More

    ಹರ್​ ಘರ್ ತಿರಂಗ: ಅಂಚೆ ಮೂಲಕ ಮನೆಗೇ ಬರಲಿದೆ ರಾಷ್ಟ್ರಧ್ವಜ, ಬುಕಿಂಗ್​​ಗೆ ಯಾವತ್ತು ಕಡೇ ದಿನ?

    ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರತಿ ಮನೆಯ ಮೇಲೂ ತ್ರಿವರ್ಣ ಧ್ವಜ ಹಾರಿಸುವ ಅಭಿಯಾನ ಕೈಗೊಂಡಿರುವ ಕೇಂದ್ರ ಸರ್ಕಾರ ಅದಕ್ಕಾಗಿ ನಾನಾ ವ್ಯವಸ್ಥೆಗಳನ್ನು ಕೈಗೊಂಡಿದೆ.

    ಹರ್ ಘರ್ ತಿರಂಗ ಅಭಿಯಾನಕ್ಕಾಗಿ ಸಾಕಷ್ಟು ಧ್ವಜ ತಯಾರಿಕೆಗೆ ಕ್ರಮಕೈಗೊಂಡಿರುವ ಕೇಂದ್ರ ಸರ್ಕಾರ, ಅದನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿಯೂ ಒಂದಷ್ಟು ಕ್ರಮಗಳನ್ನು ಕೈಗೊಂಡಿದೆ. ಇದೀಗ ಧ್ವಜಗಳನ್ನು ಮನೆಗೇ ತಲುಪಿಸಲು ಮುಂದಾಗಿದೆ.

    ರಾಷ್ಟ್ರಧ್ವಜ ಹಾರಿಸಲು ಬಯಸುವವರು ಭಾರತೀಯ ಅಂಚೆ ಇಲಾಖೆ ಮೂಲಕ ಧ್ವಜವನ್ನು ಮನೆಗೇ ತರಿಸಿಕೊಳ್ಳಬಹುದು. ಡೆಲಿವರಿಗೆಂದು ಯಾವುದೇ ಶುಲ್ಕ ಪಡೆಯದೇ ಧ್ವಜವನ್ನು ಅಂಚೆ ಇಲಾಖೆ ತಲುಪಿಸಲಿದೆ.

    ಅಂಚೆ ಮೂಲಕ ರಾಷ್ಟ್ರಧ್ವಜ ಪಡೆಯಲು ಇಚ್ಛಿಸುವವರು ಇ-ಪೋಸ್ಟ್ ಮೂಲಕ 25 ರೂ. ಪಾವತಿಸಿದರೆ ಸಾಕು. ಆಗಸ್ಟ್​ 12ರ ಮಧ್ಯರಾತ್ರಿ 12 ಗಂಟೆಯವರೆಗೂ ಬುಕಿಂಗ್​ಗೆ ಅವಕಾಶ ಇರಲಿದೆ.
    ಬುಕಿಂಗ್ ನೋಂದಣಿ ಲಿಂಕ್​: https://www.epostoffice.gov.in/ProductDetails/Guest_productDetailsProdid=ca6wTEVyMuWlqlgDBTtyTw==

    ದೇವಸ್ಥಾನದ ನೀರಲ್ಲೇ ಉರಿಯುತ್ತದೆ ಈ ದರ್ಗಾದ ದೀಪ!; ಹಿಂದೂ-ಮುಸ್ಲಿಂ ಸಾಮರಸ್ಯದ ಮೊಹರಂ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts