More

    ಮತ್ತೆ ನೆರೆ ಬಂದ್ರೆ ದೇವರೇ ಗತಿ!

    ಕಳೆದ ವರ್ಷ ರಾಜ್ಯದಲ್ಲಿ ಮುಂಗಾರು ಅಬ್ಬರಿಸಿ ಸಾಕಷ್ಟು ಜಿಲ್ಲೆಗಳು ನೆರೆಗೆ ತತ್ತರಿಸಿದ್ದವು. ಸಾವಿರಾರು ಕುಟುಂಬಗಳು ಮನೆ ಕಳೆದುಕೊಂಡಿದ್ದವು. ಸಾವಿರಾರು ಹೆಕ್ಟೇರ್ ಬೆಳೆ ನಾಶಗೊಂಡು ರೈತರು ಕಂಗಾಲಾಗಿದ್ದರು. ಸರ್ಕಾರದ ಆಸ್ತಿ-ಪಾಸ್ತಿಯೂ ಹಾನಿಗೊಂಡಿದ್ದವು. ಸಂತ್ರಸ್ತರ ನೆರವಿಗೆ ಸರ್ಕಾರ ಸಾಕಷ್ಟು ಪರಿಹಾರ ಘೋಷಿಸಿತ್ತು. ಆದರೆ, ಸಂತ್ರಸ್ತರ ಪಾಲಿಗೆ ಪರಿಹಾರ ಸಂಪೂರ್ಣವಾಗಿ ಸಿಕ್ಕಿಲ್ಲ. ಈಗ ಮತ್ತೆ ಮುಂಗಾರು ಬರುತ್ತಿದೆ. ಕಳೆದ ಬಾರಿ ಆದ ಹಾನಿಯ ದುರಸ್ತಿಯೇ ಮುಗಿದಿಲ್ಲ. ಮತ್ತೆ ನೆರೆ ವಕ್ಕರಿಸಿದರೆ ಏನು ಮಾಡಬೇಕೆಂಬ ಮುನ್ನೆಚ್ಚರಿಕೆ ಕ್ರಮಗಳು ಸಮರ್ಪಕವಾಗಿ ನಡೆದಿಲ್ಲ. ಒಂದೆಡೆ, ಕರೊನಾ ಆತಂಕ. ಇನ್ನೊಂದೆಡೆ, ಮಳೆ ಆರ್ಭಟ. ಈ ಎಲ್ಲದರ ಕುರಿತು ‘ವಿಜಯವಾಣಿ’ ನಡೆಸಿದ ‘ರಿಯಾಲಿಟಿ ಚೆಕ್’ನ ಸಂಪೂರ್ಣ ವರದಿ ಇಲ್ಲಿದೆ.

    ಯಾದಗಿರಿ

    ಕಳೆದ ವರ್ಷ ಸಂಭವಿಸಿದ ನೆರೆಯಿಂದ ಯಾದಗಿರಿ ಜಿಲ್ಲೆಯಲ್ಲಿ 5 ಗ್ರಾಮ ಸ್ಥಳಾಂತರಕ್ಕೆ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ.

    ನೆರೆ ಹೊಡೆತಕ್ಕೆ 1000ಕ್ಕೂ ಹೆಚ್ಚಿನ ಮನೆಗಳು ಜಖಂ ಆಗಿದ್ದು, ಪರಿಹಾರ ಒದಗಿಸಲಾಗಿದೆ. ಅಲ್ಲದೆ ಹಾನಿಗೊಳಗಾದ ರಸ್ತೆಗಳ ಸುಧಾರಣೆಗೂ ಸರ್ಕಾರ ಮುಂದಾಗಿದೆ.

    ಸದ್ಯ ಮುಂಗಾರು ಹಂಗಾಮು ಆರಂಭಗೊಳ್ಳುತ್ತಿದ್ದು, ಜಿಲ್ಲಾಡಳಿತ ಕರೊನಾ ನಿಯಂತ್ರಣದ ಜತೆಗೆ ಮಳೆಗಾಲ ಎದುರಿಸಲು ಅಧಿಕಾರಿಗಳ ತಂಡ ರಚನೆ ಮಾಡಿದೆ.

    ಇದನ್ನೂ ಓದಿ   ಬಿಹಾರ ಚುನಾವಣೆ ಪ್ರಚಾರಕ್ಕೆ ವಿಡಿಯೋ ಮೂಲಕವೇ ಅಮಿತ್ ಷಾ ರ‌್ಯಾಲಿ

    ಬೆಳಗಾವಿ

    ಜಿಲ್ಲೆಯಲ್ಲಿ 972 ಗ್ರಾಮಗಳು ಜಲಾವೃತಗೊಂಡು 1,12,483 ಕುಟುಂಬಗಳ 69,381 ಮನೆಗಳು ಹಾನಿಗೊಳಗಾಗಿದ್ದವು. 500 ಕಿಮೀ ರಸ್ತೆ, ಸಾವಿರಕ್ಕೂ ಅಧಿಕ ಸರ್ಕಾರಿ ಶಾಲಾ, ಅಂಗನವಾಡಿ, ಕಚೇರಿಗಳ ಕಟ್ಟಡಗಳು ಹಾಳಾಗಿದ್ದವು. ನಿರಾಶ್ರಿತರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಪರಿಹಾರ ಸಿಕ್ಕಿಲ್ಲ.

    ಹಾನಿಗೀಡಾದ ‘ಬಿ’ ವರ್ಗದ ಮನೆಗಳ ದುರಸ್ತಿ ಇತ್ಯಾದಿ ಕಾಮಗಾರಿಗಾಗಿ 5 ಲಕ್ಷ ರೂ. ಬದಲಾಗಿ 3 ಲಕ್ಷ ರೂ. ಪರಿಹಾರವನ್ನು 2 ಕಂತಿನಲ್ಲಿ ನೀಡಲು ಘೊಷಿಸಲಾಗಿತ್ತು. ಇಲ್ಲಿಯವರೆಗೆ 2ನೇ ಕಂತಿನ ಪರಿಹಾರ ಬಂದಿಲ್ಲ.

    ಜಿಲ್ಲೆಯಲ್ಲಿ 2.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು, 2.05 ಲಕ್ಷ ರೈತರು ಬೆಳೆ ನಷ್ಟ ಎದುರಿಸುತ್ತಿದ್ದಾರೆ. ಇಲ್ಲಿಯವರೆಗೆ 1.54 ಲಕ್ಷ ರೈತರಿಗೆ ಮಾತ್ರ ಸರ್ಕಾರ 227 ಕೋಟಿ ರೂ. ಬೆಳೆಹಾನಿ ಪರಿಹಾರ ಬಿಡುಗಡೆ ಮಾಡಿದೆ. 50 ಸಾವಿರಕ್ಕೂ ಅಧಿಕ ರೈತರಿಗೆ ಇನ್ನೂ ಬೆಳೆಹಾನಿ ಪರಿಹಾರ ಸಿಕ್ಕಿಲ್ಲ.

    ಇದನ್ನೂ ಓದಿ    ಸಚಿನ್ ಬ್ಯಾಟಿಂಗ್ ನೋಡೋಕೆ, ಕ್ಲಾಸ್‌ಗೆ ಚಕ್ಕರ್ ಹಾಕಿದ್ದ ಸ್ಟಾರ್ ಕ್ರಿಕೆಟಿಗ

    ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿ ಪ್ರವಾಹದಿಂದ ಮುಳುಗಡೆಯಾಗಿದ್ದ ಅಥಣಿ, ರಾಮದುರ್ಗ, ಮೂಡಲಗಿ, ಚಿಕ್ಕೋಡಿ ತಾಲೂಕಿನ 20ಕ್ಕೂ ಅಧಿಕ ಹಳ್ಳಿಗಳ ಸ್ಥಳಾಂತರ ಕಾರ್ಯ ಆರಂಭವಾಗಿಲ್ಲ.

    ಜನರ ತುರ್ತು ರಕ್ಷಣೆಗೆ ಬೋಟ್, ಮರುವಸತಿಗೆ ಪರಿಹಾರ ಕೇಂದ್ರಗಳ ಸ್ಥಾಪನೆ ಕುರಿತು ಇನ್ನೂ ಮುಂಜಾಗ್ರತೆ ವಹಿಸಿಲ್ಲ.

    ಚರಂಡಿ ಮತ್ತು ನಾಲಾ ಸ್ವಚ್ಛಗೊಳಿಸುವ, ರಸ್ತೆ, ಸಿ.ಡಿ. ಹಾಗೂ ಸೇತುವೆಗಳ ಬಗ್ಗೆ ಪರಿಶೀಲನೆ ಕೆಲಸವೂ ಆರಂಭವಾಗಿಲ್ಲ.

    ಮೈಸೂರು

    ನಂಜನಗೂಡು, ಎಚ್.ಡಿ.ಕೋಟೆ ಮತ್ತು ಹುಣಸೂರು ತಾಲೂಕು ನೆರೆಯಿಂದ ತತ್ತರಿಸಿದ್ದವು. ಬೆಳೆ ಪರಿಹಾರ ರೈತರಿಗೆ ದೊರೆತಿದೆ. ಆದರೆ, ಮನೆ ಹಾನಿಗೆ ಪೂರ್ಣಪ್ರಮಾಣದ ಪರಿಹಾರ ಇನ್ನೂ ಸಿಕ್ಕಿಲ್ಲ.

    ಇದನ್ನೂ ಓದಿ   ಮದುವೆಗಳಲ್ಲಿ 250 ಜನ ಭಾಗವಹಿಸುವುದಕ್ಕೆ ಅವಕಾಶ: ಮ್ಯಾರೇಜ್ ಹಾಲ್‌ಗಳಿಂದ ಸಿಎಂ ಮೇಲೆ ಒತ್ತಡ

    ಮನೆ ಹಾನಿ ಪರಿಹಾರ ಶೇ.60 ಫಲಾನುಭವಿಗಳಿಗೆ ತಲುಪಿದೆ. ಈ ಪೈಕಿ ಭಾಗಶಃ ಹಾನಿಗೆ ಒಳಗಾದ ‘ಎ’ ಕೆಟಗರಿಯ ಮನೆಗಳಿಗೆ 50 ಸಾವಿರ ರೂ. ಪರಿಹಾರ ದೊರೆತಿದೆ. ಆದರೆ, ಎ ಮತ್ತು ಬಿ ಕೆಟಗರಿಯ ಮನೆಗಳ ಮರು ನಿರ್ಮಾಣ ಕುಂಟುತ್ತ ಸಾಗಿದೆ. ಕೆಲಸಕ್ಕೆ ತಕ್ಕಷ್ಟು ಮಾರ್ಗಸೂಚಿ ಅನ್ವಯ ಹಂತ ಹಂತವಾಗಿ ಪರಿಹಾರ ನೀಡಲಾಗಿದ್ದು, 1, 2, 3 ಲಕ್ಷ ರೂ.ವರೆಗೆ ಮಾತ್ರ ಸಿಕ್ಕಿದೆ. ಪೂರ್ಣ ಪ್ರಮಾಣದ 5 ಲಕ್ಷ ರೂ. ಪರಿಹಾರ ಪಡೆದವರ ಸಂಖ್ಯೆ ಬಹಳ ಕಡಿಮೆ ಇದೆ. ಮನೆ ನಿರ್ಮಾಣ ಮಾಡದ ಜನರಿಗೆ ನೋಟಿಸ್ ಕೂಡ ನೀಡಲಾಗಿದೆ.

    ಎಚ್.ಡಿ.ಕೋಟೆ ತಾಲೂಕಿನ ಬಿದರಹಳ್ಳಿಯಲ್ಲಿ 40 ಕುಟುಂಬಗಳಿಗೂ ಇನ್ನೂ ಮನೆ ನಿರ್ವಿುಸಿಕೊಟ್ಟಿಲ್ಲ. ಗುರುತಿಸಿರುವ ಜಾಗವು ನೀರಾವರಿ ಇಲಾಖೆಯಿಂದ ಕಂದಾಯ ಇಲಾಖೆಗೆ ಹಸ್ತಾಂತರವಾಗದ ಕಾರಣಕ್ಕೆ ಇಡೀ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ.

    ಹುಣಸೂರು ತಾಲೂಕಿನ ಕೋಡಿಹೊಸಹಳ್ಳಿ ಗ್ರಾಮದಲ್ಲಿ 21 ಮನೆಗಳ ಪೈಕಿ 7 ಮನೆಗಳು ಮಾತ್ರ ಪುನರ್ ನಿರ್ವಣಗೊಂಡಿವೆ.

    ಮುನ್ನೆಚ್ಚರಿಕಾ ಕ್ರಮವಾಗಿ ಎಚ್.ಡಿ.ಕೋಟೆ ತಾಲೂಕಿಗಾಗಿ ಮೂರು ಬೋಟ್ ಖರೀದಿಸಲಾಗಿದೆ. ಗಂಜಿಕೇಂದ್ರ ತೆರೆಯಲು ಸ್ಥಳ ಗುರುತಿಸಲಾಗಿದೆ. ಹುಣಸೂರು ತಾಲೂಕಿನಲ್ಲಿ ನೆರೆಪೀಡಿತ ಪ್ರದೇಶದಲ್ಲಿ ಜಾಗೃತಿ ಮೂಡಿಸಲಾಗಿದೆ. ನಂಜನಗೂಡು

    ತಾಲೂಕಿನಲ್ಲೂ ಅಗತ್ಯ ಕ್ರಮವಹಿಸಲಾಗಿದೆ.

    ಇದನ್ನೂ ಓದಿ    ಲಡಾಖ್​ ಬಿಕ್ಕಟ್ಟಿನ ವಿಷಯದಲ್ಲಿ ಹೊಂದಾಣಿಕೆಯ ಮಾತೇ ಇಲ್ಲ

    ಚಿಕ್ಕಮಗಳೂರು

    ಜಿಲ್ಲೆಗೆ ಸರ್ಕಾರದಿಂದ -ಠಿ;267.87 ಕೋಟಿ ಬಿಡುಗಡೆಯಾಗಿದ್ದು, ಬಹುತೇಕ ಕಾಮಗಾರಿ ನಿರ್ವಹಣೆಗೆ ಕರೊನಾ ಅಡ್ಡಿಯಾಗಿದೆ.

    1,716 ಮನೆ ಹಾನಿಯಾಗಿದ್ದು, ಅವುಗಳ ದುರಸ್ತಿ ಮತ್ತು ಮರು ನಿರ್ವಣಕ್ಕಾಗಿ -ಠಿ;43 ಕೋಟಿ ರೂ. ಬಿಡುಗಡೆಯಾಗಿದೆ.

    ಪ್ರಾಣ ಕಳೆದುಕೊಂಡ 9 ಜನರ ಪೈಕಿ 8 ಮಂದಿಯ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದೆ.

    ಬೆಳೆಹಾನಿಯ -ಠಿ;61 ಕೋಟಿ ರೂ. ತಲುಪಿಸಲಾಗಿದೆ.

    ಈ ಬಾರಿ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು ಪ್ರತಿ ತಾಲೂಕು ಕಚೇರಿ, ಸ್ಥಳೀಯ ಸಂಸ್ಥೆ ಮತ್ತು ಪೊಲೀಸ್ ಠಾಣೆಗಳಲ್ಲಿ 24ಗಿ7 ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ.

    ಕಳೆದ ವರ್ಷ 58 ಸ್ಥಳಗಳಲ್ಲಿ ಭೂಕುಸಿತವಾಗಿದ್ದು, ಈ ವರ್ಷ 78 ಸ್ಥಳ ಗುರುತಿಸಲಾಗಿದೆ. ಜೆಸಿಬಿ, ಹಿಟಾಚಿ, ಸ್ವಯಂ ಚಾಲಿತ ಗರಗಸ, ದೋಣಿ ಮತ್ತಿತರ ಸಲಕರಣೆ ಸಿದ್ಧಪಡಿಸಿಕೊಳ್ಳಲು ಸಂಬಂಧಿಸಿದ ಇಲಾಖೆಗೆ ಆದೇಶ ನೀಡಲಾಗಿದೆ.

    ಇದನ್ನೂ ಓದಿ   ಚಿಕ್ಕಮಗಳೂರು- ಬೆಂಗಳೂರು ಪ್ರತಿದಿನ ರೈಲು ಸಂಚಾರಕ್ಕೆ ರೈಲ್ವೆ ಸಚಿವಾಲಯ ತಾತ್ವಿಕ ಒಪ್ಪಿಗೆ

    ದಾವಣಗೆರೆ

    ಜಿಲ್ಲೆಯಲ್ಲಿ 36 ಮನೆ ಸಂಪೂರ್ಣ ಹಾನಿಯಾಗಿದ್ದವು. ಅವುಗಳಲ್ಲಿ 4 ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. ಫಲಾನುಭವಿಗಳಿಗೆ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ.

    ಭಾಗಶಃ ಹಾನಿಗೊಳಗಾದ 1520 ಮನೆಗಳಿಗೆ ತಲಾ 50 ಸಾವಿರ ರೂ. ಪರಿಹಾರವನ್ನು ಕಳೆದ ವರ್ಷವೇ ನೀಡಲಾಗಿದೆ

    8120 ಫಲಾನುಭವಿಗಳಿಗೆ 9 ಕೋಟಿ ರೂ. ಬೆಳೆಹಾನಿ ಪರಿಹಾರ ನೀಡಲಾಗಿದೆ.

    ಹರಿಹರದ ನೀಲಕಂಠ ನಗರ, ಕಾಳಿದಾಸ ನಗರ ಹಾಗೂ ಬೆಂಕಿನಗರದಲ್ಲಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿತ್ತು. ತಡೆಗೋಡೆ ನಿರ್ಮಾಣ ಮಾಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದರು. ಈ ಬಾರಿಯ ಮುಂಗಾರು ಪ್ರಾರಂಭವಾಗಲಿದ್ದು ಇದುವರೆಗೂ ತಡೆಗೋಡೆಯ ನಿರ್ವಣವಾಗಿಲ್ಲ. ಸಾರಥಿ ಮತ್ತು ಚಿಕ್ಕಬಿದರಿ ನಡುವೆ ಸಂಪರ್ಕ ಸೇತುವೆಯನ್ನು ಎತ್ತರ ಮಾಡುವ ಕೆಲಸ ಭರದಿಂದ ಸಾಗಿದೆ.

    ಹಾವೇರಿ

    ಜಿಲ್ಲೆಯಲ್ಲಿ 21 ಗ್ರಾಮಗಳು ಜಲಾವೃತಗೊಂಡಿದ್ದವು. 363 ಮನೆ ಪೂರ್ಣ ಕುಸಿದರೆ, 5,789 ಮನೆ ಅರ್ಧ, 16,747 ಮನೆ ಭಾಗಶಃ ಹಾನಿಗೊಂಡಿದ್ದವು.

    ಪೂರ್ಣ ಬಿದ್ದ ಮನೆಗಳಿಗೆ 2ನೇ ಕಂತು ಬಿಡುಗಡೆಯಾಗಿಲ್ಲ. ಫಲಾನುಭವಿಗಳೇ ಸಾಲ ಮಾಡಿ ಮನೆ ನಿರ್ವಿುಸಿಕೊಳ್ಳಲು ಆರಂಭಿಸಿದ್ದಾರೆ.

    ಮನೆಬಿದ್ದ ಕೂಡಲೆ ಕೊಟ್ಟ -ಠಿ;1 ಲಕ್ಷ ಮಾತ್ರ ಸಿಕ್ಕಿದೆ. ಪ್ರತಿ ತಿಂಗಳು ಬಾಡಿಗೆ ನೀಡಬೇಕಿದ್ದ -ಠಿ;5 ಸಾವಿರ ಬಂದಿಲ್ಲ.

    ಬಿ ವರ್ಗದ ಮನೆಗಳಿಗೆ 50 ಸಾವಿರ ರೂ.ನಂತೆ ಪರಿಹಾರ ನೀಡಿದ್ದು, 2ನೇ ಕಂತಿನ ಹಣ ಬರದೇ ಇರುವುದರಿಂದ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದೆ.

    ತಾಳಿಯನ್ನೇ ಅಡವಿಟ್ಟು ತಿಥಿ ಮುಗಿಸಿದ ಕರೊನಾ ಸೇನಾನಿಯ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts