More

    ಉತ್ತರ ಕನ್ನಡದ ಈ ಗ್ರಾಮದಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆ

    ಕಾರವಾರ: ಮಳೆಯ ಆರ್ಭಟಕ್ಕೆ ಉತ್ತರ ಕನ್ನಡ ತತ್ತರಿಸಿದೆ. ಭಾನುವಾರ ರಾತ್ರಿ ಹಾಗೂ ಸೋಮವಾರ ಎಡಬಿಡದೇ ಸುರಿದ ಮಳೆಗೆ ನೆರೆ ಆವರಿಸಿದ್ದು, ಲೆಕ್ಕವಿಲ್ಲದಷ್ಟು ಅನಾಹುತಗಳಾಗಿವೆ.

    ಜು.25 ರಂದು ರೆಡ್ ಅಲರ್ಟ್ ಘೋಷಿಸಲಾಗಿದ್ದು, 204 ಮಿಮೀಗಿಂತ ಅಽಕ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಜು.26, ಹಾಗೂ 27 ರಂದು ಆರೇಂಜ್ ಅಲರ್ಟ್ ಘೋಷಿಸಲಾಗಿದೆ.

    ಈ ಹಿನ್ನೆಲೆಯಲ್ಲಿ ಅಂಗನವಾಡಿ, ಶಾಲೆ ಹಾಗೂ ದ್ವಿತೀಯ ಪಿಯುಸಿವರೆಗಿನ ಕಾಲೇಜ್‌ಗಳಿಗೆ ಜು.25 ರಂದೂ ರಜೆ ವಿಸ್ತರಿಸಲಾಗಿದೆ.
    ದಾಖಲೆ ಮಳೆ:
    ಸೋಮವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳಲ್ಲಿ ಸಿದ್ದಾಪುರ ತಾಲೂಕಿನ ಕೋಡ್ಕಣಿ ವ್ಯಾಪ್ತಿಯಲ್ಲಿ 321.5 ಮಿಮೀ ಮಳೆಯಾಗಿದ್ದು, ಇದು ಇಂದು ರಾಜ್ಯದಲ್ಲಿಯೇ ಅತಿ ಹೆಚ್ಚು ಮಳೆ ಬಿದ್ದ ಗ್ರಾಮವಾಗಿದೆ.

    ಬಿಳಗಿ ವ್ಯಾಪ್ತಿಯಲ್ಲಿ 235, ಕುಮಟಾ ಹೆಗಡೆಯಲ್ಲಿ 210 ಮಿಮೀ ಮಳೆಯಾಗಿದೆ. ಸಿದ್ದಾಪುರದ ಉಳಿದ ಗ್ರಾಪಂ ವ್ಯಾಪ್ತಿಯಲ್ಲೂ ಸರಾಸರಿ 140 ಮಿಮೀಗಿಂತ ಹೆಚ್ಚು ಮಳೆಯಾಗಿದೆ.

    ಅಂಕೋಲಾದಲ್ಲಿ -133.3, ಭಟ್ಕಳ-139, ಹಳಿಯಾಳ-48.9, ಹೊನ್ನಾವರ-137.6, ಕಾರವಾರ-118.7, ಕುಮಟಾ-120.3, ಮುಂಡಗೋಡ-72.7, ಸಿದ್ದಾಪುರ-142, ಶಿರಸಿಯಲ್ಲಿ -103.9, ಜೊಯಿಡಾದಲ್ಲಿ 105.1, ಯಲ್ಲಾಪುರ-101.7, ದಾಂಡೇಲಿ-54.3 ಮಿಮೀ ಮಳೆಯಾಗಿದೆ.

    ಮಳೆಯಿಂದ ಯಲ್ಲಾಪುರದ ಒಂದು ಮನೆ ಸಂಪೂರ್ಣ ಬಿದ್ದು ಹೋಗಿದೆ. ಅಂಕೋಲಾ,ಶಿರಸಿಯಲ್ಲಿ ತಲಾ-3, ಹೊನ್ನಾವರ-5, ಹಳಿಯಾಳ-4, ಭಟ್ಕಳ, ಕಾರವಾರ, ಕುಮಟಾ, ಯಲ್ಲಾಪುರ, ಮುಂಡಗೋಡಿನಲ್ಲಿ ತಲಾ-2, ದಾಂಡೇಲಿಯಲ್ಲಿ 1 ಮನೆಗೆ ಭಾಗಶಃ ಹಾನಿಯಾಗಿದೆ. ಭಾನುವಾರ ತೆರೆಯಾಗಿದ್ದ ಕೊಡಸಳ್ಳಿ, ಬೊಮ್ಮನಹಳ್ಳಿ ಅಣೆಕಟ್ಟೆಗಳ ಗೇಟ್‌ಗಳನ್ನು ಮುಚ್ಚಲಾಗಿದೆ. ಕದ್ರಾದಿಂದ 61 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.

    ಜಲಾಶಯಗಳ ನೀರಿನ ಮಟ್ಟ
    ಅಣೆಕಟ್ಟೆ ಗರಿಷ್ಠ ಮಟ್ಟ ಇಂದಿನ ಮಟ್ಟ
    ಕದ್ರಾ 34.50 30.09
    ಕೊಡಸಳ್ಳಿ 75.50 69.28
    ಸೂಪಾ 564.00 538.00
    ಗೇರುಸೊಪ್ಪ 55.00 51.44

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts