More

    2011ರ ವಿಶ್ವಕಪ್​ ಫೈನಲ್​ ಫಿಕ್ಸಿಂಗ್​ ತನಿಖೆ ಕೈಬಿಟ್ಟ ಶ್ರೀಲಂಕಾ

    ಕೊಲಂಬೊ: 2011ರ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯ ಫಿಕ್ಸಿಂಗ್​ ಆರೋಪಕ್ಕೆ ಸಂಬಂಧಪಟ್ಟಂತೆ ಸೂಕ್ತ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಶ್ರೀಲಂಕಾ ಪೊಲೀಸರು ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲಂಕಾದ ದಿಗ್ಗಜ ಆಟಗಾರರಾದ ಕುಮಾರ ಸಂಗಕ್ಕರ, ಮಹೇಲ ಜಯವರ್ಧನೆ ಹಾಗೂ ಉಪುಲ್​ ತರಂಗ ಅವರುಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು. ಭಾರತ ಹಾಗೂ ಶ್ರೀಲಂಕಾ ನಡುವಿನ ಫೈನಲ್​ ಪಂದ್ಯ ಮಾರಾಟವಾಗಿತ್ತು ಎಂದು ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಲುಥಾಗಮಗೆ ಆರೋಪ ಮಾಡಿದ್ದರು. ಈ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಲಂಕಾದ ವಿಶೇಷ ತನಿಖಾ ದಳ ತನಿಖೆ ಕೈಗೆತ್ತಿಗೊಂಡಿತ್ತು.

    ಇದನ್ನೂ ಓದಿ: 2019ರ ವಿಶ್ವಕಪ್​ ವೇಳೆ ಪಾಕ್​ ತಂಡದಲ್ಲಿತ್ತು ಭಯದ ವಾತಾವರಣ

    ಕ್ರೀಡಾ ಸಚಿವಾಲಯದ ಕಾರ್ಯದಶಿರ್ಗೆ ವರದಿ ಸಲ್ಲಿಸುತ್ತಿದ್ದು ಆಂತರಿಕ ಚರ್ಚೆಯಂತೆ ತನಿಖೆಯನ್ನು ಇಲ್ಲಿಯೇ ಮುಕ್ತಾಯಗೊಳಿಸಲಿದ್ದೇವೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಜಗತ್​ ಫೋನ್ಸೆಕಾ ಹೇಳಿದ್ದಾರೆ. ಮಹಿಂದಾನಂದ ಅಲುಥಾಗಮಗೆ ಮಡಿದ್ದ 14 ಆರೋಪಗಳಲ್ಲಿ ಯಾವುದೂ ಸಾಬೀತಾಗಲಿಲ್ಲ. ನಮಗೆ ಯಾವುದೇ ಮಾಹಿತಿ ಲಭಿಸಲಿಲ್ಲ. ಆಟಗಾರರನ್ನು ಏಕೆ ತನಿಖೆ ನಡೆಸಬೇಕು ಎಂದು ಫೋನ್ಸೆಕಾ ತಿಳಿಸಿದ್ದಾರೆ. ಅಂದು ಲಂಕಾ ತಂಡ ಪ್ರತಿನಿಧಿಸಿದ್ದ ಕುಮಾರ ಸಂಗಕ್ಕರ, ಜಯವರ್ಧನೆ ಹಾಗೂ ಉಪುಲ್​ ತರಂಗ ಜತೆಗೆ ಅಂದಿನ ಆಯ್ಕೆ ಸಮಿತಿ ಮುಖ್ಯಸ್ಥ ಅರವಿಂದ ಡಿ ಸಿಲ್ವಾ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು.

    ಇದನ್ನೂ ಓದಿ: ಲಾಕ್​ಡೌನ್​ನಲ್ಲಿ ಕನಸುಗಳ ಪಟ್ಟಿ ಸಿದ್ಧಪಡಿಸಿದ ಟೆನಿಸ್ ತಾರೆ ಬಿಯಾಂಕಾ ಆಂಡ್ರೆಸ್ಕು

    ಹಾಲಿ ಎಂಸಿಸಿ ಅಧ್ಯಕ್ಷ ಸಂಗಕ್ಕರ ಅವರನ್ನು 10 ಗಂಟೆಗಳ ಕಾಲ, ಡಿ ಸಿಲ್ವಾ ಅವರನ್ನು 6 ಗಂಟೆಗಳ ಕಾಲ ಪೊಲೀಸರು ವಿಚಾರಣೆ ನಡೆಸಿದ್ದರು. ಅಂದಿನ ತಂಡದ ಆಯ್ಕೆ ಕುರಿತು ಮಹಿಂದಾನಂದ ಅಲುಥಾಗಮಗೆ ಸಂಶಯ ವ್ಯಕ್ತ ಪಡಿಸಿದ್ದರು. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಭಾರತ 6 ವಿಕೆಟ್​ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿತ್ತು.

    ಸಚಿನ್​, ರೋಹಿತ್​, ಕೊಹ್ಲಿ, ಈ ಮೂವರೊಳಗೆ ಉತ್ತಮ ಯಾರೆಂದ ವಾಸಿಂ ಜಾಫರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts