More

    ಕಳ್ಳತನ ಮಾಡಿದ ಆರೋಪಿ 24 ಗಂಟೆಯೊಳಗೆ ಬಂಧನ

    ಯಳಂದೂರು: ಸಂತೇಮರಹಳ್ಳಿಯ ಮನೆಯಲ್ಲಿ ಭಾನುವಾರ ಹಾಡಹಗಲೇ ಕಳ್ಳತನ ಮಾಡಿದ್ದ ಪ್ರಕರಣವನ್ನು ಪೊಲೀಸರು 24 ಗಂಟೆ ಒಳಗೆ ಕಾರ್ಯಾಚರಣೆ ಮಾಡಿ ಮಾಲು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ನೇತ್ರಾವತಿ ಎಂಬುವರ ಆಸ್ಪತ್ರೆಯ ಸಮೀಪದ ವಸತಿ ಗೃಹದಲ್ಲಿ ಇವರು ಎಂದಿನಂತೆ ಭಾನುವಾರ ಕೆಲಸಕ್ಕೆ ಹೋಗಿದ್ದರು. ಆ ಸಮಯದಲ್ಲಿ ಕಳ್ಳ ಮುಂಬಾಗಿಲ ಬೀಗವನ್ನು ಮುರಿದು ಟಿ.ವಿ, ಗ್ಯಾಸ್ ಸಿಲಿಂಡರ್, ಚಿನ್ನ ಸೇರಿದಂತೆ ಒಟ್ಟು 3.30 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದ.

    ನಂತರ ಮನೆಗೆ ಬಂದ ಪತಿ ಕುಮಾರ ಮನೆಯ ಬಾಗಿಲು ಮುರಿದಿರುವುದನ್ನು ಗಮನಿಸಿ ತಕ್ಷಣ ಪತ್ನಿ ನೇತ್ರಾವತಿ ಕರೆ ಮಾಡಿ ಮಾಹಿತಿ ನೀಡಿ, ಬಳಿಕ ಸಂತೇಮರಹಳ್ಳಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರು. ಈ ಬಗ್ಗೆ ತಕ್ಷಣ ಚಾಮರಾಜನಗರ ಎಸ್ಪಿ ಪದ್ಮಿನಿ ಸಾಹು ಅವರ ನಿರ್ದೇಶನದ ಮೇರೆಗೆ ಸಿಪಿಐ ಬಸವರಾಜು, ಪಿಎಸ್‌ಐ ಚಂದ್ರಹಾಸ್ ನಾಯಕ್ ಅವರು ಕಾರ್ಯಾಚರಣೆ ಮಾಡಿ ಸೋಮವಾರ ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡಿದ ಮೇಲೆ 46.26 ಗ್ರಾಂ ತೂಕದ ಚಿನ್ನದ ಆಭರಣಗಳು, ಒಂದು ಗ್ಯಾಸ್ ಸಿಲಿಂಡರ್, ಟಿವಿ ಸೇರಿದಂತೆ 3.30 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಯಶ್ವಸಿಯಾಗಿದ್ದಾರೆ.

    ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಪಿಎಸ್‌ಐ ಮಂಜುನಾಥ್ ಪ್ರಸಾದ್, ಸಿಬ್ಬಂದಿ ಮಾದೇಶ್, ರಮೇಶ್, ಸುಂದ್ರಪ್ಪ, ಸುರೇಶ್ ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts