More

    ಜಮಾವಣೆ ಸ್ಥಳದಿಂದ 2 ಕಿ.ಮೀ. ಹಿಂದೆಸರಿದ ಭಾರತ, ಚೀನಾ ಸೇನೆ

    ನವದೆಹಲಿ: ಲಡಾಖ್​ನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಲು ಭಾರತ ಮತ್ತು ಚೀನಾ ಪರಸ್ಪರ ಮಾತುಕತೆ ನಡೆಸುತ್ತಿವೆ. ಮಾಲ್ಡೋದಲ್ಲಿ ಶನಿವಾರ ಮಧ್ಯಾಹ್ನ ಭಾರತ ಮತ್ತು ಚೀನಾದ ಸೇನಾಪಡೆಯ ಜನರಲ್​ಗಳ ಮಟ್ಟದ ಸಭೆಯ ಬಳಿಕ ಗಲ್ವಾನ್​ ಮತ್ತು ಪೂರ್ವ ಲಡಾಖ್​ನ ಫಿಂಗರ್​ ಪ್ರದೇಶದಿಂದ ಉಭಯ ಸೇನೆಗಳು 2 ಕಿ.ಮೀ. ಹಿಂದೆ ಸರಿದಿವೆ. ಆದರೂ ಈ ಪ್ರದೇಶದಲ್ಲಿ ತಾನು ಇರಿಸಿರುವ 100 ಟ್ಯಾಂಕ್​ ಮತ್ತು ಆರ್ಟಿಲರಿಗಳನ್ನು ಚೀನಾ ಇನ್ನೂ ಹಿಂಪಡೆದಿಲ್ಲ ಎನ್ನಲಾಗಿದೆ.

    ಗಲ್ವಾನ್​ ಕಣಿವೆಯ ಪೆಟ್ರೋಲಿಂಗ್​ ಪಾಯಿಂಟ್​ (ಪಹರೆ ಕೇಂದ್ರ-ಪಿಪಿ) 14, ಪಿಪಿ 15 ಮತ್ತು ಪಿಪಿ 17 ಪ್ರದೇಶಗಳು ಹಾಗೂ ಫಿಂಗರ್​ ಪ್ರದೇಶದಲ್ಲಿ ಜಮಾವಣೆಗೊಂಡಿದ್ದ ಸೇನಾಪಡೆಗಳು ಹಿಂದಕ್ಕೆ ಸರಿದಿವೆ ಎಂದು ಭದ್ರತಾಪಡೆ ಮೂಲಗಳು ತಿಳಿಸಿವೆ.

    ಗಲ್ವಾನ್​ನಲ್ಲಿ ಚೀನಿ ಸೇನಾಪಡೆ ಹಿಂದೆಸರಿದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರಿ ಅಧಿಕಾರಿಗಳು, ಚೀನಾದವರು ಮೊದಲು ಅಲ್ಲಿಗೆ ಬಂದವರು. ಹಾಗಾಗಿ ಅವರೇ ಮೊದಲು ಹಿಂದೆಸರಿಯಬೇಕಿತ್ತು. ಅದರಂತೆ ಅವರು 20 ಲಾರಿಯಷ್ಟು ಯೋಧರನ್ನು ಹಿಂದಕ್ಕೆ ಕರೆಯಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

    ಫಿಂಗರ್​ಪಾಯಿಂಟ್​ ಪ್ರದೇಶದಲ್ಲಿ ಕೂಡ ಹಲವು ಬೋಟ್​ಗಳ ತುಂಬಾ ಇದ್ದ ಯೋಧರು ಮತ್ತು ಹೆಚ್ಚುವರಿ ಯೋಧರನ್ನು ಕರೆತಂದಿದ್ದ ವಾಹನಗಳು ಹಿಂದಕ್ಕೆ ತೆರಳಿರುವುದಾಗಿ ತಿಳಿಸಿದ್ದಾರೆ.

    ಇದನ್ನೂ ಓದಿ: ಲಡಾಖ್​ ಬಿಕ್ಕಟ್ಟಿನ ನಡುವೆಯೂ ಭಾರತದಿಂದ 2 ರಸ್ತೆಗಳ ಕಾಮಗಾರಿ ಜಾರಿ

    ಮುಂದಿನ ವಾರದಿಂದ ಉಭಯ ದೇಶಗಳು ಮತ್ತೆ ಮಾತುಕತೆಯನ್ನು ಆರಂಭಿಸಲಿವೆ. ಪರಿಸ್ಥಿತಿಗೆ ಅನುಗುಣವಾಗಿ ಬ್ರಿಗೇಡಿಯರ್​ ಮತ್ತು ಮೇಜರ್​ ಜನರಲ್​ ಇಲ್ಲವೇ ಕರ್ನಲ್​ ಮಟ್ಟದಲ್ಲಿ ಮಾತುಕತೆಗಳು ಮುಂದೆ ಸಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

    ಬಂದಿದ್ದರು 10 ಸಾವಿರ ಯೋಧರು: ಡಿಬಿಒದ ಉತ್ತರ ಭಾಗ ಹಾಗೂ ಛುಶುಲ್​ನ ದಕ್ಷಿಣ ಭಾಗದಲ್ಲಿ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿ 10 ಸಾವಿರ ಯೋಧರು, ಟ್ಯಾಂಕ್​ಗಳು ಮತ್ತು ಆರ್ಟಿಲರಿಗಳನ್ನು ನಿಯೋಜಿಸಿತ್ತು. ಟ್ಯಾಂಕ್​ಗಳ 2 ರೆಜಿಮೆಂಟ್​ ಮತ್ತು ಅಷ್ಟೇ ಸಂಖ್ಯೆಯ ಆರ್ಟಿಲರಿ ಕೂಡ ಇತ್ತು. ಅಂದಾಜು 100 ಟ್ಯಾಂಕ್​ಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದವು ಎಂದು ಹೇಳಲಾಗಿದೆ.

    ಇದಲ್ಲದೆ, ಹಲವು ಯುದ್ಧವಿಮಾನಗಳು, ವೈಮಾನಿಕ ರಕ್ಷಣಾ ವ್ಯವಸ್ಥೆ ಹಾಗೂ ರಡಾರ್​ಗಳನ್ನು ಕೂಡ ಗಡಿ ಸಮೀಪದಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು. ದಾಳಿ ಮಾಡುವ ಯಾವುದೇ ಉದ್ದೇಶಗಳಿಲ್ಲದಿದ್ದರೂ, ಬಲಪ್ರದರ್ಶನದ ಮೂಲಕ ಅಧೈರ್ಯ ಮೂಡಿಸಲು ಚೀನಿಯರು ಪ್ರಯತ್ನಿಸಿದ್ದರು ಎನ್ನಲಾಗಿದೆ.

    ಜೂನ್​ 30ರೊಳಗೆ ಆಧಾರ್​- ಪ್ಯಾನ್​ ಜೋಡಣೆ ಕಡ್ಡಾಯ: ಹೇಗೆ? ಏಕೆ? ಇಲ್ಲಿದೆ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts