ಹೈದರಾಬಾದ್: ತೆಲುಗು ನಟ ನಿತಿನ್ ಬುಧವಾರವಷ್ಟೇ ಬಹುಕಾಲದ ಗೆಳತಿ ಶಾಲಿನಿ ಕಂದುಕುರಿ ಅವರೊಟ್ಟಿಗೆ ನಿಶ್ಚಿತಾರ್ಥ ನೆರವೇರಿಸಿಕೊಂಡರು. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಸಹ ನಿತಿನ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದು, ವೈರಸ್ ಸಹ ಆಗಿವೆ.
ಇದನ್ನೂ ಓದಿ: ವಾರ ಭವಿಷ್ಯ: ಈ ರಾಶಿಯವರಿಗೆ ಎಲ್ಲವೂ ಶುಭಾಂತ್ಯದಲ್ಲಿ ಸುಖ-ಸಂತೋಷ ಕೊಡುತ್ತದೆ
ಇನ್ನು ಫೋಟೋಗಳಲ್ಲಿ ನಿತಿನ್ ಸಾಂಪ್ರದಾಯಿಕ ಕುರ್ತಾ-ಪೈಜಾಮ ಧರಿಸಿದ್ದರೆ, ಶಾಲಿನಿ ರೆಡ್ ಆ್ಯಂಡ್ ಗೋಲ್ಡ್ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಇನ್ನು ಇವರ ವಿವಾಹ ಮೂಹರ್ತ ಲಾಕ್ಡೌನ್ ನಡುವೆಯೂ ಇಂದು ಹೈದರಾಬಾದ್ನಲ್ಲಿ ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ನಡೆಯಲಿದ್ದು, ಕರೊನಾ ವೈರಸ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ನಿಶ್ಚಿತಾರ್ಥದಲ್ಲಿ ಅಭಿನವ್ ಮಿಶ್ರಾ ಬಿಗೆ ಕುರ್ತಾದಲ್ಲಿ ಸಖತ್ ಕೂಲ್ ಆಗಿ ನಿತಿನ್ ಕಾಣಿಸಿಕೊಂಡಿದ್ದಾರೆ. ಇನ್ನು ಇದರ ಬೆಲೆ ಕೇಳಿದ್ರೆ ಅಚ್ಚರಿಯಾಗದೇ ಇರದು. ಬರೋಬ್ಬರಿ 67,200 ರೂಪಾಯಿಯ ಕುರ್ತಾ ಇದಾಗಿದ್ದು, ಇದೀಗ ಎಲ್ಲಡೆ ಇದರದ್ದೇ ಮಾತಾಗಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ಚೀನಿ ಸೈನಿಕರಿಂದ ಗೂಢಚರ್ಯೆ; ಮೂವರ ಬಂಧನ
ಅಂದಹಾಗೆ ನಿತಿನ್ ವರಿಸುತ್ತಿರುವ ಶಾಲಿನಿ ಎಂಬಿಎ ಪದವೀಧರೆ, ಯುನೈಟೆಡ್ ಕಿಂಗ್ಡಮ್ನಲ್ಲಿ ಶಿಕ್ಷಣ ಮುಗಿಸಿದ್ದಾರೆ. ಹಲವು ವರ್ಷಗಳಿಂದ ನಿತಿನ್-ಶಾಲಿನಿ ಪರಿಚಿತರು. ಇನ್ನು ನಿತಿನ್ ಸಿನಿಮಾ ವಿಚಾರಕ್ಕೆ ಬಂದರೆ ರಂಗ್ ದೆ ಮತ್ತು ಚೆಕ್ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್)
Aaaand ENGAGED!! ❤️❤️❤️ pic.twitter.com/MqqbRo2HsS
— nithiin (@actor_nithiin) July 22, 2020
ಉತ್ತರ ಕೊರಿಯಾದಲ್ಲಿ ಮೊದಲ ಕರೊನಾ ಶಂಕಿತ ಪ್ರಕರಣ: ಸೋಂಕು ತಡೆಯಲು ಕಿಮ್ ಕಠಿಣ ನಿರ್ಧಾರ!