More

    ಆಕ್ಸ್​ಫರ್ಡ್​ನ ChAdOx1 nCoV-19 ಚುಚ್ಚುಮದ್ದು 10,260 ಜನರ ಮೇಲೆ ಪ್ರಯೋಗ

    ನವದೆಹಲಿ: ಇಂಗ್ಲೆಂಡ್​ನ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ ಔಷಧ ಕಂಪನಿ ಜಂಟಿಯಾಗಿ ChAdOx1 nCoV-19 ಎಂಬ ಕೋವಿಡ್​ ನಿರೋಧಕ ಚುಚ್ಚುಮದ್ದನ್ನು ಅಭಿವೃದ್ಧಿಪಡಿಸಿವೆ. ಇದರ ಕ್ಲಿನಿಕಲ್​ ಪರೀಕ್ಷೆ ಅಂತಿಮ ಘಟ್ಟದಲ್ಲಿದ್ದು, ಹಿರಿಯ ನಾಗರಿಕರು ಮತ್ತು ಮಕ್ಕಳು ಸೇರಿ ಬ್ರಿಟನ್​ನ 10,260 ಜನರ ಮೇಲೆ ಇದನ್ನು ಪ್ರಯೋಗಿಸಲಾಗುತ್ತಿದೆ.

    ಬ್ರೆಜಿಲ್​ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕೂಡ ಇದರ ಕ್ಲಿನಿಕಲ್​ ಟ್ರಯಲ್​ ಮಾಡಲಾಗುತ್ತಿದೆ. ಈ ಚುಚ್ಚುಮದ್ದನ್ನು ಭಾರತದಲ್ಲಿ ಉತ್ಪಾದಿಸಿ, ಕೆಳ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳಿಗೂ ಸುಲಭದರದಲ್ಲಿ ಸರಬರಾಜು ಮಾಡಲು ಅನುವಾಗುವಂತೆ ಮಾಡಲು ಸೆರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ (ಎಸ್​ಐಐ) 756.27 ಕೋಟಿ ರೂಪಾಯಿ ಹೂಡಿಕೆ ಮಾಡಿದೆ.

    ಚಿಂಪಾಂಜಿಗಳಲ್ಲಿ ಶೀತ ಮತ್ತು ನೆಗಡಿಯ ಸೋಂಕು ಉಂಟು ಮಾಡುವ ವೈರಾಣು (adenovirus) ಅನ್ನು ತೆಗೆದುಕೊಂಡು, ದುರ್ಬಲಗೊಳಿಸಿ ChAdOx1 nCoV-19 ಚುಚ್ಚುಮದ್ದನ್ನು ಸಿದ್ಧಪಡಿಸಲಾಗುತ್ತಿದೆ. ಮಾನವರಲ್ಲಿ ಬೇರಾವುದೇ ಸೋಂಕು ಉಂಟು ಮಾಡದಂತೆ ಈ ವೈರಾಣುವಿನ ಜೆನೆಟಿಕ್ಸ್​ ಅನ್ನು ರೂಪಾಂತರಗೊಳಿಸಲಾಗಿದೆ.

    ಇದನ್ನೂ ಓದಿ: ಗಿಲ್​ಲೀಡ್​ ಸೈನ್ಸಸ್​ನ ಕೋವಿಡ್​ ಚುಚ್ಚುಮದ್ದು ಒಂದರ ಬೆಲೆ ಕೇಳಿದರೆ ಹೌಹಾರುತ್ತೀರಾ!

    ChAdOx1 nCoV-19 ಚುಚ್ಚುಮದ್ದಿನ ಕ್ಲಿನಿಕಲ್​ ಅಧ್ಯಯನ ನಿರೀಕ್ಷೆಯಂತೆ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಹಿರಿಯ ನಾಗರಿಕರ ಮೇಲೆ ಈ ಔಷಧ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಸದ್ಯ ಅಧ್ಯಯನ ಸಾಗುತ್ತಿದೆ. ತನ್ಮೂಲಕ ಹೆಚ್ಚಿನ ಜನರಿಗೆ ಕೋವಿಡ್​ ಸೋಂಕಿನಿಂದ ರಕ್ಷಣೆ ಕೊಡುತ್ತದೆಯೇ ಎಂಬುದನ್ನು ಅರಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಆಕ್ಸ್​ಫರ್ಡ್​ ವ್ಯಾಕ್ಸಿನ್​ ಗ್ರೂಪ್​ನ ಮುಖ್ಯಸ್ಥ ಪ್ರೊ. ಆಂಡ್ಯ್ರೂ ಪೊಲ್ಲಾರ್ಡ್​ ಹೇಳಿದ್ದಾರೆ.

    ಒಂದು ವೇಳೆ ಕ್ಲಿನಿಕಲ್​ ಟ್ರಯಲ್​ ಯಶಸ್ವಿಯಾದರೆ ವರ್ಷಾಂತ್ಯದಲ್ಲಿ ಈ ಚುಚ್ಚುಮದ್ದಿನ ಉತ್ಪಾದನೆಯನ್ನು ಆರಂಭಿಸುವುದು ಆಕ್ಸ್​ಫರ್ಡ್​ ವ್ಯಾಕ್ಸಿನ್​ ಗ್ರೂಪ್​ನ ಉದ್ದೇಶವಾಗಿದೆ. ಒಂದು ವೇಳೆ ಇದು ಆಗಿದ್ದೇ ಆದಲ್ಲಿ, ನಿಗದಿಗ ಅನುಮೋದನೆ ಪಡೆದು ಪ್ರಯೋಗಾಲಯದಿಂದ ತುಂಬಾ ಶೀಘ್ರವಾಗಿ ಉತ್ಪಾದನಾ ಹಂತ ತಲುಪಿದ ರೋಗನಿರೋಧಕ ಚುಚ್ಚುಮದ್ದು ಎಂಬ ಹೆಗ್ಗಳಿಕೆ ಇದ್ದರದ್ದಾಗಲಿದೆ.

    ಎಸ್​ಎಸ್​ಎಲ್​ಸಿ ಪರೀಕ್ಷೆಗೂ ಮುನ್ನವೇ ದುರಂತ ಅಂತ್ಯಕಂಡ ವಿದ್ಯಾರ್ಥಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts