More

    ಅತ್ತ ಪತಿರಾಯ ಜವರಾಯನ ಮಡಿಲಿಗೆ, ಇತ್ತ ಮಗು ತಾಯಿಯ ಮಡಿಲಿಗೆ…

    ಕೊಳಿಕೋಡ್: ದುಬೈನಲ್ಲಿ ಪತಿ ತೀರಿಕೊಂಡ ಮರುದಿನವೇ ತಾಯಿಯೋರ್ವಳು ತನ್ನ ಮೊದಲ ಮಗುವಿಗೆ ಜನ್ಮ ನೀಡಿದ್ದಾಳೆ.  ತಮ್ಮ ಮೊದಲ ಮಗುವಿಗೆ ಕೋಳಿಕೋಡ್‌ನಲ್ಲಿ ಮಂಗಳವಾರ ಜನ್ಮ ನೀಡಿದವರು ಅಧಿರಾ ಗೀತಾ ಶ್ರೀಧರನ್. ಅತ್ತ ದುಬೈನಲ್ಲಿ ಪ್ರಾಣ ಕಳೆದುಕೊಂಡವರು ಪತಿ ನಿತಿನ್.

    ಇದನ್ನೂ ಓದಿ: ಕಾನೂನಿನ ಮೊರೆ ಹೋಗಿ ಗರ್ಭಿಣಿ ಪತ್ನಿಯನ್ನು ಭಾರತಕ್ಕೆ ಕಳುಹಿಸಿ ಕಣ್ಮುಚ್ಚಿದ ಪತಿ!

    ನಿತಿನ್ ತನ್ನನ್ನು ಶಾಶ್ವತವಾಗಿ ತೊರೆದಿದ್ದಾರೆ ಎಂದು ಅಧಿರಾಳಿಗೆ ಇನ್ನೂ ತಿಳಿದಿಲ್ಲ.  ಸೋಮವಾರ ನಿಧನರಾದ ನಿತಿನ್ ಚಂದ್ರನ್ (28), ದುಬೈನಲ್ಲಿ ಕೆಲಸ ಕಳೆದುಕೊಂಡಿರುವ ಕೇರಳಿಗರಿಗೆ ಮತ್ತು ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಮನೆಗೆ ಮರಳಲು ಸಹಾಯ ಮಾಡಲು ಓಡಾಡುತ್ತಿದ್ದರು.

    ಇದನ್ನೂ ಓದಿ: ಪೊಲೀಸರ ತನಿಖೆಗೆ ಇನ್ನೂ ಹಾಜರಾಗದ ತಬ್ಲಿಘಿ ಮುಖ್ಯಸ್ಥ…!

    ಗರ್ಭಿಣಿ ಅಧಿರಾ ಡೆಲಿವರಿಗಾಗಿ ಒಂದು ತಿಂಗಳ ಹಿಂದೆ ಕೋಳಿಕೋಡ್​​​​ಗೆ ಮರಳಿದ್ದರು. ಪತಿಯ ಸಾವಿನ ಸುದ್ದಿ ಸಾಮಾಜಿಕ ಜಾಲ ಸೇರಿದಂತೆ ಮಾಧ್ಯಮಗಳಲ್ಲಿ ಬಿತ್ತರಗೊಳ್ಳಲಾರಂಭಿಸುತ್ತಿದ್ದಂತೆ, ಅಧಿರಾ ಅವರ ಕುಟುಂಬ ಅವರನ್ನು ಕೋಳಿಕೋಡ್‌ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಿತು.
    ಅಧಿರಾಗೆ ಸುದ್ದಿ ತಲುಪಿದ ನಂತರ ಆಕೆಯ ಆರೋಗ್ಯ ಸ್ಥಿತಿ ಹದಗೆಡಬಹುದು ಎಂದು ಊಹಿಸಿದ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದರು. ಮಂಗಳವಾರ ಅಧಿರಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಜೂನ್​ 30ರೊಳಗೆ ಆಧಾರ್​- ಪ್ಯಾನ್​ ಜೋಡಣೆ ಕಡ್ಡಾಯ: ಹೇಗೆ? ಏಕೆ? ಇಲ್ಲಿದೆ ವಿವರ
    ಆಸ್ಪತ್ರೆಗೆ ತೆರಳುವ ಮೊದಲು, ನಿತಿನ್ ಆರೋಗ್ಯವಾಗಿಲ್ಲ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಕುಟುಂಬಕ್ಕೆ ತಿಳಿದಿತ್ತು ಆಸ್ಪತ್ರೆಗೆ ಹೊರಡುವ ಮೊದಲು ಅಧಿರಾ ನಿತಿನ್​​​ನೊಂದಿಗೆ ಮಾತನಾಡಬೇಕೆಂದು ಒತ್ತಾಯಿಸಿದರೂ, ಆಘಾತದಿಂದ ಆಕೆಯನ್ನು ಪಾರುಮಾಡಬೇಕೆಂದು ಕುಟುಂಬದವರು ಕಷ್ಟಪಟ್ಟು ಅದರ ವಿರುದ್ಧ ಮನವೊಲಿಸುವಲ್ಲಿ ಯಶಸ್ವಿಯಾದರು.
    ಯುಎಇಯ ವಿವಿಧ ಭಾಗಗಳಲ್ಲಿರುವ ಗರ್ಭಿಣಿಯರನ್ನು ಸುರಕ್ಷಿತವಾಗಿ ಮನೆಗೆ ತಲುಪಲು ಸಹಾಯ ಮಾಡಿದ ಈ ದಂಪತಿಯ ಕಾರ್ಯ ಅವಿಸ್ಮರಣೀಯವಾದುದು ಎಂದು ನಿತಿನ್ ಸ್ನೆಹಿತರು ಸ್ಮರಿಸುತ್ತಾರೆ. ದುಬೈ ಮತ್ತು ಕೇರಳದಲ್ಲಿರುವ ನಿತಿನ್ ಸ್ನೇಹಿತರು ಮತ್ತು ಸಂಬಂಧಿಕರು ನಿತಿನ್ ಶವವನ್ನು ಪಡೆಯಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.

    ಇದನ್ನೂ ಓದಿ: ಜಮಾವಣೆ ಸ್ಥಳದಿಂದ 2 ಕಿ.ಮೀ. ಹಿಂದೆಸರಿದ ಭಾರತ, ಚೀನಾ ಸೇನೆ 

    ನಿತಿನ್ ಅವರ COVID-19 ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಅವರು ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ. ಅವರ ಶವವನ್ನು ಶೀಘ್ರ ಪೆರಾಂಬ್ರಾಕ್ಕೆ ತರುವ ಸಲುವಾಗಿ, ಅವರ ಸಾವಿಗೆ ಸಂಬಂಧಿಸಿದ ಎಲ್ಲ ದಾಖಲೆಗಳ ಬಿಡುಗಡೆಗಾಗಿ ಅವರ ಸ್ನೇಹಿತರು ಕಾಯುತ್ತಿದ್ದಾರೆ.

    ಪಾಕ್​ ಮಾಜಿ ಪ್ರಧಾನಿಗೆ ಕರೊನಾ ಸೋಂಕು: ಸಚಿವರಿಗೂ ಬಿಡದ ಮಹಾಮಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts