More

    ತೈವಾನ್‌ನಲ್ಲಿ ಭೀಕರ ಭೂಕಂಪ, 7ಕ್ಕೂ ಹೆಚ್ಚು ಜನರ ಸಾವು, ನೂರಾರು ಮಂದಿ ಗಂಭೀರ! ಪ್ರಧಾನಿ ಮೋದಿ ಸಂತಾಪ

    ಟೋಕಿಯೋ: ತೈವಾನ್‌ನ ಪೂರ್ವ ಭಾಗದಲ್ಲಿ ಬುಧವಾರ ಬೆಳಿಗ್ಗೆ 7.4 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದೆ. ತೈವಾನ್, ದಕ್ಷಿಣ ಜಪಾನ್ ಹಾಗೂ ಫಿಲಿಪ್ಪೀನ್ಸ್ ದೇಶಗಳ ವಿವಿಧ ಭಾಗಗಳಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಘಟನೆಯಲ್ಲಿ ಕನಿಷ್ಠ 7 ಮಂದಿ ಮೃತಪಟ್ಟಿದ್ದು, 730 ಮಂದಿ ಗಾಯಗೊಂಡಿದ್ದಾರೆ.

    ಇದನ್ನೂ ಓದಿ: ವಯನಾಡ್​: ಟಿಕೆಟ್ ಕೇಳಿದ್ದಕ್ಕೆ ಚಲಿಸೋ ರೈಲಿಂದ ಟಿಟಿಇಯನ್ನು ಹೊರಗೆ ತಳ್ಳಿದ್ದ ವ್ಯಕ್ತಿ ವಶಕ್ಕೆ

    ಇನ್ನು ಈ ಭೀಕರ ಭೂಕಂಪಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದು, ತೈವಾನ್​ನಲ್ಲಿ ಭೂಕಂಪದಿಂದಾಗಿ ಜೀವಹಾನಿ ಉಂಟಾಗಿರೋದು ತೀವ್ರ ನೋವುಂಟು ಮಾಡಿದೆ ಎಂದಿದ್ದಾರೆ.

    ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರು, ಈ ದುರಂತದ ಸಮಯದಲ್ಲಿ ನನ್ನ ಆಲೋಚನೆಗಳು ತೈವಾನ್​ ಜನರೊಂದಿಗೆ ಇವೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪಗಳು ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಈ ಕಷ್ಟದ ಸಮಯದಲ್ಲಿ ತೈವಾನ್​ಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಭಾರತ ಸಿದ್ಧವಾಗಿದೆ ಎಂದು ಹೇಳಿದ್ದಾರೆ.

    pm

    ತೈವಾನ್ ಭೂಕಂಪದ ನಂತರ ಫಿಲಿಪೈನ್ಸ್ ಜನರಿಗೆ ಸುನಾಮಿ ಎಚ್ಚರಿಕೆಯನ್ನು ನೀಡಿತು. ಕರಾವಳಿ ಪ್ರದೇಶಗಳಿಂದ ಸ್ಥಳಾಂತರಗೊಳ್ಳಲು ಆದೇಶಿಸಿದೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಸಂಸ್ಥೆಯು, ಭೂಕಂಪವು 7.4ರ ತೀವ್ರತೆಯನ್ನು ಹೊಂದಿದೆ ಎಂದು ಹೇಳಿದೆ. ಅದರ ಕೇಂದ್ರಬಿಂದುವು ತೈವಾನ್‌ನ ಹುವಾಲಿಯನ್ ಸಿಟಿಯಿಂದ 18 ಕಿಲೋಮೀಟರ್ ದಕ್ಷಿಣಕ್ಕೆ 34.8 ಕಿಮೀ ಆಳದಲ್ಲಿದೆ. ಜಪಾನ್‌ನ ಹವಾಮಾನ ಸಂಸ್ಥೆಯು 7.4ರ ತೀವ್ರತೆಯನ್ನು ಗುರುತಿಸಿದೆ.

    ತೈವಾನ್‌ನ ಪೂರ್ವದಲ್ಲಿ ಸಂಭವಿಸಿದ ಭೂಕಂಪವು “25 ವರ್ಷಗಳಲ್ಲಿ ಅತ್ಯಂತ ಪ್ರಬಲವಾಗಿದೆ” ಎಂದು ತೈಪೆಯ ಭೂಕಂಪನ ಕೇಂದ್ರದ ನಿರ್ದೇಶಕರು ತಿಳಿಸಿದ್ದಾರೆ. “ಭೂಕಂಪವು ಭೂಮಿಗೆ ಹತ್ತಿರದಲ್ಲಿದೆ. ಆಳದಲ್ಲಿಲ್ಲ. ಇದು ತೈವಾನ್ ಮತ್ತು ಕಡಲಾಚೆಯ ದ್ವೀಪಗಳಾದ್ಯಂತ ಕಂಡುಬಂದಿದೆ. 1999ರ ಭೂಕಂಪದ ನಂತರದ 25 ವರ್ಷಗಳಲ್ಲಿ ಇದು ಪ್ರಬಲವಾದುದು” ಎಂದು ವು ಚಿಯೆನ್-ಫು ತಿಳಿಸಿದರು. ಸೆಪ್ಟೆಂಬರ್ 1999ರ ಭೂಕಂಪ 7.6 ರಿಕ್ಟರ್‌ನದಾಗಿದ್ದು 2,400 ಜನರನ್ನು ಕೊಂದಿತ್ತು.

    ರನ್ ಮಷಿನ್ ಕೊಹ್ಲಿಯನ್ನು ಔಟ್ ಮಾಡುವುದೇ ನನ್ನ ಗುರಿ: ಸಿದ್ದಾರ್ಥ್‌ ಹೀಗ್ಯಾಕೆ ಹೇಳಿದ್ರು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts