More

    ನೇಜಾರು ಕೊಲೆಗಾರನ ‘ವ್ಯಾಮೋಹ’ ತೆರೆದಿಟ್ಟ ಚಾರ್ಜ್‌ಶೀಟ್: ಗಗನಸಖಿಯ ಮದುವೆ ಸಹಿಸದ ಪ್ರವೀಣ

    ವಿಜಯವಾಣಿ ಸುದ್ದಿಜಾಲ ಉಡುಪಿ
    ಮಲ್ಪೆ ಸಮೀಪದ ನೇಜಾರು ಎಂಬಲ್ಲಿ ನವೆಂಬರ್ 12ರಂದು ಒಂದೇ ಕುಟುಂಬದ ನಾಲ್ವರ ಹತ್ಯೆ ನಡೆದ ಘಟನೆಯ ನೈಜ ಕಾರಣದ ವಿವವನ್ನು ಪೊಲೀಸರ ಚಾರ್ಜ್‌ಶೀಟ್ ಬಯಲು ಮಾಡಿದೆ.

    ಅಯ್ನಜ್ ಮೇಲೆ ಅತಿಯಾದ ವ್ಯಾಮೋಹ

    ಕೊಲೆ ಆರೋಪಿ ಪ್ರವೀಣ್ ಚೌಗಲೆಗೆ ಗಗನಸಖಿ ಅಯ್ನಜ್ ಮೇಲೆ ಅತಿಯಾದ ವ್ಯಾಮೋಹ ಇದ್ದುದೇ ಆಕೆಯನ್ನು ಕೊಲೆ ಮಾಡಲು ಒಂದು ಕಾರಣ. ಕೊಲೆ ಮಾಡಲೇಬೇಕು ಎಂಬ ತೀರ್ಮಾನ ಕೈಗೊಳ್ಳಲು ಬಲವಾದ ಕಾರಣವಾಗಿದ್ದು ಆಕೆಯ ಮದುವೆ ವಿಚಾರ.

    ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು

    ಕೊಲೆಯಾದ ಅಯ್ನಜ್ ಮಂಗಳೂರಿನಲ್ಲಿ ಗಗನಸಖಿಯಾಗಿದ್ದಳು. ಪ್ರವೀಣ್ ಕೂಡ 2009ರಿಂದ ಮಂಗಳೂರು ವಿವಾನ ನಿಲ್ದಾಣದಲ್ಲಿ ಫ್ಲೈಟ್ ಅಟೆಂಡೆಂಟ್ ಆಗಿದ್ದ. ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಪ್ರವೀಣ್ ಹಾಗೂ ಅಯ್ನಜ್ ಮಧ್ಯೆ ಆತ್ಮೀಯತೆ ಬೆಳೆದಿತ್ತು. ಅನೇಕ ಬಾರಿ ಕೆಲ ವಿಚಾರಗಳಲ್ಲಿ ಪ್ರವೀಣ್ ಸಹಾಯಮಾಡಿದ್ದರಿಂದ ಅಯ್ನಜ್ ಸಹ ಆತನ ಮೇಲೆ ನಂಬಿಕೆ ಇಟ್ಟಿದ್ದಳು. ಆದರೆ ಚೌಗಲೆ ಆಕೆಯ ಮೇಲೆ ಅತಿಯಾದ ವ್ಯಾಮೋಹ ಹೊಂದಿದ್ದ.

    ಪ್ರವೀಣನ ಪತ್ನಿಯೂ ಮುಸ್ಲಿಂ

    ಕೊಲೆಯಾಗುವ ಎಂಟು ತಿಂಗಳ ಹಿಂದೆ ಅಯ್ನಜ್ ಕೆಲಸಕ್ಕೆ ಸೇರಿದ್ದು, ಆಕೆಗೆ ಚೌಗಲೆ ತನ್ನ ದ್ವಿಚಕ್ರ ವಾಹನ ಕೊಡುತ್ತಿದ್ದ. ಮನೆ ಹುಡುಕಲೂ ಸಹಾಯ ಮಾಡಿದ್ದ. ಇವರಿಬ್ಬರ ಆತ್ಮೀಯತೆಯ ಬಗ್ಗೆ ಪ್ರವೀಣ್‌ನ ಪತ್ನಿಗೆ ಅನುವಾನ ಬಂದು ಆಕೆ ಗಂಡನ ಜತೆ ಜಗಳವಾಡಿದ್ದಳು. ಈ ವಿಚಾರ ಅಯ್ನಜ್‌ಗೂ ಗೊತ್ತಾಗಿತ್ತು. ಹೀಗಾಗಿ ಆಕೆ ಸಾಧ್ಯವಾದಷ್ಟು ಪ್ರವೀಣ್‌ನಿಂದ ದೂರ ಇರಲು ಪ್ರಯತ್ನಿಸಿದ್ದು, ಪ್ರವೀಣ್‌ಗೆ ಬೇಸರ ತಂದಿತ್ತು. ಆರೋಪಿ ಪ್ರವೀಣ್‌ನ ಪತ್ನಿಯೂ ಮುಸ್ಲಿಂ ಆಗಿದ್ದು, ಆಕೆಯನ್ನು 2009ರಲ್ಲಿ ಕದ್ರಿ ದೇವಸ್ಥಾನದಲ್ಲಿ ಮದುವೆಯಾಗಿ, ರಿಯಾ ಎಂಬ ಹೆಸರನ್ನು ಪ್ರಿಯಾ ಎಂದು ಬದಲಾಯಿಸಿದ್ದ.

    ಪೊಲೀಸ್ ವೃತ್ತಿ ತೊರೆದಿದ್ದ

    ಪ್ರವೀಣ್ ಮೊದಲು ಪೊಲೀಸ್ ಕೆಲಸದಲ್ಲಿದ್ದ. 2007ರಲ್ಲಿ ಪುಣೆ ಸಿಟಿಯಲ್ಲಿದ್ದ ಆತ, ವಿದರ್ಭ, ಅಂಕೋಲಾ ಪೊಲೀಸ್ ಶಾಲೆಯಲ್ಲಿ 9 ತಿಂಗಳು ತರಬೇತಿ ಪಡೆದಿದ್ದ. ಬಳಿಕ ಕ್ಯಾಬಿನ್ ಕ್ರೂೃ ಪರೀಕ್ಷೆ ಬರೆದು ಆಯ್ಕೆಯಾಗಿದ್ದ. 2009ರಲ್ಲಿ ಪೊಲೀಸ್ ಕೆಲಸ ಬಿಟ್ಟು ಏರ್ ಇಂಡಿಯಾ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ.

    ಪ್ರಿಯಕರನ ಬಗ್ಗೆ ಹೇಳಿದ್ದೇ ಕೊಲೆಗೆ ಕಾರಣ

    ತನಗೊಬ್ಬ ಪ್ರಿಯಕರನಿದ್ದಾನೆ ಎಂದು ಅಯ್ನಜ್ ಪ್ರವೀಣ್‌ಗೆ ಹೇಳಿದ್ದಾಳೆ. ಆತ ಕತಾರ್‌ನಲ್ಲಿದ್ದು 2023ರ ಅಕ್ಟೋಬರ್ ಕೊನೆಯ ವಾರ ವಾಪಸ್ ಬಂದಿದ್ದಾನೆ. ಮುಂದೆ ಆತನೊಂದಿಗೆ ಮದುವೆಯಾಗುವ ಬಗ್ಗೆ ಆಕೆ ಹೇಳಿದ್ದಳು. ಆಕೆಯ ಪ್ರಿಯಕರನ ವಿಷಯ ತಿಳಿದು ಪ್ರವೀಣ್ ವಿಪರೀತ ಕೋಪದಲ್ಲಿದ್ದ. ಹೀಗಾಗಿ ತನಗೆ ಸಿಗದ ಈಕೆ ಯಾರಿಗೂ ಸಿಗಬಾರದೆಂದು ಕೊಲೆ ಮಾಡಲು ನಿರ್ಧರಿಸಿದ್ದ ಎನ್ನುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿದೆ.

    ಇಬ್ಬರ ಬದಲು ನಾಲ್ವರ ಕೊಲೆ

    ಪ್ರವೀಣ್ ಕೊಲೆ ವಾಡಲು ಯೋಜಿಸಿದ್ದು ಇಬ್ಬರನ್ನು ಮಾತ್ರ. ಪ್ರವೀಣ್-ಅಯ್ನಜ್ ಸ್ನೇಹದ ಆಕೆಯ ಹಿರಿಯ ಸಹೋದರಿ ಅಫ್ನಾನ್‌ಗೆ ತಿಳಿದಿತ್ತು. ಹೀಗಾಗಿ ಇಬ್ಬರನ್ನೂ ಮುಗಿಸಬೇಕು ಎಂದುಕೊಂಡು ಅವರ ಮನೆಗೆ ಬಂದಿದ್ದ. ಆದರೆ, ಆತನ ಕೃತ್ಯಕ್ಕೆ ಅಡ್ಡಿಯಾದ ಅಯ್ನಜ್‌ಳ ತಾಯಿ, ಸಹೋದರ ಸೇರಿ ನಾಲ್ವರನ್ನು ಕೊಲೆ ಮಾಡಿ ತೆರಳಿದ್ದ. ಸ್ನಾೃಪ್ ಚಾಟ್ ಮೂಲಕ ಮನೆಯ ವಿಳಾಸ ತಿಳಿದುಕೊಂಡಿದ್ದ ಪ್ರವೀಣ್, ಮೊಬೈಲ್ ಅನ್ನು ಫ್ಲೈಟ್ ಮೋಡ್ ಮಾಡಿ, ಮನೆಯಲ್ಲಿಟ್ಟು ಬಂದಿದ್ದ. ಕೃತ್ಯ ಎಸಗಿ ಮರಳಿ ಮಂಗಳೂರಿಗೆ ತೆರಳಿದ್ದ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts