More

    ಅಂತಿಮ ಟಿ20 ಪಂದ್ಯದಲ್ಲಿ ಕಿವೀಸ್‌ಗೆ ಸೋಲು, ವೈಟ್‌ವಾಷ್ ತಪ್ಪಿಸಿಕೊಂಡ ಪಾಕ್

    ನೇಪಿಯರ್: ವಿಕೆಟ್ ಕೀಪರ್-ಆರಂಭಿಕ ಮೊಹಮದ್ ರಿಜ್ವಾನ್ (89 ರನ್, 59 ಎಸೆತ, 10 ಬೌಂಡರಿ, 3 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನಿರ್ವಹಣೆಯ ನೆರವಿನಿಂದ ಪಾಕಿಸ್ತಾನ ತಂಡ ಆತಿಥೇಯ ನ್ಯೂಜಿಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ 4 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ. ಇದರಿಂದ ನ್ಯೂಜಿಲೆಂಡ್ ಕ್ಲೀನ್‌ಸ್ವೀಪ್ ಅವಕಾಶವನ್ನು ಕೈಚೆಲ್ಲಿದರೆ, ಪಾಕಿಸ್ತಾನ ತಂಡ ಸರಣಿ ಸೋಲಿನ ಅಂತರವನ್ನು 1-2ಕ್ಕೆ ಇಳಿಸಿಕೊಂಡಿತು.

    ಮೆಕ್‌ಲೀನ್ ಪಾರ್ಕ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ನ್ಯೂಜಿಲೆಂಡ್ ತಂಡ, ಪಾಕ್ ಬಿಗಿ ಬೌಲಿಂಗ್ ದಾಳಿಯ ನಡುವೆ ಡೆವೋನ್ ಕಾನ್‌ವೇ (63 ರನ್, 45 ಎಸೆತ, 7 ಬೌಂಡರಿ, 1 ಸಿಕ್ಸರ್) ಅರ್ಧಶತಕದಿಂದ 7 ವಿಕೆಟ್‌ಗೆ 173 ರನ್ ಪೇರಿಸಿತು. ಪ್ರತಿಯಾಗಿ ಪಾಕ್ ತಂಡ ರಿಜ್ವಾನ್ ಹೋರಾಟ ಮತ್ತು ಮೊಹಮದ್ ಹಫೀಜ್ (41) ನೀಡಿದ ಬೆಂಬಲದಿಂದ 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 177 ರನ್ ಪೇರಿಸಿ ಜಯಿಸಿತು.

    ಇದನ್ನೂ ಓದಿ: ಅಬುಧಾಬಿ ಟಿ10 ಲೀಗ್‌ನಲ್ಲಿ ಆಡಲಿದ್ದಾರೆ ಟಿ20 ಸ್ಟಾರ್ ಕ್ರಿಕೆಟಿಗರು

    ಪಾಕ್ ತಂಡ ಗೆಲುವಿನಿಂದ 11 ರನ್ ದೂರವಿದ್ದಾಗ ದಿಢೀರ್ ಕುಸಿತ ಕಂಡಿತು. ಫಹೀಮ್ ಅಶ್ರಫ್​ (2), ನಾಯಕ ಶಾದಾಬ್ ಖಾನ್ (0) ಒಂದೇ ಓವರ್‌ನಲ್ಲಿ ಔಟಾದರೆ, ಅಂತಿಮ 5 ಎಸೆತಗಳಲ್ಲಿ 4 ರನ್ ಅಗತ್ಯವಿದ್ದಾಗ ರಿಜ್ವಾನ್ ವೇಗಿ ಕೈಲ್ ಜೇಮಿಸನ್‌ಗೆ ವಿಕೆಟ್ ಒಪ್ಪಿಸಿದರು. ಅಂತಿಮ ಓವರ್‌ನ 4ನೇ ಎಸೆತದಲ್ಲಿ ಇಫ್ತಿಕಾರ್ ಅಹ್ಮದ್ (14*) ಸಿಕ್ಸರ್ ಸಿಡಿಸುವ ಮೂಲಕ ಪಾಕ್ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಇನ್ನು ಉಭಯ ತಂಡಗಳ ನಡುವೆ 2 ಪಂದ್ಯಗಳ ಟೆಸ್ಟ್ ಸರಣಿ ಡಿಸೆಂಬರ್ 26ರಿಂದ ಮೌಂಟ್ ಮೌಂಗನಯಿಯಲ್ಲಿ ನಡೆಯಲಿದೆ. ಈ ಸರಣಿಯು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಭಾಗವೂ ಆಗಿದೆ. ಗಾಯಾಳು ಬಾಬರ್ ಅಜಮ್ ಅನುಪಸ್ಥಿತಿಯಲ್ಲಿ ಮೊಹಮದ್ ರಿಜ್ವಾನ್ ಪಾಕ್ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ.

    ನ್ಯೂಜಿಲೆಂಡ್: 7 ವಿಕೆಟ್‌ಗೆ 173 (ಗುಪ್ಟಿಲ್ 19, ಸೀಫರ್ಟ್ 35, ವಿಲಿಯಮ್ಸನ್ 1, ಕಾನ್‌ವೇ 63, ಫಿಲಿಪ್ಸ್ 31, ನೀಶಾಮ್ 14, ಫಹೀಮ್ ಅಶ್ರಫ್​ 20ಕ್ಕೆ 3, ಹ್ಯಾರಿಸ್ ರವೂಫ್​ 44ಕ್ಕೆ 2, ಶಹೀನ್ ಅಫ್ರಿದಿ 43ಕ್ಕೆ 2), ಪಾಕಿಸ್ತಾನ: 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 177 (ರಿಜ್ವಾನ್ 89, ಹಫೀಜ್ 41, ಇಫ್ತಿಕಾರ್ ಅಹ್ಮದ್ 14*, ಟಿಮ್ ಸೌಥಿ 25ಕ್ಕೆ 2, ಕಗ್ಗಿಲಿನ್ 40ಕ್ಕೆ 2, ಜೇಮಿಸನ್ 22ಕ್ಕೆ 1, ನೀಶಾಮ್ 37ಕ್ಕೆ 1), ಪಂದ್ಯಶ್ರೇಷ್ಠ: ಮೊಹಮದ್ ರಿಜ್ವಾನ್, ಸರಣಿಶ್ರೇಷ್ಠ: ಟಿಮ್ ಸೀಫರ್ಟ್.

    ಮುಂಬೈನ ಡ್ರ್ಯಾಗನ್​ಫ್ಲೈ ಕ್ಲಬ್​ ಮೇಲೆ ದಾಳಿ: ಮಾಜಿ ಕ್ರಿಕೆಟಿಗ ಸುರೇಶ್​ ರೈನಾ ಬಂಧನ!

    ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕಕ್ಕೆ ಜಮ್ಮು-ಕಾಶ್ಮೀರ ಮೊದಲ ಎದುರಾಳಿ

    ವಿಚಿತ್ರ ಬ್ಯಾಟಿಂಗ್​ ಶೈಲಿಯನ್ನು ಟ್ರೋಲ್​ ಮಾಡಿದವರಿಗೆ ಸರಿಯಾದ ತಿರುಗೇಟು ನೀಡಿದ ಫವಾದ್​ ಅಲಮ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts