More

    ಇಬ್ಬರು ಪಾಕ್​ ಗೂಢಾಚಾರಿಗಳನ್ನು ಹೊರದಬ್ಬಿದ ಭಾರತ: ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿ

    ನವದೆಹಲಿ: ಭಾರತ ಸರ್ಕಾರದಿಂದ ಭಾನುವಾರ “ಪರ್ಸನ್​ ನಾನ್​ ಗ್ರೇಟಾ” ಎಂದು ಘೋಷಿಸಲಾದ ಪಾಕಿಸ್ತಾನ ಮೂಲದ ಇಬ್ಬರು ಗೂಢಾಚಾರಿಗಳನ್ನು ಮಂಗಳವಾರ ಮುಂಜಾನೆ ಪಂಜಾಬಿನ ಅಟ್ಟಾರಿ ಗಡಿ ಮೂಲಕ ಪಾಕಿಸ್ತಾನಕ್ಕೆ ದಬ್ಬಲಾಯಿತು.

    ಇದನ್ನೂ ಓದಿ: ತಾಯಿಯನ್ನೇ ಹತ್ಯೆಗೈದ ಮಗನಿಂದ ತಂದೆ ಮೇಲೆ ಮಾರಣಾಂತಿಕ ಹಲ್ಲೆ: ಬೆಚ್ಚಿಬಿದ್ದ ಕೊಪ್ಪಳ ಜನತೆ

    ಪಾಕ್​ ಐಎಸ್​ಐ (ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್) ನಿರ್ವಾಹಕರಾಗಿರುವ ಅಬಿದ್​ ಹುಸೇನ್​ ಮತ್ತು ಮುಹಮ್ಮದ್​ ತಾಹೀರ್​ ನವದೆಹಲಿಯಲ್ಲಿರುವ ಇಂಡಿಯನ್​ ಆರ್ಮಿ ಸಂಸ್ಥೆಗಳ ಬಗ್ಗೆ ದಾಖಲೆ ಕಲೆಹಾಕುವ ಸಂದರ್ಭದಲ್ಲಿ ಭಾರತೀಯ ಗುಪ್ತಚರ ಏಜೆನ್ಸಿ ಗೂಢಾಚಾರಿಗಳನ್ನು ಖುದ್ದಾಗಿ ಸೆರೆಹಿಡಿದಿದ್ದರು. ಅವರನ್ನು ಇಂದು ಮುಂಜಾನೆ ಹೊರದಬ್ಬಲಾಗಿದೆ.

    ರಾಜತಾಂತ್ರಿಕ ನಿಯೋಗಕ್ಕೆ ಸಂಬಂಧಿಸಿದಂತೆ ಗೂಢಾಚಾರಿಗಳ ಸ್ಥಾನಮಾನ ಹೊಂದಾಣಿಕೆ ಆಗದಿದ್ದರಿಂದ ಸರ್ಕಾರ ಅವರನ್ನು ಪರ್ಸನ್​ ನಾನ್​ ಗ್ರೇಟಾ ಎಂದು ಘೋಷಿಸಿ, 24 ಗಂಟೆಗಳನ್ನು ದೇಶ ಬಿಡುವಂತೆ ಭಾನುವಾರ ಖಡಕ್​ ಸಂದೇಶ ರವಾನಿಸಿತ್ತು. ಅಲ್ಲದೆ, ಪಾಕಿಸ್ತಾನಿ ಪ್ರಜೆ ಜಾವೀದ್​ ಸೇರಿದಂತೆ ಇಬ್ಬರು ಗೂಢಾಚಾರಿಗಳ ವಿರುದ್ಧ ಅಫಿಶಿಯಲ್​ ಸೀಕ್ರೆಟ್ಸ್​ ಆ್ಯಕ್ಟ್​ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

    ಇದನ್ನೂ ಓದಿ: ಮತ್ತೆ ನೆರೆ ಬಂದ್ರೆ ದೇವರೇ ಗತಿ!

    ವಿಚಾರಣೆ ವೇಳೆ ಗೂಢಾಚಾರಿಗಳಿಂದ ಕೆಲವು ವರ್ಗೀಕೃತ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನ ಗುಪ್ತಚರ ಎಜೆನ್ಸಿ ನಿರ್ದೇಶನದಂತೆ ಭಾರತೀಯ ಸೇನಾ ಪಡೆಗಳ ಮಾಹಿತಿಯನ್ನು ಕಲೆಹಾಕುತ್ತಿದ್ದೆವು. ಅದಕ್ಕಾಗಿ ಇಂಡಿಯನ್​ ರೈಲ್ವೇ ಸಿಬ್ಬಂದಿಯನ್ನು ಗುರಿಯಾಗಿಸಿ ಮಾಹಿತಿಗಳನ್ನು ಕಲೆಹಾಕುಲು ಪ್ರಯತ್ನಿಸಿದೆವು ಎಂದು ಅವರೇ ಬಾಯ್ಬಿಟ್ಟಿದ್ದಾರೆ.

    ರೈಲ್ವೆಯಲ್ಲಿ ಇಂಡಿಯನ್​ ಆರ್ಮಿಯ ಪ್ರಯಾಣದ ಬಗ್ಗೆ ತಿಳಿಯಲು ರೈಲ್ವೆ ಉದ್ಯೋಗಿಗೆ ಅಬಿದ್​ ಹುಸೇನ್​ ಹಣದ ಆಮಿಷವೊಡ್ಡಿದ್ದ ಎಂದು ತಿಳಿದುಬಂದಿದೆ. ನನ್ನ ಹೆಸರು ಗೌತಮ್​, ನನ್ನ ಸಹೋದರ ಓರ್ವ ಪತ್ರಕರ್ತ ನಾವು ಇಂಡಿಯನ್​ ರೈಲ್ವೆ ಬಗ್ಗೆ ಒಂದು ಸ್ಟೋರಿ ತಯಾರು ಮಾಡುತ್ತಿದ್ದೇವೆ. ಈ ಬಗ್ಗೆ ಮಾಹಿತಿ ನೀಡಿದರೆ ಹಣವನ್ನು ನೀಡುತ್ತೇವೆ ಎಂದು ಆಮಿಷವೊಡ್ಡಿದ್ದ ಎಂದು ವಿಚಾರಣೆ ವೇಳೆ ಗೊತ್ತಾಗಿದೆ.

    ಇದನ್ನೂ ಓದಿ: ನಿಶ್ವಿಕಾ ಜತೆ ಲಾಕ್​ಡೌನ್ ಮಾತುಕಥೆ

    ಪರ್ಸನ್​ ನಾನ್​ ಗ್ರೇಟಾ ಎಂದರೇನು?
    ವಿದೇಶಿ ವ್ಯಕ್ತಿಯೊಬ್ಬ ಒಂದು ನಿರ್ಧಿಷ್ಟ ದೇಶದಲ್ಲಿ ಉಳಿದಿದ್ದು, ಆತನ ನಡೆ ಅನುಮಾನಾಸ್ಪದವಾಗಿದ್ದರೆ ಹಾಗೂ ರಾಜತಾಂತ್ರಿಕ ನಿಯೋಗದ ಸದಸ್ಯತ್ವದ ಸ್ಥಾನಮಾನ ಇಲ್ಲದಿದ್ದರೆ ಅಂತವರನ್ನು ದೇಶದಿಂದ ಹೊರದಬ್ಬುವುದು ಎಂದರ್ಥ.(ಏಜೆನ್ಸೀಸ್​)

    ಕರೊನಾ ತವರು ಚೀನಾದಲ್ಲಿ ಉದ್ಯೋಗಿಗಳಿಗೆ ಜೀವಂತ ಹುಳು ತಿನ್ನುವ ಶಿಕ್ಷೆ: ಕಾರಣ ಕೇಳಿದ್ರೆ ಬೆರಗಾಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts