More

    ದೇಶದಲ್ಲಿ ಮೊದಲು ಕರೊನಾ ಲಸಿಕೆ ಪಡೆಯೋದು ಯಾರು? ಪ್ರಶ್ನೆಗೆ ಸಿಕ್ಕಿದೆ ಉತ್ತರ

    ನವದೆಹಲಿ: ರಷ್ಯಾದಲ್ಲಿ ಕಂಡುಹಿಡಿಯಲಾಗಿರುವ ಕೋವಿಡ್​ ಲಸಿಕೆಯನ್ನು ಮೊದಲಿಗೆ ವೈದ್ಯರು ಹಾಗೂ ಶಿಕ್ಷಕರಿಗೆ ನೀಡಲಾಗುತ್ತದೆ ಎಂದು ಅಲ್ಲಿನ ಸರ್ಕಾರ ಈಗಾಗಲೇ ತಿಳಿಸಿದೆ.

    ಭಾರತದಲ್ಲೂ ಕೂಡ ಅಂಥದ್ದೇ ಕುತೂಹಲ ಮನೆ ಮಾಡಿದೆ. ಏಕೆಂದರೆ ಇಲ್ಲೂ ಕೂಡ ಲಸಿಕೆಯ ಮೊದಲ ಹಂತದ ಪ್ರಯೋಗ ಮುಗಿದಿದ್ದು ಮಾನವರ ಬಳಕೆಗೆ ಸುರಕ್ಷಿತ ಎನ್ನುವುದು ಆರಂಭಿಕ ಹಂತದ ಫಲಿತಾಂಶಗಳಲ್ಲಿ ಗೊತ್ತಾಗಿದೆ.

    ಇದನ್ನೂ ಓದಿ; ಮಗ ಬಿಜೆಪಿ ಸೇರಿದರೆ ಏನ್ಮಾಡ್ತೀರಾ? ಕಾಂಗ್ರೆಸ್​ ಹಿರಿಯ ಮುಖಂಡ, ಮಾಜಿ ಸಿಎಂ ದಿಗ್ವಿಜಯ್​ ಉತ್ತರವೇನು ಗೊತ್ತೆ?

    ಅಭಿವೃದ್ಧಿ ಹಂತದಲ್ಲಿರುವ ಲಸಿಕೆ ಖರೀದಿ ಹಾಗೂ ವಿತರಣೆಗೆ ಸಮಗ್ರ ಯೋಜನೆ ರೂಪಿಸಲು ಕೇಂದ್ರ ಸರ್ಕಾರ ಈಗಾಗಲೇ ಟಾಸ್ಕ್​ ಫೋರ್ಸ್​ ರಚಿಸಿದೆ. ಇದು ಖರೀದಿ, ಉತ್ಪಾದನೆ, ವಿತರಣೆ ಹಾಗೂ ಸಾಗಾಟದ ಬಗ್ಗೆ ಸಂಪೂರ್ಣ ಯೋಜನೆಯನ್ನು ರೂಪಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕೂಡ ಹೇಳಿದ್ದಾರೆ.

    ಕರೊನಾ ಲಸಿಕೆಗಾಗಿ ತಜ್ಞರು ಭಾರಿ ಶ್ರಮವಹಿಸಿದ್ದಾರೆ. ಭಾರತದಲ್ಲಿ ವೈರಸ್​ ನಿಗ್ರಹಿಸುವ ಲಸಿಕೆ ಲಭ್ಯವಾದರೆ ಮೊದಲು ಅದನ್ನು ಕೋವಿಡ್​19 ವಾರಿಯರ್ಸ್​ಗೆ ನೀಡಲಾಗುತ್ತದೆ ಎಂದು ಕೇಂದ್ರ ಸಚಿವ ಅಶ್ವಿನಿಕುಮಾರ್​ ಚೌಬೆ ಹೇಳಿದ್ದಾರೆ.

    ಇದನ್ನೂ ಓದಿ; ಕರೊನಾ ಲಸಿಕೆ ತಯಾರಿಕೆಗೆ ರಷ್ಯಾ ಜತೆ ಡೀಲಿಗಿಳಿದ ಭಾರತೀಯ ಕಂಪನಿಗಳು; ಔಷಧ ಕ್ಷೇತ್ರದಲ್ಲಿ ದೇಶದ ಸಾಮರ್ಥ್ಯವೇ ಹೆಚ್ಚುಗಾರಿಕೆ

    ಕರೊನಾ ವಿರುದ್ಧ ಮುಂಚೂಣಿಯಲ್ಲಿ ಹೋರಾಡುತ್ತಿರುವ ವೈದ್ಯರು, ನರ್ಸ್​ಗಳು, ಅರೆವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರು ಮೊದಲು ಕರೊನಾ ಲಸಿಕೆ ಪಡೆಯಲಿದ್ದಾರೆ. ಕರೊನಾ ಲಸಿಕೆ ಉಸ್ತುವಾರಿಗಾಗಿ ರಚಿಸಲಾಗಿರುವ ಟಾಸ್ಕ್​ ಫೋರ್ಸ್​ ನಿರ್ಣಯವೂ ಕೂಡ ಇದೇ ಆಗಿದೆ ಎಂದು ಹೇಳಲಾಗಿದೆ.

    ಮತ್ತೆ ಸಂಪೂರ್ಣ ಲಾಕ್​ಡೌನ್​; ತುರ್ತು ಸಂಪುಟ ಸಭೆಯಲ್ಲಿ ನಿರ್ಣಯ; ಆಗಸ್ಟ್​ 31ರವರೆಗೆ ನಿರ್ಬಂಧ ವಿಧಿಸಿದ್ದೆಲ್ಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts