More

    ಮತ್ತೆ ಸರಣಿ ಭೂಕಂಪನಕ್ಕೆ ನಲುಗಿದ ತೈವಾನ್: 20 ದಿನದ ಹಿಂದಷ್ಟೇ 17 ಮಂದಿ ದುರಂತ ಸಾವಿಗೀಡಾಗಿದ್ದರು

    ತೈಪೈ: ಈ ತಿಂಗಳ ಆರಂಭದಲ್ಲಿ ಪ್ರಬಲ ಭೂಕಂಪಕ್ಕೆ ನಲುಗಿದ್ದ ತೈವಾನ್​ ತಡರಾತ್ರಿ ಮತ್ತೊಮ್ಮೆ ಸರಣಿ ಭೂಕಂಪನಕ್ಕೆ ತತ್ತರಿಸಿದೆ. ತೈವಾನ್​ ರಾಜಧಾನಿ ತೈಪೈಯಲ್ಲಿ ನಿನ್ನೆ ರಾತ್ರಿಯಿಂದ ಮಂಗಳವಾರ (ಏಪ್ರಿಲ್​ 23) ಮುಂಜಾನೆಯವರೆಗೂ ಸರಣಿ ಭೂಕಂಪನಗಳು ಸಂಭವಿಸಿರುವುದಾಗಿ ವರದಿಯಾಗಿದೆ.

    ರಿಕ್ಟರ್​ ಮಾಪಕದಲ್ಲಿ 6.3 ತೀವ್ರತೆಯ ಭೂಕಂಪನ ದಾಖಲಾಗಿದೆ ಎಂದು ತೈವಾನ್​ನ ಕೇಂದ್ರ ಹವಾಮಾನ ಆಡಳಿತ ತಿಳಿಸಿದೆ. ಪೂರ್ವ ಹುವಾಲಿಯನ್​ನಲ್ಲಿ ಭೂಕಂಪನದ ಕೇಂದ್ರ ಬಿಂದುವನ್ನು ಗುರುತಿಸಲಾಗಿದೆ. ಕೇಂದ್ರ ಹವಾಮಾನ ಆಡಳಿತದ ಪ್ರಕಾರ ಸೋಮವಾರ ಸಂಜೆ 5 ಗಂಟೆ 8 ನಿಮಿಷ (ಸ್ಥಳೀಯ ಕಾಲಮಾನ)ಕ್ಕೆ ಸರಿಯಾಗಿ ತೈಪೈನಲ್ಲಿ 5.5 ತೀವ್ರತೆಯಲ್ಲಿ ಮೊದಲ ಬಾರಿ ಭೂಮಿ ಕಂಪಿಸಿತು.

    ಇದಾದ ಬಳಿಕ ಸರಣಿ ಭೂಕಂಪನಗಳು ಸಂಭವಿಸಿವೆ. ಅವುಗಳಲ್ಲಿ ಸೋಮವಾರ ತಡರಾತ್ರಿ 2.30ರ ಬಳಿಕ ಒಂದರ ಹಿಂದೆ ಒಂದಂತೆ ಪ್ರಬಲ ಭೂಕಂಪ ತೈಪೈಗೆ ಅಪ್ಪಳಿಸಿದೆ ಎಂದು ತೈವಾನ್​ ಎಎಫ್​ಪಿ ಸುದ್ದಿ ಸಂಸ್ಥೆ ಮತ್ತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತಡರಾತ್ರಿ 2.26ಕ್ಕೆ 6.0 ತೀವ್ರತೆಯ ಭೂಕಂಪ ಸಂಭವಿಸಿದೆ, ಇದಾದ ಆರು ನಿಮಿಷಗಳ ನಂತರ ಮತ್ತೆ 6.3 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದೆ. ಸರಣಿ ಭೂಕಂಪಗಳ ಸಮಯದಲ್ಲಿ ಕಟ್ಟಡಗಳು ತೂಗಾಡುತ್ತಿರುವುದು, ಬಾತ್ರೂಮ್ ಮತ್ತು ಕಿಟಕಿಗಳು ಶಬ್ದ ಮಾಡುತ್ತಿರುವುದಕ್ಕೆ ಸಂಬಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸದ್ಯಕ್ಕೆ ಯಾವುದೇ ಸಾವು-ನೋವು ವರದಿಯಾಗಿಲ್ಲ.

    ನಾನು ನನ್ನ ಕೈಗಳನ್ನು ತೊಳೆಯುತ್ತಿದ್ದೆ. ಈ ವೇಳೆ ಇದ್ದಕ್ಕಿದ್ದಂತೆ ತಲೆತಿರುಗಿದ ಅನುಭವವಾಯಿತು. ಬಳಿಕ ನಾನು ನನ್ನ ಕೋಣೆಯ ಕಡೆಗೆ ಹೆಜ್ಜೆ ಹಾಕಿದೆ ಮತ್ತು ಕಟ್ಟಡವು ಅಲುಗಾಡುತ್ತಿರುವುದನ್ನು ನಾನು ಗಮನಿಸಿದೆ ಎಂದು ತೈಪೆಯ ದಾನ್ ಜಿಲ್ಲೆಯಲ್ಲಿ ಪ್ರವಾಸಿ ಒಲಿವಿಯರ್ ಬೊನಿಫಾಸಿಯೊ ಎಎಫ್​ಪಿಗೆ ತಿಳಿಸಿದ್ದಾರೆ.

    ಏಪ್ರಿಲ್​ 3ರಂದು ಸಂಭವಿಸಿತ್ತು
    ಇದೇ ಹುವಾಲಿಯನ್ ಪ್ರದೇಶದಲ್ಲಿ ಏಪ್ರಿಲ್ 3 ರಂದು ಭೂಕಂಪ ಸಂಭವಿಸಿತ್ತು. ಈ ವೇಳೆ 7.4 ತೀವ್ರತೆಯಲ್ಲಿ ಭೂಕಂಪನ ದಾಖಲಾಗಿತ್ತು. ಇದರ ಪರಿಣಾಮ ಹುವಾಲಿಯನ್ ನಗರದಲ್ಲಿನ ಕಟ್ಟಡಗಳು ತೀವ್ರ ಹಾನಿಗೊಳಗಾದವು. ಈ ಭೂಕಂಪದಲ್ಲಿ ಕನಿಷ್ಠ 17 ಮಂದಿ ಸಾವಿಗೀಡಾದರು.

    ತೈವಾನ್ ಎರಡು ಟೆಕ್ಟೋನಿಕ್ ಪ್ಲೇಟ್‌ಗಳ ಜಂಕ್ಷನ್‌ನಲ್ಲಿ ನೆಲೆಗೊಂಡಿರುವುದರಿಂದ ಆಗಾಗ ಭೂಕಂಪಗಳನ್ನು ಎದುರಿಸುತ್ತದೆ. 1999ರ ನಂತರ ತೈವಾನ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪ ಇದಾಗಿದೆ. 1999ರಲ್ಲಿ ಈ ದ್ವೀಪ ರಾಷ್ಟ್ರದಲ್ಲಿ 7.6 ತೀವ್ರತೆಯ ಭೂಕಂಪ ಸಂಭವಿಸಿತು. ಈ ವೇಳೆ 2,400 ಜನರು ಸಾವಿಗೀಡಾಗಿದ್ದರು. (ಏಜೆನ್ಸೀಸ್​)

    ತೈವಾನ್​ನಲ್ಲಿ 25 ವರ್ಷಗಳ ಬಳಿಕ ಪ್ರಬಲ ಭೂಕಂಪನ: ಜಪಾನ್​ಗೆ ಅಪ್ಪಳಿಸಿದ ಸುನಾಮಿ​

    ಶ್ರೀಲೀಲಾ ಕೆರಿಯರ್​ ಕ್ಲೋಸ್​ ಅಂದವರಿಗೆ ಖಡಕ್​ ಉತ್ತರ ಕೊಟ್ಟ ಕನ್ನಡತಿ! ನಿಜಕ್ಕೂ ಕ್ರೇಜಿ ಪ್ರಾಜೆಕ್ಟ್​ ಇದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts