More

    ವಯನಾಡ್​: ಟಿಕೆಟ್ ಕೇಳಿದ್ದಕ್ಕೆ ಚಲಿಸೋ ರೈಲಿಂದ ಟಿಟಿಇಯನ್ನು ಹೊರಗೆ ತಳ್ಳಿದ್ದ ವ್ಯಕ್ತಿ ವಶಕ್ಕೆ

    ವಯನಾಡ್​: ಟಿಕೆಟ್​ ಇಲ್ಲದೆ ಸ್ಲೀಪರ್​ ಕೋಚ್​ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಪ್ರಶ್ನಿಸಿದ್ದಕ್ಕೆ ​ರೈಲಿನಿಂದ ಟಿಟಿಇಯನ್ನು ತಳ್ಳಿರುವ ಒಡಿಶಾ ಮೂಲದ ವ್ಯಕ್ತಿಯೊಬ್ಬನನ್ನು ಕೇರಳ ಪೊಲೀಸರು ಬುಧವಾರ ಬಂಧಿಸಿದ್ದಾರೆ.

    ಇದನ್ನೂ ಓದಿ: ಅತ್ಯಾಚಾರ ಸಂತ್ರಸ್ತೆಗೆ ಬಟ್ಟೆ ಬಿಚ್ಚಿ ಗಾಯ ತೋರಿಸುವಂತೆ ಹೇಳಿದ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್?

    ಎರ್ನಾಕುಲಂ-ಪಾಟ್ನಾ ಎಕ್ಸ್‌ಪ್ರೆಸ್‌ನಿಂದ ಟಿಟಿಇ ವಿನೋದ್​ ಕುಮಾರ್ ಟಿಕೆಟ್ ಪರಿಶೀಲಿಸುತ್ತಿದ್ದಾಗ ಈ ಘಟನೆ ನಡೆದಿದೆ. ಆಗ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ವಲಸೆ ಕಾರ್ಮಿಕ ಒಡಿಶಾ ಮೂಲದ ವ್ಯಕ್ತಿ ವಿನೋದ್ ಅವರನ್ನು ತಳ್ಳಿದ್ದಾನೆ. ಆರೋಪಿಯನ್ನು ಪಾಲಕ್ಕಾಡ್​ನಲ್ಲಿ ವಶಕ್ಕೆ ಪಡೆಯಲಾಗಿದೆ.
    ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ.

    ಕೇರಳದ ಮುಳಂಕುನ್ನತುಕಾವು ರೈಲು ನಿಲ್ದಾಣದ ಬಳಿ ಚಲಿಸುತ್ತಿದ್ದ ಎರ್ನಾಕುಲಂ-ಪಾಟ್ನಾ ಎಕ್ಸ್‌ಪ್ರೆಸ್‌ನಿಂದ ವ್ಯಕ್ತಿಯೊಬ್ಬ ಟಿಟಿಇಯನ್ನು ಹೊರಗೆ ತಳ್ಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಿ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ತ್ರಿಶೂರ್ ರೈಲ್ವೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ವಿಚಾರಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ತ್ರಿಶೂರ್ ರೈಲ್ವೆ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆರೋಪಿಗಳು ಕುಡಿತದ ಮತ್ತಿನಲ್ಲಿ ರೈಲಿನ ಸ್ಲೀಪರ್ ಕೋಚ್‌ನಲ್ಲಿ ಮಲಗಿದ್ದರು. ಕಾಯ್ದಿರಿಸಿದ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಕಾರಣ ದಂಡ ಪಾವತಿಸಿ ಎಂದು ಟಿಟಿಇ ಕೇಳಿದ್ದಾರೆ. ಈ ಬಗ್ಗೆ ಆರೋಪಿ ಟಿಟಿಇ ಜೊತೆ ವಾಗ್ವಾದ ನಡೆದಿದೆ ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.

    ಟಿಟಿಇ ಬಾಗಿಲ ಬಳಿ ನಿಂತು, ತಪ್ಪಿಸಿಕೊಂಡ ಪ್ರಯಾಣಿಕರನ್ನು ಇಳಿಸುವ ಬಗ್ಗೆ ನಿಯಂತ್ರಣ ಮೇಲಾಧಿಕಾರಿಗಳಿಗೆ ತಿಳಿಸುತ್ತಿದ್ದರು. ಅಷ್ಟರಲ್ಲಿ ಹಿಂದಿನಿಂದ ಬಂದ ವ್ಯಕ್ತಿ ಟಿಟಿಇಯನ್ನು ಬಾಗಿಲಿನಿಂದ ಹೊರಗೆ ತಳ್ಳಿದ್ದಾನೆ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ವಿಷಯ ತಿಳಿದ ರೈಲ್ವೇ ಪೊಲೀಸ್ ಅಧಿಕಾರಿಗಳು ಆರೋಪಿಯನ್ನು ಪಾಲಕ್ಕಾಡ್‌ನಲ್ಲಿ ಬಂಧಿಸಿದ್ದಾರೆ.

    ರನ್ ಮಷಿನ್ ಕೊಹ್ಲಿಯನ್ನು ಔಟ್ ಮಾಡುವುದೇ ನನ್ನ ಗುರಿ: ಸಿದ್ದಾರ್ಥ್‌ ಹೀಗ್ಯಾಕೆ ಹೇಳಿದ್ರು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts