More

    ತಾಳ್ಮೆ, ಸಹಬಾಳ್ವೆಯ ಸಂಕೇತವಾಗಿದ್ದ ಜಗತ್ತಿನ ಅತ್ಯಂತ ಮುದಿ ಸಿಂಹ ಹತ್ಯೆ!

    ನೈರೋಬಿ: ಜಗತ್ತಿನ ಅತ್ಯಂತ ವಯಸ್ಸಾದ ಸಿಂಹಗಳಲ್ಲಿ ಒಂದಾದ ‘ಲೂನ್ಕಿಟೊ’ ಕೀನ್ಯಾದ ನೈರೋಬಿಯಲ್ಲಿ ಹತ್ಯೆ ಆಗಿದೆ. 19 ವರ್ಷದ ಈ ಗಂಡು ಸಿಂಹ ‘ತಾಳ್ಮೆ ಮತ್ತು ಸಹಬಾಳ್ವೆಯ ಸಂಕೇತವಾಗಿತ್ತು’ ಎಂದು ವನ್ಯಪ್ರಾಣಿ ಸಂರಕ್ಷಣಾ ಸಂಸ್ಥೆ ‘ಲಯನ್ ಗಾರ್ಡಿಯನ್ಸ್’ ವರ್ಣಿಸಿದೆ. ’ಲೂನ್ಕಿಟೊ’ವನ್ನು ಕುರಿಗಾಹಿಗಳು ಭರ್ಜಿಯಿಂದ ಇರಿದು ಕೊಂದರು ಎಂದು ವನ್ಯಜೀವಿ ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರಖ್ಯಾತ ಆಂಬೊಸೆಲಿ ರಾಷ್ಟ್ರೀಯ ಪಾರ್ಕ್​ನ ಹೊರವಲಯದಲ್ಲಿ ಈ ಸಿಂಹವನ್ನು ಬಿಡಲಾಗಿತ್ತು. ಮಾಸಯ್ ಮೊರಾನ್ ಸಮುದಾಯದವರ ಭರ್ಜಿಯಿಂದ ಅದರ ಮೇಲೆ ದಾಳಿ ನಡೆಸಿದ್ದಾರೆ ಎಂದು ಕೀನ್ಯಾ ವನ್ಯಜೀವಿ ಸೇವೆ (ಕೆಡಬ್ಲ್ಯುಎಸ್) ವಕ್ತಾರ ಪೌಲ್ ಜಿನಾರೊ ಹೇಳಿದ್ದಾರೆ.

    ಇದನ್ನೂ ಓದಿ: ಅಂಬಲಿ ಹಳಸೀತು ಕಂಬಳಿ ಬೀಸೀತಲೇ ಪರಾಕ್! ನಿಜವಾಯಿತು ಮೈಲಾರಲಿಂಗನ ಭವಿಷ್ಯವಾಣಿ

    ಆಫ್ರಿಕನ್ ಸಿಂಹಗಳು ಕಾಡುಗಳಲ್ಲಿದ್ದರೆ ಸಾಮಾನ್ಯವಾಗಿ 18 ವರ್ಷ ಜೀವಿತಾವಧಿ ಹೊಂದಿರುತ್ತವೆ. ಸಾಮಾನ್ಯವಾಗಿರುವ ಸಿಂಹ ಪಾರ್ಕ್​ನ ಒಳಗಡೆ ಕಾಡಿನ ಜೀವನ ಪಾಲಿಸುತ್ತವೆ. ’ಲೂನ್ಕಿಟೊ’ ಜಾನುವಾರುಗಳನ್ನು ಹೆಚ್ಚಾಗಿ ಬೇಡೆಯಾಡುತ್ತಿತ್ತು. ಇದು ಕುರಿಗಾಹಿಗಳು ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಿಂಹ ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ತನ್ನ ಪ್ರದೇಶವನ್ನು ಸ್ವತಃ ರಕ್ಷಿಸಿಕೊಳ್ಳುತ್ತಿತ್ತು ಎಂದು ‘ಕ್ಯಾಟ್ಸ್ ಫಾರ್ ಆಫ್ರಿಕಾ’ ಸಂಸ್ಥೆಯ ಪ್ರತಿನಿಧಿಗಳು ಹೇಳಿದ್ದಾರೆ. (ಏಜೆನ್ಸೀಸ್​)

    ಫೈವ್​ ಸ್ಟಾರ್​ ಹೋಟೆಲ್​ನಲ್ಲಿ ವೇಶ್ಯಾವಾಟಿಕೆ ದಂಧೆ: ಖಾತ ನಟಿ, ಮಾಡೆಲ್​ ಬಂಧನ

    ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಬಾಲಿವುಡ್​ ನಟಿ!

    ಹುಂಬ ವಿಶ್ವಾಸ; ಸೋಲಿನ ಸಹವಾಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts