More

    ಬಿಹಾರ ಚುನಾವಣೆ ಪ್ರಚಾರಕ್ಕೆ ವಿಡಿಯೋ ಮೂಲಕವೇ ಅಮಿತ್ ಷಾ ರ‌್ಯಾಲಿ

    ಪಟನಾ: ಕರೊನಾ ಲಾಕ್‌ಡೌನ್ ನಿಯಮಗಳು ಇನ್ನೂ ಅಸ್ತಿತ್ವದಲ್ಲಿ ಇರುವುದರಿಂದ ಈಗ ಎಲ್ಲಿಯೂ ರಾಜಕೀಯ ರ‌್ಯಾಲಿಗಳಿಗೆ ಜನರನ್ನು ಸೇರಿಸುವಂತಿಲ್ಲ. ಹಾಗಾಗಿ ಬಿಜೆಪಿ ನಾಯಕರು ಅದಕ್ಕೊಂದು ಉಪಾಯ ಕಂಡುಕೊಂಡಿದ್ದಾರೆ.

    ಬಿಹಾರ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಬಿಜೆಪಿ ವಿಡಿಯೋ ಕಾನ್ಫರೆನ್ಸ್ ಮೂಲಕ ರ‌್ಯಾಲಿಗಳನ್ನು ನಡೆಸಲು ಮುಂದಾಗಿದೆ.

    ಇದನ್ನೂ ಓದಿ  ಮದುವೆಗಳಲ್ಲಿ 250 ಜನ ಭಾಗವಹಿಸುವುದಕ್ಕೆ ಅವಕಾಶ: ಮ್ಯಾರೇಜ್ ಹಾಲ್‌ಗಳಿಂದ ಸಿಎಂ ಮೇಲೆ ಒತ್ತಡ

    ಆರಂಭಿಕವಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಜೂನ್ 9ರಂದು ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಮತದಾರರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ವಿಡಿಯೋ ಕಾನ್ಫರೆನ್ಸ್ ರ‌್ಯಾಲಿ ಮೂಲಕ ಸುಮಾರು 1 ಲಕ್ಷ ಜನರನ್ನು ತಲುಪುವ ನಿರೀಕ್ಷೆ ಇದೆ ಎಂದು ಬಿಹಾರದ ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಜೈಸಾಲ್ ಹೇಳಿದ್ದಾರೆ.

    ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಉತ್ತರ ಬಿಹಾರ ಮತ್ತು ದಕ್ಷಿಣ ಬಿಹಾರದ ಜನತೆಯನ್ನುದ್ದೇಶಿಸಿ ಎರಡು ಹಂತಗಳಲ್ಲಿ ರ‌್ಯಾಲಿ ನಡೆಸಲಿದ್ದಾರೆ. ಕರೊನಾ ಬಿಕ್ಕಟ್ಟಿನ ಪರಿಸ್ಥಿತಿ ಹಿನ್ನೆಲೆ ಸಭೆ-ಸಮಾರಂಭಗಳಿಗೆ ನಿಷೇಧವಿರುವುದರಿಂದ ವರ್ಷಾಂತ್ಯಕ್ಕೆ ನಡೆಯಲಿರುವ ಚುನಾವಣೆಗೂ ಮುಂಚೆ ಹೆಚ್ಚು ಮತದಾರರನ್ನು ತಲುಪಲು ಬಿಜೆಪಿ ಈ ಯೋಜನೆ ರೂಪಿಸಿದೆ. ಬಿಹಾರದಲ್ಲಿ ಜೆಡಿಯು ಜತೆಗೆ ಮೈತ್ರಿ ಹೊಂದಿರುವ ಹಿನ್ನೆಲೆ ಬಿಜೆಪಿಗೆ ಈ ಚುನಾವಣೆ ಹೆಚ್ಚು ಪ್ರಯಾಸದಾಯಕವಾಗಿಲ್ಲ.

    ಅಂತಿಮ ವರ್ಷದ ಪದವಿ ಪರೀಕ್ಷೆಯೂ ರದ್ದು, ಸರಾಸರಿ ಅಂಕ ನೀಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts