More

    ಅಮೆರಿಕದಲ್ಲಿ ಚೀನಿ ಸೈನಿಕರಿಂದ ಗೂಢಚರ್ಯೆ; ಮೂವರ ಬಂಧನ

    ವಾಷಿಂಗ್ಟನ್: ವಾಣಿಜ್ಯ ಸಮರ ಹಾಗೂ ಕರೊನಾ ವಿಷಯವಾಗಿ ಅಮೆರಿಕದೊಂದಿಗೆ ಸಂಬಂಧ ಹದಗೆಡಿಸಿಕೊಂಡಿರುವ ಚೀನಾ, ಅಮೆರಿಕದಲ್ಲಿ ಗೂಢಚರ್ಯೆ ನಡೆಸಲು ತನ್ನ ಸೈನಿಕರನ್ನು ನಕಲಿ ಗುರುತಿನೊಂದಿಗೆ ಅಮೆರಿಕಕ್ಕೆ ಕಳುಹಿಸಿದೆ ಎಂಬ ಆರೋಪ ಕೇಳಿಬಂದಿದೆ.

    ಇದಕ್ಕೆ ಪೂರಕವೆಂಬಂತೆ ತಮ್ಮ ನಿಜವಾದ ಗುರುತನ್ನು ಮುಚ್ಚಿಟ್ಟು ಅಮೆರಿಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಚೀನಾದ ಮೂವರು ಪ್ರಜೆಗಳನ್ನು ಅಮೆರಿಕದ ಎಫ್​ಬಿಐ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದು, ಇವರು ಅಮೆರಿಕದಲ್ಲಿ ಗೂಢಚರ್ಯು ನಡೆಸುತ್ತಿದ್ದರು ಎನ್ನಲಾಗುತ್ತಿದೆ.

    ಮತ್ತೋರ್ವ ಚೀನಿ ಪ್ರಜೆಗಾಗಿ ಅಧಿಕಾರಿಗಳು ಶೋಧ ನಡೆಸುತ್ತಿದ್ದು, ಅವರು ಸ್ಯಾನ್ ಫ್ರಾನ್ಸಿಸ್ಕೋದ ಚೀನಾ ದೂತಾವಾಸ ಕಚೇರಿಯಲ್ಲಿ ಆಶ್ರಯ ಪಡೆದಿರಬಹುದು ಎಂದು ಶಂಕೆ ವ್ಯಕ್ತಪಡಿಸಿಲಾಗಿದೆ. ನಾಲ್ವರ ಮೇಲೂ ವೀಸಾ ವಂಚನೆ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಆರೋಪ ಸಾಬೀತಾದರೆ ಅವರಿಗೆ ಗರಿಷ್ಠ 10 ವರ್ಷ ಜೈಲು ಮತ್ತು 2,50,000 ಡಾಲರ್ ದಂಡ ವಿಧಿಸಬಹುದಾಗಿದೆ. ಬಂಧಿತರಲ್ಲಿ ಒಬ್ಬರನ್ನು ಟ್ಯಾಂಗ್ ಜುವಾನ್ ಎಂದು ಗುರುತಿಸಲಾಗಿದ್ದು, ಈ ಮಹಿಳೆ ಅಮೆರಿಕದ ರಿಸರ್ಚ್ ಲ್ಯಾಬ್​ನಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

    ಚೀನಾದ ಈ ರೀತಿಯ ಕುತಂತ್ರದ ಶಂಕೆ ಹಿನ್ನೆಲೆಯಲ್ಲಿ ಚೀನಾ ಸೇನೆಯೊಂದಿಗೆ ನಂಟು ಹೊಂದಿರುವವರಿಗಾಗಿ ಎಫ್​ಬಿಐ ಅಮೆರಿಕದ 25ಕ್ಕೂ ಹೆಚ್ಚು ಪ್ರಮುಖ ನಗರಗಳಲ್ಲಿ ಹುಡುಕಾಟ ನಡೆಸುತ್ತಿದೆ. ಇವರು ಅಮೆರಿದಕ ವೀಸಾ ಪಡೆಯುವಾಗ ತಮ್ಮ ಮೂಲ ಮಾಹಿತಿಗಳನ್ನು ಮುಚ್ಚಿಟ್ಟು, ವಿವಿಧ ಸಂಶೋಧನೆಗಳಿಗಾಗಿ ವೀಸಾ ಅರ್ಜಿ ಸಲ್ಲಿಸಿದ್ದರು ಎಂದು ರಾಷ್ಟ್ರೀಯ ಭದ್ರತಾ ಸಹಾಯಕ ಅಟಾರ್ನಿ ಜನರಲ್ ಜಾನ್ ಸಿ ಡಿಮರ್ಸ್ ಹೇಳಿದ್ದಾರೆ. ವಿಶ್ವಾದ್ಯಂತದ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಮತ್ತು ಸಂಶೋಧಕರನ್ನು ಅಮೆರಿಕ ಸ್ವಾಗತಿಸುತ್ತಿರುವುದರ ಲಾಭವನ್ನು ಚೀನಾ ಪಡೆದುಕೊಂಡಿದೆ. ಎಫ್​ಬಿಐ ಜತೆಗೂಡಿ ಈ ಬಗ್ಗೆ ತನಿಖೆಯನ್ನು ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ.

    ಜುವಾನ್ ಬೀಜಿಂಗ್​ನಲ್ಲಿ ಜೀವಶಾಸ್ತ್ರ ವಿಷಯದಲ್ಲಿ ಪದವಿ ಪಡೆದು ಬಳಿಕ ಅಲ್ಲಿನ ಸೇನಾ ಪ್ರಯೋಗಾಲಯದಲ್ಲಿ ಕೆಲಸಕ್ಕೆ ಸೇರಿದ್ದರು. ನಂತರ ಇಂಗ್ಲಿಷ್ ಮಾತನಾಡಲು ಕಲಿತು, ಬೇಹುಗಾರಿಕೆ ತರಬೇತಿ ಪಡೆದರು. ಬಳಿಕ ನಕಲಿ ವೀಸಾದೊಂದಿಗೆ ಅಮೆರಿಕದ ಹೆಸರಾಂತ ಡೇವಿಸ್ ರಿಸರ್ಚ್ ಲ್ಯಾಬ್​ನಲ್ಲಿ ಸಹಾಯಕರಾಗಿ ಕೆಲಸ ಗಿಟ್ಟಿಸಿಕೊಂಡರು.

    ಭಾರತದಲ್ಲಿ ಅಡಗಿದ್ದಾಳೆ ಶ್ರೀಲಂಕಾ ಆತ್ಮಹತ್ಯಾ ಬಾಂಬರ್​​ನ ಪತ್ನಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts