More

    ಪ್ರಬುದ್ಧ ಕಲಾಕೃತಿ ರಚನೆಗೆ ಸಹನಾ ಶಕ್ತಿಯೇ ಸಂಪತ್ತು: ಪ್ರೊ. ಅಶೋಕ ಅಕ್ಕಿ

    ವಿಜಯವಾಣಿ ಸುದ್ದಿಜಾಲ ಗದಗ
    ಕಲಾವಿದ ಲಿಯೋನಾರ್ಡ ಡವಿಂಚಿ ಬಹುಮುಖ ಪ್ರತಿಭೆಯ ಮಹಾ ಸಾಧಕ. ತಮ್ಮ ಜೀವನವನ್ನೇ ಕಲೆಗಾಗಿ ಬದುಕಿ, ಲಲಿತ ಕಲೆಗಳಲ್ಲಿ ಪರಿಣಿತರಾದವರು. ಇಟಾಲಿ ದೇಶದ ಲಿಯೋನಾರ್ಡ ಶಿಲ್ಪ, ಚಿತ್ರ, ವಾಸ್ತು, ಸಂಗೀತ ಕಲೆಗಳಲ್ಲಿ ಪ್ರಬುದ್ದತೆಯನ್ನು ಹೊಂದಿದ ಮಹಾ ಶಕ್ತಿ. ಸಹನಾ ಸಾಧಕ ಮತ್ತು ಚಿಂತಕ ಎಂದು ವಿಜಯ ಲಲಿತ ಕಲಾ ಸಂಸ್ಥೆಯ ಅಧ್ಯ ಪ್ರೊ. ಅಶೋಕ ಅಕ್ಕಿ ಮಾತನಾಡಿದರು.
    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಭವನದಲ್ಲಿ ಸೋಮವಾರ ವಿಶ್ವಕಲಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾವ್ಯಕುಂಚ ಗಾಯನ, ಕಲಾ ಪ್ರದರ್ಶನ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲಾವಿದರು ಇಂದು ತಾಳ್ಮೆ ಕಳೆದುಕೊಳ್ಳುತಿದ್ದಾರೆ. ವೇಗವಾಗಿ ಬೆಳೆಯುವ ಆತುರದಲ್ಲಿ ಪ್ರಬುದ್ಧ ಕಲಾಕೃತಿ ರಚನೆ ಸಾಧ್ಯವಿಲ್ಲ. ಇದರಿಂದ ಕಲಾ ೇತ್ರದ ಬೆಳವಣಿಗೆ ಆಗಲು ಸಾಧ್ಯವಿಲ್ಲ. ಅಪಾರ ಶ್ರಮ ಶ್ರದ್ಧೆಯಿಂದ ಲಿಯೋನಾರ್ಡ ಜಗತಸಿದ್ದ ಕಲೆಯನ್ನು ರಚಿಸಿದ್ದಾರೆ. ಅಂತಹ ಕಲೆಗಳನ್ನು ರಚನೆ ಮಾಡಲು ಅವರಂತಹ ಆದರ್ಶಗಳನ್ನು ರೂಢಿಸಿಕೊಂಡು ಉತ್ತಮ ಕಲಾಕೃತಿಯಲ್ಲಿ ನಿರತರಾಗಬೇಕು ಎಂದರು.
    ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಸದಸ್ಯ ಡಾ. ಬಸವರಾಜ ಕಲೆಗಾರ ಮಾತನಾಡಿ, ಕಲೆ ಎಂಬುವದು ಸರ್ವರಲ್ಲಿ ನೆಲೆ ಸಿಗದು. ಅದರಲ್ಲಿ ವಿಶೇಷ ಸೃಜನಶೀಲತೆಯನ್ನು ರೂಢಿಸಿಕೊಂಡು ಕಲಾವಿದರಾಗಿ ಬೆಳೆದವರಿಗೆ ಮಾತ್ರ ಕಲೆ ಲಭಿಸುತ್ತದೆ ಮತ್ತು ಪ್ರಭುದ್ಧತೆ ಬೆಳೆಯುತ್ತದೆ ಎಂದರು.
    ಕಲಾ ಸಾಧಕರನ್ನು ಸನ್ಮಾನಿಸಲಾಯಿತು. ಅನ್ನದಾನಿ ಹಿರೇಮಠ, ಡಾ. ಬಿ. ಎಲ್​. ಚವ್ಹಾಣ, ಕಿಶೋರಬಾಬು ನಾಗರಕಟ್ಟಿ, ಡಾ. ಜಿ. ಬಿ ಪಾಟೀಲ, ಕೆ. ಎಚ್​. ಬೇಲೂರ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts