More

    ಜೂನ್​ 30ರೊಳಗೆ ಆಧಾರ್​- ಪ್ಯಾನ್​ ಜೋಡಣೆ ಕಡ್ಡಾಯ: ಹೇಗೆ? ಏಕೆ? ಇಲ್ಲಿದೆ ವಿವರ

    ನವದೆಹಲಿ: ಆಧಾರ್​ ಕಾರ್ಡ್​ಗೆ ಪ್ಯಾನ್​ ನಂಬರ್​ ಜೋಡಣೆ ಅನಿವಾರ್ಯವಾಗಿದೆ. ಜನರ ಸುರಕ್ಷತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಇಂಥದ್ದೊಂದು ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಆದರೆ ಲಾಕ್​ಡೌನ್​ ಹಿನ್ನೆಲೆಯಲ್ಲಿ ಹಾಗೂ ಅದಕ್ಕಿಂತ ಮುಂಚಿತವಾಗಿ ಕೆಲವು ಕಾರಣಗಳಿಂದ ಇದಾಗಲೇ ಸುಮಾರು 10 ಬಾರಿ ಜೋಡಣೆ ದಿನಾಂಕವನ್ನು ಕೇಂದ್ರ ಸರ್ಕಾರ ಮುಂದೂಡುತ್ತಾ ಬಂದಿದೆ. ಆದರೆ ಇದೀಗ ಜೂನ್​ 30ರ ಗಡುವು ವಿಧಿಸಲಾಗಿದೆ.

    ಹೊಸದಾಗಿ ಪ್ಯಾನ್ ಕಾರ್ಡ್ ಪಡೆಯಲು ಬಯಸಿದ್ದೇ ಆದಲ್ಲಿ ಆಧಾರ್​ ಕಾರ್ಡ್​ ಹೊಂದಿರುವುದು ಕಡ್ಡಾಯ. ಜತೆಗೆ, ಆದಾಯ ತೆರಿಗೆ ರಿಟರ್ನ್ಸ (ITR) ಸಲ್ಲಿಕೆಗೆ ಕೂಡ ಪ್ಯಾನ್​ ಕಾರ್ಡ್ ಜತೆ ಆಧಾರ್​ ಕಾರ್ಡ್​ ಜೋಡಣೆ ಅತ್ಯಗತ್ಯ. ​ ಈ ಸಂದರ್ಭದಲ್ಲಿ ಕೆಲವೊಂದು ನಿಯಮಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಸೂಚಿಸಿದ್ದು ಅವುಗಳ ಮಾಹಿತಿ ಇಲ್ಲಿದೆ:

    * e-filing portal ಮೂಲಕವೂ ಆಧಾರ್​ ಮತ್ತು ಪ್ಯಾನ್​ ಕಾರ್ಡ್​ ಜೋಡಣೆ ಮಾಡಬಹುದಾಗಿದೆ.

    * ಇದು ಕಷ್ಟಸಾಧ್ಯವಾದಲ್ಲಿ, 567678 ಅಥವಾ 56161 ಸಂದೇಶ ಕಳಿಸುವ ಮೂಲಕ ಜೋಡಣೆ ಸಾಧ್ಯ. ಇದರ ಫಾರ್ಮ್ಯಾಟ್​ ಈ ರೀತಿ ಇದೆ: UIDPAN<12-digit Aadhaar><10-digit PAN> ಉದಾಹರಣೆಗೆ: ನಿಮ್ಮ ಪ್ಯಾನ್​ ಖಾತೆ ಸಂಖ್ಯೆ 112233445566 ಹಾಗೂ ಆಧಾರ್​ ಸಂಖ್ಯೆ 7788998877 ಎಂದು ಇದ್ದರೆ UIDPAN 112233445566 7788998877 ಎಂದು ಟೈಪ್​ ಮಾಡಿ 567678 ಅಥವಾ 56161 ಸಂದೇಶ ಕಳುಹಿಸಿದರೆ ನಿಮಗೆ ಅಲ್ಲಿಂದ ಉತ್ತರ ಬರುತ್ತದೆ.

    ಇದನ್ನೂ ಓದಿ: ಕೆರೆಯಲ್ಲಿ ಸಿಕ್ಕಿತು ಅರ್ಧ ಸುಟ್ಟ ಶವ: ಸತ್ಯದ ಬೆನ್ನಟ್ಟಿದ ಪೊಲೀಸರೇ ಶಾಕ್​!

    * ಆನ್​ಲೈನ್​ನಲ್ಲಿ ಜೋಡಣೆ ಕಷ್ಟವಾದವರಿಗೆ ಎನ್‌ಎಸ್‌ಡಿಎಲ್ ಮತ್ತು ಯುಟಿಐಟಿಎಸ್‌ಎಲ್‌ನ ಪ್ಯಾನ್ ಸೇವಾ ಕೇಂದ್ರಗಳ ಸೌಲಭ್ಯವಿದ್ದು, ಅಲ್ಲಿಯೇ ಈ ಎರಡೂ ದಾಖಲೆಗಳ ಜೋಡಣೆ ಮಾಡಿಕೊಳ್ಳಬಹುದು.

    * ಒಂದು ವೇಳೆ ಅಂತಿಮ ಗಡುವಿನ ಒಳಗೆ ಈ ಎರಡೂ ದಾಖಲೆಗಳ ಜೋಡಣೆ ಆಗದಿದ್ದರೆ, ನಿಮ್ಮ ಪ್ಯಾನ್ ಅನ್ನು ಆದಾಯ ತೆರಿಗೆ ಇಲಾಖೆಯು ನಿಷ್ಕ್ರೀಯ ಎಂದು ಘೋಷಿಸುವ ಸಾಧ್ಯತೆಯಿದೆ. ಹೀಗಾದಲ್ಲಿ ನೀವು ಪ್ಯಾನ್​ ನಂಬರ್​ ಬಳಕೆ ಮಾಡಿಕೊಂಡು ನಿಮ್ಮ ಆದಾಯ ತೆರಿಗೆಯನ್ನು ಕಟ್ಟುವುದು ಅಸಾಧ್ಯ ಹಾಗೂ ಬ್ಯಾಂಕ್​ ಖಾತೆಗಳನ್ನು ತೆರೆಯಲು ಆಗುವುದಿಲ್ಲ.

    * ನಿಗದಿತ ಅವಧಿಯಲ್ಲಿ ಪ್ಯಾನ್​ ಮತ್ತು ಆಧಾರ್​ ಜೋಡಣೆ ಮಾಡಿಕೊಳ್ಳದೇ ಪ್ಯಾನ್​ ಕಾರ್ಡ್​ ಬಳಸಲು ನೀವು ಮುಂದಾದರೆ ಅದು ಕಾನೂನಿನ ಪ್ರಕಾರ ಅಪರಾಧವಾಗಲಿದ್ದು, ಆದಾಯ ತೆರಿಗೆ ಇಲಾಖೆಯು 10 ಸಾವಿರ ರೂಪಾಯಿವರೆಗೆ ದಂಡ ವಿಧಿಸಬಹುದಾಗಿದೆ. ಏಕೆಂದರೆ ಪ್ಯಾನ್ ಸಂಖ್ಯೆ ಸಲ್ಲಿಸುವುದು ಆದಾಯ ತೆರಿಗೆ ಕಾಯ್ದೆಯ 139 ಎ ಕಲಮಿನ ಪ್ರಕಾರ ಕಡ್ಡಾಯವಾಗಿದೆ.

    ಇದನ್ನೂ ಓದಿ: VIDEO: ಮೊದಲ ಬಾರಿಗೆ ಐಸ್​ಕ್ರೀಂ ತಿಂದ ಬೆಕ್ಕು : ವಿಡಿಯೋ ಆಯ್ತು ಭಾರಿ ವೈರಲ್​

    * ಈ ನಿಯಮ ಅನಿವಾಸಿ ಭಾರತೀಯರಿಗೆ ಅನ್ವಯ ಆಗುವುದಿಲ್ಲ. ಆದರೆ ಹಣಕಾಸಿನ ವ್ಯವಹಾರಗಳಿಗೆ ಆಧಾರ್​ ಅವರಿಗೆ ಅತ್ಯಗತ್ಯವಾಗಿದ್ದು, ಅದಕ್ಕೆ ಅವರು ಅರ್ಜಿ ಸಲ್ಲಿಸಬಹುದಾಗಿದೆ.

    ಕೆಸರು ಎರಚಿದಷ್ಟೂ ಕಮಲದ ಹೂವು ಸುಂದರವಾಗಿ ಅರಳಲಿದೆ- ದೀದೀಗೆ ಷಾ ತಿರುಗೇಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts