More

    ಐಪಿಎಲ್‌ನಲ್ಲಿ ಆಡಲು ಕಿವೀಸ್ ಆಟಗಾರರಿಗೆ ಅನುಮತಿ…!

    ನವದೆಹಲಿ: 13ನೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಆಡಲು ಸಜ್ಜಾಗಿರುವ 6 ಅಂತಾರಾಷ್ಟ್ರೀಯ ಕ್ರಿಕೆಟಿಗರಿಗೆ ನ್ಯೂಜಿಲೆಂಡ್ ಕ್ರಿಕೆಟ್ (ಎನ್‌ಝೆಡ್‌ಸಿ) ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡುವುದಾಗಿ ಹೇಳಿದೆ. ಆದರೆ, ಆಟಗಾರರೇ ಆರೋಗ್ಯದ ಸುರಕ್ಷತೆ ಬಗ್ಗೆ ತಾವೇ ಹೆಚ್ಚಿನ ನಿಗಾ ವಹಿಸಬೇಕು ಎಂದು ಎಚ್ಚರಿಕೆ ನೀಡಲಾಗಿದೆ. ನ್ಯೂಜಿಲೆಂಡ್‌ನ ಜಿಮ್ಮಿ ನೀಶಾಮ್ (ಕಿಂಗ್ಸ್ಇಲೆವೆನ್ ಪಂಜಾಬ್), ಲೂಕಿ ಫರ್ಗ್ಯೂಸನ್ (ಕೆಕೆಆರ್), ಮಿಚೆಲ್ ಮೆಕ್ಲೀನಘನ್ ಹಾಗೂ ಟ್ರೆಂಟ್ ಬೌಲ್ಟ್ (ಮುಂಬೈ ಇಂಡಿಯನ್ಸ್), ಕೇನ್ ವಿಲಿಯಮ್ಸನ್ (ಸನ್‌ರೈಸರ್ಸ್‌) ಹಾಗೂ ಮಿಚೆಲ್ ಸ್ಯಾಂಟ್ನರ್ (ಸಿಎಸ್‌ಕೆ) ಐಪಿಎಲ್‌ನಲ್ಲಿ ಆಡುತ್ತಿರುವ ಆಟಗಾರರು. ‘ಐಪಿಎಲ್‌ನಲ್ಲಿ ಆಡಲು ಆಟಗಾರರಿಗೆ ಎನ್‌ಒಸಿ ನೀಡಲಾಗಿದೆ. ಸುರಕ್ಷತೆ ಅವರಿಗೆ ಬಿಟ್ಟಿದ್ದು’ ಎಂದು ಎನ್‌ಝೆಡ್‌ಸಿ ವಕ್ತಾರ ರಿಚರ್ಡ್ ಬೂಕ್ ತಿಳಿಸಿದ್ದಾರೆ.

    ಇದನ್ನೂ ಓದಿ: ಇನ್​ಸ್ಟಾಗ್ರಾಂನಲ್ಲಿ 1000ನೇ ಪೋಸ್ಟ್​ ವಿಶೇಷವಾಗಿ ಸಂಭ್ರಮಿಸಿದ ವಿರಾಟ್​ ಕೊಹ್ಲಿ

    ಐಪಿಎಲ್‌ನಲ್ಲಿ ಆಡಲು ಕಿವೀಸ್ ಆಟಗಾರರಿಗೆ ಅನುಮತಿ...!ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್-ನವೆಂಬರ್‌ನಲ್ಲಿ ನಿಗದಿಯಾಗಿದ್ದ ಐಸಿಸಿ ಟಿ20 ವಿಶ್ವಕಪ್ ಮುಂದೂಡಿಕೆಯಾಗಿರುವ ಹಿನ್ನೆಲೆಯಲ್ಲಿ ಇದೇ ವೇಳೆ ಐಪಿಎಲ್ ಆಯೋಜಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಿದ್ಧತೆ ನಡೆಸಿದೆ. ಸನ್‌ರೈಸರ್ಸ್‌ ತಂಡ ಪ್ರತಿನಿಧಿಸುತ್ತಿರುವ ನಾಯಕ ಕೇನ್ ವಿಲಿಯಮ್ಸನ್, ಐಪಿಎಲ್‌ನಲ್ಲಿ ಹೆಚ್ಚು ಸುರಕ್ಷತಾ ಕ್ರಮಗಳ ಅವಶ್ಯಕತೆ ಇದೆ ಎಂದು ಹೇಳಿದ್ದರು. 6 ಆಟಗಾರರಲ್ಲದೆ, ನ್ಯೂಜಿಲೆಂಡ್‌ನ ಮಾಜಿ ಆಟಗಾರರಾದ ಸ್ಟೀನ್ ಫ್ಲೆಮಿಂಗ್ (ಮುಖ್ಯಕೋಚ್, ಸಿಎಸ್‌ಕೆ), ಶೇನ್ ಬಾಂಡ್ (ಮುಂಬೈ ಬೌಲಿಂಗ್ ಕೋಚ್), ಮೈಕ್ ಹೆಸ್ಸೆನ್ (ಆರ್‌ಸಿಬಿ ಮುಖ್ಯಕೋಚ್) ಸಹಾಯಕ ಸಿಬ್ಬಂದಿ ವರ್ಗದಲ್ಲಿದ್ದರೆ, ಡ್ಯಾನಿ ಮೊರಿಸನ್ ಹಾಗೂ ಸಿಮೊನ್ ಡೌಲ್ ವೀಕ್ಷಕ ವಿವರಣೆಗಾರರ ತಂಡದಲ್ಲಿದ್ದಾರೆ. 

     

    ಚಾಹಲ್​ 30ನೇ ಬರ್ತ್​ಡೇಗೆ ಕಾಲೆಳೆಯುತ್ತಲೇ ಶುಭಾಶಯ ಹೇಳಿದ ಯುವರಾಜ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts