More

    ಕಸ್ಟಮ್ಸ್ ಅಧಿಕಾರಿಗಳು ತಡೆದು ಪ್ರಶ್ನಿಸಿದಾಗ ಬೆಬ್ಬೆಬ್ಬೆ ಎಂದ; ಬಾಯೊಳಗಿತ್ತು ಚಿನ್ನ!

    ಬೆಂಗಳೂರು: ಚಿನ್ನದ ಕಳ್ಳಸಾಗಣೆದಾರರು ಎಲ್ಲೆಲ್ಲೋ ಚಿನ್ನವನ್ನು ಇಟ್ಟುಕೊಂಡು ಅಕ್ರಮ ಎಸಗುವುದು ಹೊಸದೇನಲ್ಲ. ಇಲ್ಲೊಬ್ಬ ಅಂಥದ್ದೇ ಒಂದು ಪ್ರಯತ್ನ ಮಾಡಲು ಹೋಗಿ ಕೊನೆಗೂ ಕಸ್ಟಮ್ಸ್​ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.

    ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಪ್ರಯಾಣಿಕನೊಬ್ಬ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಧಿಕಾರಿಗಳು ಎಂದಿನಂತೆ ಪ್ರಯಾಣಿಕರನ್ನು ತಡೆದು ಪ್ರಶ್ನಿಸಿದ ವೇಳೆ ಈ ಪ್ರಯಾಣಿಕ ಮಾತನಾಡಲು ಕಷ್ಟಪಟ್ಟಿದ್ದಾನೆ. ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಬೆಬ್ಬೆಬ್ಬೆ ಎಂದು ತಡವರಿಸಿದ್ದಾನೆ.

    ಇದನ್ನೂ ಓದಿ: ಬಿರಿಯಾನಿ ತಿನ್ನಲು ಹೋಗಿ 2 ಲಕ್ಷ ರೂಪಾಯಿ ಕಳೆದುಕೊಂಡ ಆಟೋ ಚಾಲಕ!

    ಅನುಮಾನ ಬಂದ ಅಧಿಕಾರಿಗಳು ಹೆಚ್ಚಿನ ತಪಾಸಣೆಗೆ ಒಳಪಡಿಸಿದಾಗ ಬಾಯೊಳಗೆ ಚಿನ್ನದ ಗಟ್ಟಿ ಇಟ್ಟುಕೊಂಡು ಕಳ್ಳಸಾಗಣೆ ಮಾಡುತ್ತಿರುವುದು ಕಂಡುಬಂದಿದೆ. ಚೆನ್ನೈ ಮೂಲದ ಈ ಪ್ರಯಾಣಿಕನಿಂದ 4.9 ಲಕ್ಷ ರೂಪಾಯಿ ಮೌಲ್ಯದ ಒಟ್ಟು 100 ಗ್ರಾಂ ತೂಕದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಲಸಿಕೆ ಪಡೆದು ಮನೆಗೆ ಮರಳುವಷ್ಟರಲ್ಲೇ ಮೃತಪಟ್ಟ ಮಹಿಳೆ!; ಮಾರುಕಟ್ಟೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದು ಸಾವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts