More

    ಲಸಿಕೆಗಳ ಮೇಲಿನ ಭರವಸೆಯನ್ನೇ ಬುಡಮೇಲು ಮಾಡಲಿದೆ ಕರೊನಾ ವೈರಸ್​ನ ರೂಪಾಂತರ; ಭಾರತದಲ್ಲೂ ಇದೆ ಕುರುಹು

    ನವದೆಹಲಿ: ಇನ್ನೇನು ಕೆಲ ತಿಂಗಳಲ್ಲಿಯೇ ಕರೊನಾ ನಿಗ್ರಹಕ್ಕೆ ಜಗತ್ತಿನಲ್ಲಿ ಲಸಿಕೆ ಸಜ್ಜಾಗುತ್ತಿದೆ. ಜತೆಗೆ ದೇಶೀಯವಾಗಿಯೂ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್​ ಕೂಡ ಹೊಸ ಭರವಸೆ ಮೂಡಿಸಿದೆ.

    ಒಂದೆಡೆ ರಷ್ಯಾ ಲಸಿಕೆಯನ್ನು ಸಿದ್ಧಪಡಿಸಿ ನೋಂದಣಿಯನ್ನು ಮಾಡಿದೆ. ಆದರೆ, ಇದನ್ನು ಪಾಶ್ಚಾತ್ಯರು ಸಂಶಯದಿಂದಲೇ ನೋಡುತ್ತಿದ್ದಾರೆ ಎನ್ನುವುದು ಬೇರೆ ಮಾತು. ಆದರೂ ಇದರ ಮೂರನೇ ಹಂತದ ಕ್ಲಿನಿಕಲ್​ ಟ್ರಯಲ್​ ಕೂಡ ಸಾಗಿದೆ.

    ಇನ್ನೊಂದೆಡೆ, ಆಕ್ಸ್​ಫರ್ಡ್​ ವಿವಿ ಲಸಿಕೆ, ಅಮೆರಿಕದ ಮಾಡೆರ್ನಾ ಔಷಧಗಳು ಮುಂಚೂಣಿಯಲ್ಲಿವೆ. ಜತೆಗೆ, ವರ್ಷಾಂತ್ಯದಲ್ಲಂತೂ ಬಳಕೆಗೆ ಮುಕ್ತವಗುವುದು ಖಚಿತ. ಇಡೀ ಜಗತ್ತು ಈಗ ಈ ಲಸಿಕೆಗಳ ಮೇಲೆ ಭರವಸೆ ಹೊತ್ತು ಕೂತಿದೆ. ಆದರೆ, ಇವುಗಳ ಮೇಲಿನ ಭರವಸೆಯನ್ನೇ ಬುಡಮೇಲು ಮಾಡುವಂತೆ ಕರೊನಾ ವೈರಸ್​ ಹೊಸ ರೂಪಾಂತರ ಪಡೆದುಕೊಂಡಿದೆ…!

    ಇದನ್ನೂ ಓದಿ;  ಇದು ಭಾರಿ ಭಯಾನಕ ಕರೊನಾ; ಈಗಿನದ್ದಕ್ಕಿಂತಲೂ ಹತ್ತು ಮಾರಕ…!

    ಕರೊನಾ ವೈರಸ್​ ಆರು ತಿಂಗಳಿಗೊಮ್ಮೆ ರೂಪಾಂತರ ಪಡೆದುಕೊಳ್ಳಬಹುದು ಎಂದು ತಜ್ಞರು ಈ ಹಿಂದೆಯೇ ಎಚ್ಚರಿಸಿದ್ದರು. ಜತೆಗೆ ಬೇರೆ ಬೇರೆ ದೇಶಗಳಲ್ಲಿ ಇದರ ಸ್ವರೂಪ ಬದಲಾಗಿದೆ ಎಂಬುದನ್ನು ಕಂಡುಕೊಂಡಿದ್ದರು.

    ಆದರೆ, ಮಲೇಷ್ಯಾದಿಂದ ಈಗ ಹೊರ ಬಿದ್ದಿರುವ ಸುದ್ದಿ ತಜ್ಞರನ್ನು ಕೊಂಚ ಆತಂಕಕ್ಕೆ ದೂಡಿದೆ. ಕರೊನಾ ವೈರಸ್​ನ ಹೊಸ ರೂಪಾಂತರವೊಂದು ಅಲ್ಲಿನ ರೋಗಿಯಲ್ಲಿ ಕಂಡುಬಂದಿದ್ದು, ಅದನ್ನು ‘D614G’ ಎಂದು ಹೆಸರಿಸಲಾಗಿದೆ. ಇದು ಹಾಲಿ ಕಂಡುಬರುತ್ತಿರುವ ವೈರಸ್​ ರೂಪಾಂತರಕ್ಕಿಂತ ಹತ್ತು ಪಟ್ಟು ಹೆಚ್ಚು ಮಾರಕ ಎಂದು ಮಲೇಷ್ಯಾದ ಆರೋಗ್ಯ ಮಹಾನಿರ್ದೇಶಕ ನೂರ್​ ಹಿಷಾಮ್​ ಅಬ್ದುಲ್ಲಾ ಹೇಳಿದ್ದಾರೆ.

    ಇದನ್ನೂ ಓದಿ; ಸೌದಿ ಅರೇಬಿಯಾದಲ್ಲಿ ಉತ್ಪಾದನೆಯಾಗಲಿದೆ ರಷ್ಯನ್​ ಕರೊನಾ ಲಸಿಕೆ; ಫಿಲಿಫೈನ್ಸ್​, ಬ್ರೆಜಿಲ್​ನಲ್ಲೂ ಕ್ಲಿನಿಕಲ್​ ಟ್ರಯಲ್​ 

    ಹೀಗಾಗಿ ಈ ಅಭಿವೃದ್ಧಿಪಡಿಸಲಾಗುತ್ತಿರುವ ನಡೆಯುತ್ತಿರುವ ಲಸಿಕೆಗಳು ನಿಷ್ಪ್ರಯೋಜಕವಾಗಬಹುದು ಎಂಬ ಆತಂಕವೂ ಎದುರಾಗಿದೆ. ವೈರಸ್​ನ ಹೊಸ ರೂಪಾಂತರದಿಂದಾಗಿ ಸಂಶೋಧಕರು ಹೊಸದಾಗಿ ಈ ನಿಟ್ಟಿನಲ್ಲಿ ಪ್ರಯೋಗ ನಡೆಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    ಇನ್ನು, ಈ ವೈರಸ್​ ಕುರುಹು ಪತ್ತೆಯಾದ ವ್ಯಕ್ತಿ ಭಾರತಕ್ಕೆ ಭೇಟಿ ನೀಡಿದ್ದ. ಬಳಿಕವೇ ಆತನಿಗೆ ಸೋಂಕು ತಗುಲಿದೆ ಎಂಬುದು ಅಬ್ದುಲ್ಲಾ ಹೇಳುತ್ತಾರೆ. ಅಲ್ಲಿಗೆ ಈ ವೈರಸ್​ನಿಂದ ಭಾರತಕ್ಕೂ ಅಪಾಯ ಕಾದಿದೆ ಎಂದೇ ಹೇಳಬೇಕಾಗುತ್ತದೆ ಎಂಬುದು ತಜ್ಞರ ಅಭಿಮತ. ಒಟ್ಟಿನಲ್ಲಿ ಕರೊನಾ ಮಹಾಮಾರಿ ತೊಲಗುತ್ತೆ ಎಂಬ ವಿಶ್ವಾಸ ಮೂಡಿದ್ದಾಗಲೇ, ಅದರ ಮತ್ತೊಂದು ರೂಪ ಆತಂಕ ಹುಟ್ಟಿಸಿರುವುದಂತೂ ಸತ್ಯ.

    ದೇಶದಲ್ಲಿ ಮೊದಲು ಕರೊನಾ ಲಸಿಕೆ ಪಡೆಯೋದು ಯಾರು? ಪ್ರಶ್ನೆಗೆ ಸಿಕ್ಕಿದೆ ಉತ್ತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts