More

    ಅಪ್ರಾಪ್ತೆಗೆ ಮಗು ಜನನ, ದೂರು ದಾಖಲು

    ಯಳಂದೂರು: ಪಟ್ಟಣದಲ್ಲಿ ಅಪ್ರಾಪ್ತೆಗೆ (17) ಮಗುವೊಂದು ಜನಿಸಿರುವುದು ತಡವಾಗಿ ಬೆಳಕಿಗೆ ಬಂದಿದ್ದು ಈ ಬಗ್ಗೆ ಯಳಂದೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಚಾಮರಾಜನಗರ ತಾಲೂಕಿನ ಪ್ರಾಥಮಿಕ ಆಸ್ಪತ್ರೆಗೆ ಕಳೆದ ಭಾನುವಾರ ಅಪ್ರಾಪ್ತೆ ಹೆರಿಗೆಗೆ ಬಂದಿದ್ದಳು. ಆ ವೇಳೆ ಹೆರಿಗೆ ಮಾಡಿಸಿದ ಮೇಲೆ ಆಸ್ಪತ್ರೆಗೆ ಸಂಬಂಧಪಟ್ಟ ಅಗತ್ಯ ದಾಖಲಾತಿಗಳನ್ನು ನೀಡಬೇಕೆಂದು ವೈದ್ಯರು ಸೂಚಿಸಿದ್ದಾರೆ. ಆದರೆ ದಾಖಲಾತಿಗಳನ್ನು ನೀಡಲು ಅಪ್ರಾಪ್ತೆ ಕಡೆಯವರು ಪರದಾಡಿದ್ದಾರೆ. ಈ ಬಗ್ಗೆ ಅನುಮಾನ ಬಂದಾಗ ತಕ್ಷಣ ಸಂತೆಮರಹಳ್ಳಿ ಶಿಶು ಮತ್ತು ಮಕ್ಕಳ ಯೋಜನಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಿ ಪರಿಶೀಲಿಸುವಂತೆ ಸೂಚಿಸಿದ್ದಾರೆ. ಅಧಿಕಾರಿಗಳು ಪರಿಶೀಲಿಸಿದಾಗ ಹೆರಿಗೆಯಾದವಳು ಅಪ್ರಾಪ್ತೆ ಎಂದು ತಿಳಿದ ಮೇಲೆ ಈ ಬಗ್ಗೆ ಅಧಿಕಾರಿಗಳು ದೂರು ನೀಡಿದ್ದಾರೆ. ಹುಡುಗಿ ಹಾಗೂ ಮಗು ಆರೋಗ್ಯದಿಂದ ಇದ್ದು, ಈ ಬಗ್ಗೆ ಪೊಲೀಸ್ ಸಿಬ್ಬಂದಿ ಕುಟುಂಬದವರರನ್ನು ವಿಚಾರಣೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts