More

    ಕರೊನಾ ಲಸಿಕೆ ತಯಾರಿಕೆಗೆ ರಷ್ಯಾ ಜತೆ ಡೀಲಿಗಿಳಿದ ಭಾರತೀಯ ಕಂಪನಿಗಳು; ಔಷಧ ಕ್ಷೇತ್ರದಲ್ಲಿ ದೇಶದ ಸಾಮರ್ಥ್ಯವೇ ಹೆಚ್ಚುಗಾರಿಕೆ

    ನವದೆಹಲಿ: ರಷ್ಯಾದ ಕರೊನಾ ಲಸಿಕೆಯನ್ನು ಭಾರತದಲ್ಲಿ ತಯಾರಿಸಲು ಭಾರತೀಯ ಕಂಪನಿಗಳು ಆಸಕ್ತಿ ತೋರಿವೆ. ಮಾತ್ರವಲ್ಲ, ಈ ಬಗ್ಗೆ ಮಾಸ್ಕೋದ ರಾಯಭಾರ ಕಚೇರಿಯಿಂದ ಮಾಹಿತಿಯನ್ನು ಪಡೆದಿವೆ.

    ರಷ್ಯಾದಲ್ಲಿ ಭಾರತೀಯ ರಾಯಭಾರಿಯಾಗಿರುವ ಡಿ.ಬಿ. ವೆಂಕಟೇಶ್​ ವರ್ಮಾ ಈ ವಿಷಯ ತಿಳಿಸಿದ್ದಾರೆ. ರಷ್ಯಾ ಲಸಿಕೆ ಸಂಶೋಧನೆಗೆ ಆರ್ಥಿಕ ನೆರವು ನೀಡಿರುವ ರಷ್ಯನ್​ ಡೈರೆಕ್ಟ್​ ಇನ್ವೆಸ್ಟ್​ಮೆಂಟ್​ ಫಂಡ್ (ಆರ್​ಡಿಐಎಫ್​​)​ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜತೆಗೆ ಅತ್ಯಂತ ಫಲಪ್ರದ ಮಾತುಕತೆ ನಡೆದಿದೆ ಎಂದು ಅವರು ರಷ್ಯನ್​ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ; ಕಾರ್ಖಾನೆಯಲ್ಲಿ ಉತ್ಪಾದನೆಯಾಯ್ತು ರಷ್ಯಾದ ಕೋವಿಡ್​ ಲಸಿಕೆ ಸ್ಪುಟ್ನಿಕ್​-ವಿ; ವೈದ್ಯರು, ಶಿಕ್ಷಕರಿಗೆ ಮೊದಲ ಚುಚ್ಚುಮದ್ದು..! 

    ಭಾರತೀಯ ಕಂಪನಿಗಳು ಆರ್​ಡಿಐಎಫ್ ಸಂಪರ್ಕದಲ್ಲಿವೆ. ಲಸಿಕೆಯ ಒಂದನೇ ಮತ್ತು ಎರಡನೇ ಹಂತದ ಪ್ರಯೋಗದ ತಾಂತ್ರಿಕ ವಿವರಗಳನ್ನು ಕೋರಿವೆ. ಜತೆಗೆ ಭಾರತದಲ್ಲಿ ಲಸಿಕೆ ತಯಾರಿಸುವ ಸಾಧ್ಯತೆಗಳ ಬಗ್ಗೆಯೂ ಚರ್ಚೆ ನಡೆಸಿವೆ ಎಂದು ಅವರು ಹೇಳಿದ್ದಾರೆ.

    ರಷ್ಯಾದಿಂದಷ್ಟೇ ಅಲ್ಲ, ಭಾರತದಲ್ಲೂ ಲಸಿಕೆ ಸಜ್ಜಾಗಲಿದೆ. ಹೀಗಾಗಿ ಎರಡೂ ರಾಷ್ಟ್ರಗಳ ನಡುವೆ ಸಹಕಾರ ಅಗತ್ಯ. ಈಗಾಗಲೇ ಹಲವು ಔಷಧ ಕಂಪನಿಗಳು ರಷ್ಯಾ ಜತೆಗೆ ಸಹಕಾರ ಒಪ್ಪಂದವೇರ್ಪಟ್ಟಿದೆ. ಹೀಗಾಗಿ ಲಸಿಕೆ ಉತ್ಪಾದನೆಯಲ್ಲಾಗುತ್ತಿರುವ ಬೆಳವಣಿಗೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ವರ್ಮಾ ಹೇಳಿದ್ದಾರೆ.

    ಇದನ್ನೂ ಓದಿ; ಕರೊನಾ ನಿಯಂತ್ರಿಸುವಲ್ಲಿ ಮತ್ತೊಂದು ದಾಖಲೆ ಬರೆದ ದೆಹಲಿ; ದೇಶದಲ್ಲಿಯೇ ನಂಬರ್​ ಒನ್​…! 

    ಭಾರತ ಔಷಧ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಅಲ್ಲದೇ, ಅತ್ಯಂತ ಮಿತವ್ಯಯದ ಔಷಧಗಳನ್ನು ಇಡೀ ವಿಶ್ವಕ್ಕೆ ಪೂರೈಸುತ್ತಿದೆ. ಯಾವುದೇ ಲಸಿಕೆಯನ್ನು ಬೃಹತ್​ ಪ್ರಮಾಣದಲ್ಲಿ ಅತ್ಯಂತ ತ್ವರಿತವಾಗಿ ಕಡಿಮೆ ಬೆಲೆಯೆಲ್ಲಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂದು ವರ್ಮಾ ಹೇಳಿದ್ದಾರೆ. ಈ ಕಾರಣಕ್ಕೆ ಭಾರತದೊಂದಿಗಿನ ಒಪ್ಪಂದ ಪ್ರಮುಖವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

    ಪ್ರಧಾನಿ ಮೋದಿ ಹೇಳಿದ ಮೂರು ದೇಶೀಯ ಕರೊನಾ ಲಸಿಕೆಗಳಾವವು? ಇಲ್ಲಿದೆ ಮಾಹಿತಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts