More

    ಬೆಂಗಳೂರಿನಲ್ಲಿ 11 ವರ್ಷಗಳ ಬಳಿಕ ಆಡಲಿದೆ ಪಾಕಿಸ್ತಾನ ತಂಡ; ಒಲಿದೀತೇ ಲಕ್​?

    ಬೆಂಗಳೂರು: ಐದು ಬಾರಿಯ ಚಾಂಪಿಯನ್​ ಆಸ್ಟ್ರೆಲಿಯಾ ಮತ್ತು ಪಾಕಿಸ್ತಾನ ತಂಡಗಳು ಏಕದಿನ ವಿಶ್ವಕಪ್​ನಲ್ಲಿ ಶುಕ್ರವಾರ ಉದ್ಯಾನನಗರಿಯಲ್ಲಿ ಮುಖಾಮುಖಿ ಆಗಲಿವೆ. ಪಾಕಿಸ್ತಾನ ತಂಡ ಬರೋಬ್ಬರಿ 11 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಪಂದ್ಯ ಆಡಲಿದೆ. 2012ರ ಡಿಸೆಂಬರ್​ 25ರಂದು ಕೊನೆಯದಾಗಿ ಭಾರತದ ವಿರುದ್ಧ ಟಿ20 ಪಂದ್ಯ ಆಡಿದ್ದ ಪಾಕ್​ ಅದರಲ್ಲಿ ಗೆಲುವು ಸಾಧಿಸಿತ್ತು.

    ಪಾಕ್​ ತಂಡ 24 ವರ್ಷಗಳ ಹಿಂದೆ ಅಂದರೆ 1999ರಲ್ಲಿ ಕೊನೆಯದಾಗಿ ಬೆಂಗಳೂರಿನಲ್ಲಿ ಭಾರತದ ವಿರುದ್ಧ ಏಕದಿನ ಪಂದ್ಯವಾಡಿದಾಗಲೂ ಗೆಲುವು ಸಾಧಿಸಿತ್ತು. ಅದಕ್ಕೆ ಮುನ್ನ 1996ರ ವಿಶ್ವಕಪ್​ ಕ್ವಾರ್ಟರ್​ಫೈನಲ್​ನಲ್ಲಿ ಆಡಿದಾಗ ಪಾಕ್​ ತಂಡ ಭಾರತಕ್ಕೆ ಶರಣಾಗಿತ್ತು. ಇನ್ನು ಟೆಸ್ಟ್​ನಲ್ಲಿ 5 ಬಾರಿ ಬೆಂಗಳೂರಿನಲ್ಲಿ ಆಡಿರುವ ಪಾಕ್​, 2ರಲ್ಲಿ ಗೆದ್ದು, 3ರಲ್ಲಿ ಡ್ರಾ ಸಾಧಿಸಿದೆ.

    ಅಗ್ಗದ ಟಿಕೆಟ್​ಗಳು ಸೋಲ್ಡ್​ಔಟ್​
    ಆಸೀಸ್​-ಪಾಕ್​ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಬಹುತೇಕ ಭರ್ತಿಯಾಗುವ ನಿರೀೆ ಇದೆ. 1, 2, 3 ಸಾವಿರ ರೂ. ಮುಖಬೆಲೆಯ ಟಿಕೆಟ್​ಗಳು ಸೋಲ್ಡ್​ಔಟ್​ ಆಗಿವೆ. 5 ಸಾವಿರ ರೂ. ಮೇಲ್ಪಟ್ಟ ಟಿಕೆಟ್​ಗಳಷ್ಟೇ ಲಭ್ಯವಿವೆ.

    ಚಿನ್ನಸ್ವಾಮಿಯಲ್ಲಿ 4ನೇ ಬಾರಿ ವಿಶ್ವಕಪ್​ ಆತಿಥ್ಯ
    ಚಿನ್ನಸ್ವಾಮಿ ಕ್ರೀಡಾಂಗಣ 4ನೇ ಬಾರಿ ಏಕದಿನ ವಿಶ್ವಕಪ್​ ಟೂರ್ನಿಯ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಈ ಮುನ್ನ 1987 ಮತ್ತು 1996ರಲ್ಲಿ ಭಾರತದಲ್ಲಿ ವಿಶ್ವಕಪ್​ ನಡೆದಾಗ ತಲಾ 1 ಪಂದ್ಯಗಳಿಗೆ ಆತಿಥ್ಯ ವಹಿಸಿದ್ದ ಚಿನ್ನಸ್ವಾಮಿ ಸ್ಟೇಡಿಯಂ, 2011ರಲ್ಲಿ 5 ಪಂದ್ಯಗಳನ್ನು ಆಯೋಜಿಸಿತ್ತು. ಈ ಸಲವೂ ಮತ್ತೆ 5 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. 1996ರಲ್ಲಿ ಭಾರತ&ಪಾಕ್​ ನಡುವೆ ನಡೆದ ಕ್ವಾರ್ಟರ್​ಫೈನಲ್​ ಪಂದ್ಯ ಬೆಂಗಳೂರಿನಲ್ಲಿ ಮೊದಲ ಅಹರ್ನಿಶಿ ಪಂದ್ಯವೂ ಆಗಿತ್ತು.

    ವಿಶ್ವಕಪ್​ನಲ್ಲಿ ಮುಂದಿನ 3 ಪಂದ್ಯಗಳಿಗೆ ಕೇನ್​ ವಿಲಿಯಮ್ಸನ್​ ಅಲಭ್ಯ; ಭಾರತಕ್ಕೂ ಸಿಹಿಸುದ್ದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts