More

    ಗ್ರೀನ್​ ಟೀ ತಯಾರಿಸುವಾಗ, ಕುಡಿಯುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಲೇಬಾರದು!

    ಪ್ರತಿನಿತ್ಯ ಗ್ರೀನ್​ ಟೀ ಕುಡಿಯುವುದರಿಂದ ದೇಹಕ್ಕೆ ಅನೇಕ ಆರೋಗ್ಯಕರ ಲಾಭಗಳು ದೊರೆಯುತ್ತವೆ ಎಂಬುದು ಎಲ್ಲರಿಗೂ ತಿಳಿದಿದೆ. ಬೆಳಗಿನ ಸಮಯದಲ್ಲಿ ಗ್ರೀನ್​ ಟೀ ಸೇವಿಸಲು ಆರೋಗ್ಯ ತಜ್ಞರು ಸಹ ಶಿಫಾರಸು ಮಾಡುತ್ತಾರೆ. ಆದರೆ, ಗ್ರೀನ್​ ಟೀ ಪ್ರಯೋಜನ ಮಾತ್ರ ತಿಳಿದುಕೊಂಡು ಅದನ್ನು ಸೇವಿಸುವುದರಿಂದ ಕೆಲವು ತೊಂದರೆಗಳು ಎದುರಾಗುವ ಸಾಧ್ಯತೆಯೂ ಇರುತ್ತದೆ. ಏಕೆಂದರೆ, ಗ್ರೀನ್ ಟೀ ಕುಡಿಯುವಾಗ ಏನಾದರೂ ತಪ್ಪಾದಲ್ಲಿ ಅದು ಒಳ್ಳೆಯದಕ್ಕಿಂತ ತುಂಬಾ ಹಾನಿಯನ್ನುಂಟು ಮಾಡುತ್ತದೆ.

    ಗ್ರೀನ್​ ಟೀ ಅನ್ನು ಸರಿಯಾಗಿ ತಯಾರಿಸದಿದ್ದಲ್ಲಿ, ನಿಮ್ಮ ದೇಹಕ್ಕೆ ಯಾವುದೇ ಪ್ರಯೋಜನಗಳು ಸಿಗುವುದಿಲ್ಲ. ಇದೇ ರೀತಿ ಸೇವಿಸಿದರೆ ದೇಹಕ್ಕೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಹಾಗಾದ್ರೆ ಗ್ರೀನ್​ ಟೀ ಮಾಡುವಾಗ ಯಾವ ತಪ್ಪನ್ನು ಮಾಡಬಾರದು? ನಿಮ್ಮ ತಲೆಯಲ್ಲಿರುವ ಈ ಪ್ರಶ್ನೆಗೆ ಉತ್ತರ ಮುಂದಿದೆ.

    ಇದನ್ನೂ ಓದಿ: ಮರ್ಮಾಂಗ ಕತ್ತರಿಸಿಕೊಂಡು MBBS ವಿದ್ಯಾರ್ಥಿ ಸಾವಿಗೆ ಶರಣು: ನಿಗಾವಹಿಸಿದ್ರು ಉಳೀಲಿಲ್ಲ ಪುತ್ರ, ಪಾಲಕರ ಆಕ್ರಂದನ

    1. ಖಾಲಿ ಹೊಟ್ಟೆಯಲ್ಲಿ ಕುಡಿಯಬೇಡಿ: ಗ್ರೀನ್​ ಟೀ ಕುಡಿಯುವುದು ಒಳ್ಳೆಯದು. ಆದರೆ, ಬೆಳಗಿನ ಜಾವದಲ್ಲಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಒಳ್ಳೆಯದಲ್ಲ. ಗ್ರೀನ್​ ಟೀನಲ್ಲಿರುವ ಟ್ಯಾನಿನ್‌ಗಳು ಹೊಟ್ಟೆಯ ತೊಂದರೆ ಮತ್ತು ಅಜೀರ್ಣವನ್ನು ಉಂಟುಮಾಡಬಹುದು.

    2. ಅಗತ್ಯಕ್ಕಿಂತ ಹೆಚ್ಚು ಸೇವಿಸಬೇಡಿ: ಅತಿಯಾದ ಗ್ರೀನ್​ ಟೀ ಸೇವನೆ ಅನೇಕ ತೊಂದರೆಗಳನ್ನು ಉಂಟು ಮಾಡುತ್ತದೆ. ಹೆಚ್ಚಾಗಿ ಗ್ರೀನ್​ ಟೀ ಕುಡಿಯುವುದರಿಂದ ಹೃದಯ ಬಡಿತ ಮತ್ತು ನಿದ್ರಾಹೀನತೆ ಹೆಚ್ಚಾಗುತ್ತದೆ. ತೂಕವನ್ನು ಕಡಿಮೆ ಮಾಡಲು ಗ್ರೀನ್​ ಟೀ ಬಳಸಲು ಬಯಸುವುದಾದರೆ, ನೀವು ಸಣ್ಣ ಪ್ರಮಾಣದಲ್ಲಿ ಸೇವಿಸುವುದು ಉತ್ತಮ.

    3. ರಾತ್ರಿಹೊತ್ತು ಸೇವಿಸಬೇಡಿ: ರಾತ್ರಿಹೊತ್ತು ಗ್ರೀನ್​ ಟೀ ಸೇವಿಸುವುದು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಗ್ರೀನ್​ ಟೀನಲ್ಲಿರುವ ಕೆಫೀನ್ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ದೇಹಕ್ಕೆ ಅಗತ್ಯವಿರುವ ವಿಶ್ರಾಂತಿಯನ್ನು ನೀಡುವುದಿಲ್ಲ. ಅಂದರೆ ರಾತ್ರಿಯಲ್ಲಿ ಗ್ರೀನ್ ಟೀ ಕುಡಿಯುವುದು ನಿದ್ರೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

    ಇದನ್ನೂ ಓದಿ: ಬದಲಾಯಿತು ಪಾಕ್​ ಮಹಿಳೆಯ ಜೀವನ ಶೈಲಿ: ಮಾಂಸಾಹಾರಿ ಸೀಮಾ ಈಗ ಸಸ್ಯಾಹಾರಿ, ನಿತ್ಯವೂ ದೇವರ ಸೇವೆ!

    4. ಗ್ರೀನ್​ ಟೀ ಬ್ಯಾಗ್​ಗಳನ್ನು ಮರುಬಳಸಬೇಡಿ: ಕೆಲವರು ಗ್ರೀನ್​ ಟೀ ಬ್ಯಾಗ್​ಗಳನ್ನು ಮರುಬಳಕೆ ಮಾಡುತ್ತಾರೆ. ಈ ರೀತಿ ಎಂದಿಗೂ ಮಾಡಬಾರದು. ಗ್ರೀನ್ ಟೀ ಬ್ಯಾಗ್‌ಗಳನ್ನು ಮರುಬಳಕೆ ಮಾಡುವುದರಿಂದ ಚಹಾದ ರುಚಿಯೇ ಹಾಳಾಗುತ್ತದೆ. ಹಾಗಾಗಿ ಯಾವಾಗಲೂ ತಾಜಾ ಟೀ ಬ್ಯಾಗ್​​ಗಳನ್ನು ಬಳಸುವುದು ಆರೋಗ್ಯಕ್ಕೆ ಉತ್ತಮ. (ಏಜೆನ್ಸೀಸ್​)

    ನಿಮಗೆ ಗೊತ್ತಾ, ಈ ಹಣ್ಣುಗಳನ್ನು ತಿನ್ನುವುದರಿಂದ ಕಾಯಿಲೆಗಳು ಹತ್ತಿರ ಸುಳಿಯಲಾರವು

    ಜೀವನದಲ್ಲಿ ಆ ಆರು ಹವ್ಯಾಸಗಳಿಂದ ದೂರವಿರುವುದು ಒಳಿತು

    ನೀವು ಹಸಿ ಈರುಳ್ಳಿ ಸೇವಿಸುತ್ತೀರಾ? ಹಾಗಾದರೆ ಈ ವಿಷಯ ನೆನಪಿನಲ್ಲಿಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts