More

    ಕರೊನಾ 2ನೇ ಅಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಒಂದೂ ಸಾವು ಸಂಭವಿಸಿಲ್ಲ! ಮಾಹಿತಿ ನೀಡಿದ ಸರ್ಕಾರ

    ನವದೆಹಲಿ: ದೇಶದಲ್ಲಿ ಕರೊನಾದ ಎರಡನೇ ಅಲೆಯ ಭೀಕರತೆಗೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಆದರೆ ಈ ಎರಡನೇ ಅಲೆಯಲ್ಲಿ ಯಾವೊಬ್ಬ ಸೋಂಕಿತನೂ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಆಕ್ಸಿಜನ್ ಕೊರತೆಯಿಂದ ದೇಶದಲ್ಲಿ ಎಷ್ಟು ಜನರು ರಸ್ತೆ ಮೇಲೆ, ಆಸ್ಪತ್ರೆಗಳೊಳಗೆ ಸಾವನ್ನಪ್ಪಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್ ಸರ್ಕಾರವನ್ನು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಆರೋಗ್ಯ ಇಲಾಖೆಯ ರಾಜ್ಯ ಸಚಿವ ಭಾರತಿ ಪ್ರವೀಣ್ ಪವಾರ್, “ಕರೊನಾ ಸಾವನ್ನು ವರದಿ ಮಾಡುವುದು ಆಯಾ ರಾಜ್ಯಗಳ ಕೆಲಸ. ಕರೊನಾದ ಎರಡನೇ ಅಲೆ ಕುರಿತಾಗಿ ಇದುವರೆಗೆ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿರುವುದನ್ನು ವರದಿ ಮಾಡಿಲ್ಲ” ಎಂದು ಹೇಳಿದ್ದಾರೆ.

    ಕೇಂದ್ರ ಸರ್ಕಾರದಿಂದ ನೀಡಲಾದ ಮಾರ್ಗಸೂಚಿಯ ಅನುಸಾರ ಆಯಾ ಕಾಲಕ್ಕೆ ರಾಜ್ಯಗಳು ಕರೊನಾ ವರದಿ ಮತ್ತು ಅದರಿಂದಾದ ಸಾವಿನ ವರದಿಯನ್ನು ಸಲ್ಲಿಸಿವೆ. ಯಾವುದೇ ರಾಜ್ಯವು ಕರೊನಾದಿಂದಾಗಿರುವ ಸಾವನ್ನು ಮರೆ ಮಾಚಿರುವ ವರದಿಯಿಲ್ಲ. ಕೆಲವು ರಾಜ್ಯಗಳು ವರದಿಯನ್ನು ಪರಿಷ್ಕರಣೆ ಮಾಡಿವೆ ಎಂದು ಅವರು ತಿಳಿಸಿದ್ದಾರೆ.

    ಅದಾಗ್ಯೂ ಕರೊನಾ ಎರಡನೇ ಅಲೆಯಲ್ಲಿ ಮೊದಲನೇ ಅಲೆಗಿಂತ ಹೆಚ್ಚು ಆಕ್ಸಿಜನ್ ಬೇಡಿಕೆಯಿತ್ತು. ಮೊದಲನೇ ಅಲೆಯಲ್ಲಿ 3095 ಮೆಟ್ರಿಕ್ ಟನ್‌ ಬೇಡಿಕೆಯಿತ್ತು ಎರಡನೇ ಅಲೆಯಲ್ಲಿ ಅದು 9000 ಮೆಟ್ರಿಕ್​ ಟನ್​ಗೆ ಏರಿಕೆಯಾಗಿತ್ತು ಎಂದು ಸಚಿವರು ವಿವರಿಸಿದ್ದಾರೆ. (ಏಜೆನ್ಸೀಸ್)

    ಮೂರರಲ್ಲಿ ಇಬ್ಬರಿಗೆ ಕರೊನಾ ಪ್ರತಿಕಾಯ; 40 ಕೋಟಿ ಜನರಿಗೆ ಇನ್ನೂ ತಪ್ಪಿಲ್ಲ ಆಪತ್ತು

    ಪಬ್​ಜಿ ವಾಪಸಾದ ಬೆನ್ನಲ್ಲೇ ಟಿಕ್​ಟಾಕ್​ಗೂ ಗ್ರೀನ್ ಸಿಗ್ನಲ್?

    ಬಜಾಜ್ ಚೇತಕ್​ಗೆ ಕಾಂಪಿಟೇಶನ್ ಕೊಡತ್ತಾ ಓಲಾ ಸ್ಕೂಟರ್? ಹೇಗಿರಲಿದೆ ಗೊತ್ತಾ ಓಲಾ ಸ್ಕೂಟಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts