More

    ಪೊಲೀಸರ ತನಿಖೆಗೆ ಇನ್ನೂ ಹಾಜರಾಗದ ತಬ್ಲಿಘಿ ಮುಖ್ಯಸ್ಥ…!

    ನವದೆಹಲಿ: ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ಪೊಲೀಸ್​ ತನಿಖೆ ಇನ್ನೂ ಹಾಜರಾಗಿಲ್ಲ. ಅದರಿಂದ ತಪ್ಪಿಸಿಕೊಳ್ಳಲು ಹೊಸ ಹೊಸ ನೆಪಗಳನ್ನು ಹುಡುಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಇದನ್ನೂ ಓದಿ:ಡಿಎಆರ್​​ಪಿಜಿಗೆ ಕೇಂದ್ರ ನೀಡಿದ ಹೊಸ ರಕ್ಷಣಾ ಮಾರ್ಗಸೂಚಿಯಲ್ಲಿ ಏನೇನಿವೆ.?

    ಕರೊನಾ ಸೋಂಕಿಗೆ ಒಳಗಾಗಿರಬಹುದೆಂಬ ಹಿನ್ನೆಲೆಯಲ್ಲಿ ಪೊಲೀಸರು ಮೌಲಾನಾ ಸಾದ್​ನನ್ನು ಪರೀಕ್ಷೆಗೆ ಒಳಪಡುವಂತೆ ಸೂಚಿಸಿದ್ದರು. ಆದರೆ, ಸರ್ಕಾರಿ ಪ್ರಯೋಗಾಲಯದಿಂದ ಕೋವಿಡ್ -19 ಪರೀಕ್ಷೆಯ ವರದಿಯನ್ನು ದೆಹಲಿ ಪೊಲೀಸರು ಕೇಳಿದರೂ ಆತ ಇನ್ನೂ ಸಲ್ಲಿಸಿಲ್ಲ. ಪರೀಕ್ಷೆಗೆ ಒಳಗಾಗಿ, ತನಿಖೆಗೆ ಒಳಪಡಲು ಆತನಿಗೆ ಹೊಸ ಸೂಚನೆ ನೀಡುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಇಲ್ಲೊಮ್ಮೆ ನೋಡಿ… ಕ್ವಾರಂಟೈನ್​ ನಿಯಮ ಬದಲಾಯ್ತು, ಮೊದಲಿನಂತಿಲ್ಲ ಕರೊನಾ ಪರೀಕ್ಷೆ!

    ಈ ಕುರಿತು ಜಮಾತ್​​​ನ ಇತರ ಆರು ಪದಾಧಿಕಾರಿಗಳನ್ನು ಪ್ರಶ್ನಿಸಲಾಗಿದೆ ಎಂದು ಅಪರಾಧ ಶಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾದ್ ಇನ್ನೂ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕಿದೆ. “ನಾವು ಸರ್ಕಾರಿ ಆಸ್ಪತ್ರೆಯಿಂದ ಮೌಲಾನಾ ಸಾದ್ ಅವರ ಕೋವಿಡ್ -19 ಪರೀಕ್ಷಾ ವರದಿಯನ್ನು ಸ್ವೀಕರಿಸಿಲ್ಲ. ಈ ನಿಟ್ಟಿನಲ್ಲಿ ಕೆಲವು ವಾರಗಳ ಹಿಂದೆ ಅವರಿಗೆ ನೋಟಿಸ್ ನೀಡಲಾಗಿದೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ”ಎಂದು ಅಧಿಕಾರಿ ಹೇಳಿದರು.

    ಇದನ್ನೂ ಓದಿ: ಕೊವಿಡ್​-19ನಿಂದ ನರಳಿ ಮೃತಪಟ್ಟ ಪತ್ರಕರ್ತನ ಕೊನೇ ಸಂದೇಶ ನೋಡಿ ಸಾರ್ವಜನಿಕರು ಕೆಂಡಾಮಂಡಲ…

    ಸಾದ್ ಈ ಹಿಂದೆ ಖಾಸಗಿ ಪ್ರಯೋಗಾಲಯದಲ್ಲಿ ಕೋವಿಡ್ -19 ಪರೀಕ್ಷೆಯ ವರದಿಯನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಅಪರಾಧ ಶಾಖೆ ತಂಡಕ್ಕೆ ವರದಿಯನ್ನು ಸಲ್ಲಿಸಿದ್ದರು. ಆ ವರದಿಯಲ್ಲಿ ಸೋಂಕು ಇಲ್ಲದಿರುವುದು ಪತ್ತೆಯಾಗಿತ್ತು. ಆದರೆ ಸರ್ಕಾರಿ ಪ್ರಯೋಗಾಲಯದ ಪರೀಕ್ಷಾ ವರದಿ ಸಲ್ಲಿಸಲು ತಂಡವು ಒತ್ತಾಯಿಸಿತ್ತು.

    ಇದನ್ನೂ ಓದಿ: ಕರೊನಾದಿಂದ ಕಾಪಾಡುತ್ತಿರುವ ಔಷಧಗಳಿವು; ಬೆಲೆ ಕೇಳಿದರೆ ತಲೆ ತಿರುಗುತ್ತೆ…!

    ನಿರ್ದೇಶಾನುಸಾರ ತನಿಖೆಗೆ ಸಹಕರಿಸಿರುವುದಾಗಿ ಜಮಾತ್ ವಕ್ತಾರ ಶಾಹಿದ್ ಅಲಿ ಹೇಳಿದ್ದಾರೆ. ಮೌಲಾನಾ ಸಾದ್​ರನ್ನು ಕೋವಿಡ್ -19 ಗಾಗಿ ಪರೀಕ್ಷೆಗೆ ಒಳಪಡಿಸಿದಾಗ ಫಲಿತಾಂಶ ನೆಗೆಟಿವ್ ಕಂಡುಬಂದಿದೆ. ಅದನ್ನು ತನಿಖಾ ಸಂಸ್ಥೆಗೆ ತಿಳಿಸಲಾಗಿತ್ತು. ನ್ಯಾಯಾಲಯ ನಿರ್ದೇಶಿಸಿದಾಗ ತನಿಖಾ ಅಧಿಕಾರಿ ಮುಂದೆ ಹಾಜರಾಗಲು ನಾವು ಬದ್ಧರಾಗಿದ್ದೇವೆ ಎಂದು ಅವರು ಹೇಳಿದರು.

    ಇದನ್ನೂ ಓದಿ: ಕೆರೆಯಲ್ಲಿ ಸಿಕ್ಕಿತು ಅರ್ಧ ಸುಟ್ಟ ಶವ: ಸತ್ಯದ ಬೆನ್ನಟ್ಟಿದ ಪೊಲೀಸರೇ ಶಾಕ್​!

    ಆರು ಪದಾಧಿಕಾರಿಗಳನ್ನು ಪ್ರಶ್ನಿಸುವ ಎರಡನೇ ಸುತ್ತಿನ ಪ್ರಕ್ರಿಯೆಯನ್ನು ಸಹ ಯೋಜಿಸಲಾಗಿದೆ. ತನಿಖಾಧಿಕಾರಿಗಳ ಮುಂದೆ ಅವರ ಉಪಸ್ಥಿತಿಯನ್ನು ಕೋರಿ ನೋಟಿಸ್‌ಗಳನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

    ಇದನ್ನೂ ಓದಿ: ವಲಸೆ ಕಾರ್ಮಿಕರಿಗೆ ಏನು ಉದ್ಯೋಗ ಕೊಡುತ್ತೀರಿ? ರಾಜ್ಯಗಳಿಗೆ ವಿವರ ಕೇಳಿದ ಸುಪ್ರೀಂ ಕೋರ್ಟ್

    ದೆಹಲಿಯ ನಿಜಾಮುದ್ದೀನ್‌ನ ಜಮಾತ್‌ನ ಪ್ರಧಾನ ಕಚೇರಿಯಲ್ಲಿ 34 ದೇಶಗಳ 900 ಕ್ಕೂ ಹೆಚ್ಚು ವಿದೇಶಿಯರು ಸೇರಿ ಸಾವಿರಾರು ಜನರು ಜಮಾತ್​ಗೆ ಹಾಜರಾಗಿದ್ದರು. ಮಾರ್ಚ್ ಅಂತ್ಯದಲ್ಲಿ ವಿದೇಶಿಯರು ಸೇರಿದಂತೆ 2,300 ಕ್ಕೂ ಹೆಚ್ಚು ಜನರನ್ನು ಪ್ರಧಾನ ಕಚೇರಿಯಿಂದ ಸ್ಥಳಾಂತರಿಸಿ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ದೆಹಲಿ ಮತ್ತು ತಮಿಳುನಾಡು ಎರಡರಲ್ಲೂ ಆರಂಭಿಕ ಸೋಂಕು ಹರಡಲು ಈ ಸಭೆ ಮೂಲವಾಗಿತ್ತು. 

    ಗಿಟಾರ್​ನ ಹಿಮ್ಮೇಳದಲ್ಲಿ ತಮ್ಮದೇ ಧಾಟಿಯಲ್ಲಿ ಹಾಡುವ ಗಿಳಿಗಳು…

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts