ ಮರಳಿದ ಕಾರಣ ಟೆಸ್ಟ್ ಸರಣಿಯ 4ನೇ ಹಾಗೂ ಅಂತಿಮ ಪಂದ್ಯವನ್ನು ತಪ್ಪಿಸಿಕೊಂಡಿದ್ದರು.

    ಇದನ್ನೂ ಓದಿ: ಅಂತಿಮ ಟಿ20 ಪಂದ್ಯದಲ್ಲಿ ಕಿವೀಸ್‌ಗೆ ಸೋಲು, ವೈಟ್‌ವಾಷ್ ತಪ್ಪಿಸಿಕೊಂಡ ಪಾಕ್

    ಗೌತಮ್ ಗಂಭೀರ್
    2014ರ ಐಪಿಎಲ್ ವೇಳೆ ಗೌತಮ್ ಗಂಭೀರ್ ತಂದೆಯಾಗಿದ್ದರು. ಪತ್ನಿ ನತಾಶಾ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಲ್ಲಿ ಗಂಭೀರ್, ಆಗ ಯುಎಇಯಲ್ಲಿ ನಡೆಯುತ್ತಿದ್ದ ಐಪಿಎಲ್ ಟೂರ್ನಿಯಿಂದ ತವರಿಗೆ ಮರಳಿದ್ದರು. ಬಳಿಕ ಟೂರ್ನಿಯ 2ನೇ ಚರಣ ಭಾರತಕ್ಕೆ ಮರಳಿದಾಗ ರಾಂಚಿಯಲ್ಲಿ ಕೋಲ್ಕತ ನೈಟ್‌ರೈಡರ್ಸ್‌ನ ಮುಂದಿನ ಪಂದ್ಯಕ್ಕೆ ಮುನ್ನ ತಂಡವನ್ನು ಕೂಡಿಕೊಂಡಿದ್ದರು.

    ಅನಿಲ್ ಕುಂಬ್ಳೆ
    ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರು 2004ರ ಪಾಕಿಸ್ತಾನ ಪ್ರವಾಸದಲ್ಲಿ ಮುಲ್ತಾನ್ ಟೆಸ್ಟ್ (ವೀರೇಂದ್ರ ಸೆಹ್ವಾಗ್ ಚೊಚ್ಚಲ ತ್ರಿಶತಕ ಸಿಡಿಸಿದ್ದ ಪಂದ್ಯ) ಗೆಲುವಿನ ಬೆನ್ನಲ್ಲೇ ಮಗುವಿನ ನಿರೀಕ್ಷೆಯಲ್ಲಿ ತವರಿಗೆ ಮರಳಿದ್ದರು. ಪತ್ನಿ ಚೇತನಾ ಪುತ್ರ ಮಯಾಸ್‌ಗೆ ಜನ್ಮ ನೀಡಿದ ಬೆನ್ನಲ್ಲೇ ಪಾಕ್‌ಗೆ ಮರಳಿ ಲಾಹೋರ್‌ನಲ್ಲಿ ನಡೆದ 2ನೇ ಟೆಸ್ಟ್‌ನಲ್ಲಿ ಆಡಿದ್ದರು. ಆ ದಿನಗಳಲ್ಲಿ ಪ್ರಯಾಣ ಸರಾಗವಾಗಿದ್ದ ಕಾರಣದಿಂದಾಗಿ ಕುಂಬ್ಳೆ ಒಂದೂ ಪಂದ್ಯ ತಪ್ಪಿಸಿಕೊಳ್ಳುವ ಪ್ರಮೇಯ ಬಂದಿರಲಿಲ್ಲ.

    PHOTO | ಕ್ರಿಕೆಟಿಗ ಯಜುವೇಂದ್ರ ಚಾಹಲ್ ವಿವಾಹ

    ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕಕ್ಕೆ ಜಮ್ಮು-ಕಾಶ್ಮೀರ ಮೊದಲ ಎದುರಾಳಿ

    ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ವೇಗಿ ಯೋ ಮಹೇಶ್ ನಿವೃತ್ತಿ ಘೋಷಣೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts