More

    ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ಸಿಕ್ಕಿದ್ದು 12% ರೈತರಿಗೆ ಮಾತ್ರ

    ನವದೆಹಲಿ: ದೇಶದಲ್ಲಿ 2018-19ನೇ ಸಾಲಿನಲ್ಲಿ ಭತ್ತ ಬೆಳೆದ ರೈತರ ಪೈಕಿ ಶೇ. 12 ರೈತರಿಗೆ ಮಾತ್ರ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ದೊರೆತಿದೆ. ದೇಶಾದ್ಯಂತ 8 ಕೋಟಿಗೂ ಅಧಿಕ ರೈತರು ಭತ್ತ ಬೆಳೆಯುತ್ತಿದ್ದು, ಅದರಲ್ಲಿ 97 ಲಕ್ಷ ರೈತರು ಮಾತ್ರ ಎಂಎಸ್​ಪಿ ಪಡೆದುಕೊಂಡಿದ್ದಾರೆ.

    ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಎಂಎಸ್​ಪಿ ಪಡೆದುಕೊಂಡಿವೆ. ಪಂಜಾಬ್​ನ ಶೇ. 95 ಭತ್ತ ಬೆಳೆಗಾರರು ಮತ್ತು ಹರಿಯಾಣದ ಶೇ. 70 ಬೆಳೆಗಾರರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಪಶ್ಚಿಮ ಬಂಗಾಳದ ಶೇ. 7.3 ರೈತರು, ಉತ್ತರ ಪ್ರದೇಶದ ಶೇ. 3.6 ರೈತರು, ಒಡಿಶಾದ ಶೇ. 20.6 ರೈತರು ಮತ್ತು ಬಿಹಾರದ ಶೇ. 1.7 ರೈತರು ಎಂಎಸ್​ಪಿ ಲಾಭ ಪಡೆದಿದ್ದಾರೆ.

    ಇದನ್ನೂ ಓದಿ: ಪರಸ್ಪರರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಕೆ.ಕಲ್ಯಾಣ್​ ದಂಪತಿ; ಶೀಘ್ರದಲ್ಲೇ ವಿಡಿಯೋ ಬಿಡುಗಡೆ ಮಾಡ್ತಾರಂತೆ…!

    ಪಂಜಾಬ್ ಮತ್ತು ಹರಿಯಾಣದಲ್ಲಿ ಹೆಚ್ಚಿನ ಫಲಾನುಭವಿಗಳಿರುವ ಕಾರಣದಿಂದಲೇ ಈ ಎರಡೂ ರಾಜ್ಯಗಳಲ್ಲಿ ಇದೀಗ ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರತಿಭಟನೆ ಹೆಚ್ಚಿದೆ. ಹಲವು ರಾಜ್ಯಗಳಲ್ಲಿ ಸಣ್ಣ ಪ್ರಮಾಣದ ರೈತರು ಹೆಚ್ಚಿದ್ದು, ಅವರಿಗೆ ಕನಿಷ್ಠ ಬೆಂಬಲ ಬೆಲೆ ಪಡೆಯುವುದಕ್ಕೆ ಅವಕಾಶಗಳು ಸಿಗುತ್ತಿಲ್ಲ.
    ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಮುಂಗಾರು ಬೆಳೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ. ರೈತರು ಎಂಎಸ್​ಪಿಗಿಂತ ಕಡಿಮೆ ಬೆಲೆಯಲ್ಲಿ ಬೆಳೆ ಮಾರಾಟ ಮಾಡುತ್ತಿದ್ದಾರೆ ಎಂದು ಕೃಷಿ ಸಚಿವಾಲಯದ ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ (ಸಿಎಸಿಪಿ) ತಿಳಿಸಿದೆ. (ಏಜೆನ್ಸೀಸ್)

    ಗಲ್ವಾನ್ ಕಣಿವೆ ವೀರರ ನೆನಪಿನ ಸ್ಮಾರಕ ನಿರ್ಮಿಸಿದೆ ಸೇನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts