More

    ರನ್ ಮಷಿನ್ ಕೊಹ್ಲಿಯನ್ನು ಔಟ್ ಮಾಡುವುದೇ ನನ್ನ ಗುರಿ: ಸಿದ್ದಾರ್ಥ್‌ ಹೀಗ್ಯಾಕೆ ಹೇಳಿದ್ರು ಗೊತ್ತಾ?

    ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರನ್ ಮಷಿನ್ ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡಿದ್ದು ನನ್ನ ಪಾಲಿನ ಜೀವಮಾನ ಸಾಧನೆ ಎಂದು ಲಖನೌ ಸೂಪರ್‌ ಜಯಂಟ್ಸ್ ತಂಡದ ಯುವ ಸ್ಪಿನ್ನರ್‌ ಮಣಿಮಾರನ್‌ ಸಿದ್ದಾರ್ಥ್‌ ಹರ್ಷ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಅತ್ಯಾಚಾರ ಸಂತ್ರಸ್ತೆಗೆ ಬಟ್ಟೆ ಬಿಚ್ಚಿ ಗಾಯ ತೋರಿಸುವಂತೆ ಹೇಳಿದ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್?

    ವಿರಾಟ್​ ಕೊಹ್ಲಿ ವಿಕೆಟ್‌ ಸಿದ್ದಾರ್ಥ್‌ ಪಾಲಿಗೆ ಇಂಡಿಯನ್ ಪ್ರೀಮಿಯರ್ ಲೀಗ್​ನ ಚೊಚ್ಚಲ ವಿಕೆಟ್‌ ಆಗಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಎಲ್‌ಎಸ್‌ಜಿ ತಂಡ 28 ರನ್‌ಗಳ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ, ಬ್ಯಾಟಿಂಗ್ ವೈಫಲ್ಯದಿಂದಾಗಿ ತವರಿನಲ್ಲೇ ಸತತ 2ನೇ ಸೋಲು ಅನುಭವಿಸಿದ ಫಾಫ್ ಡು ಪ್ಲೆಸಿಸ್ ಪಡೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲೇ ಉಳಿದಿದೆ. ಸತತ 2ನೇ ಜಯ ಕಂಡ ಕೆಎಲ್ ರಾಹುಲ್ ಪಡೆ 4ನೇ ಸ್ಥಾನಕ್ಕೇರಿತು.

    ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಣಿಮಾರನ್‌ ಸಿದ್ಧಾರ್ಥ್, ವಿರಾಟ್ ಕೊಹ್ಲಿಯನ್ನು ಔಟ್ ಮಾಡಬೇಕೆಂಬುದೇ ನನ್ನ ಅತೀ ದೊಡ್ಡ ಕನಸು ಎಂದಿದ್ದಾರೆ.

    ರನ್ ಮಷಿನ್ ಕೊಹ್ಲಿಯನ್ನು ಔಟ್ ಮಾಡುವುದೇ ನನ್ನ ಗುರಿ: ಸಿದ್ದಾರ್ಥ್‌ ಹೀಗ್ಯಾಕೆ ಹೇಳಿದ್ರು ಗೊತ್ತಾ?

    ಮಂಗಳವಾರ ಸಂಜೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್​ಸಿಬಿ ವಿರುದ್ಧ ಬೌಲಿಂಗ್​ ಮಾಡಿದ ಮಣಿಮಾರನ್​ಮೂರು ಓವರ್‌ಗಳಲ್ಲಿ 21 ರನ್​ ನೀಡಿದರು. ತಮ್ಮ 16ನೇ ಎಸೆತದಲ್ಲಿ ಕೊಹ್ಲಿ 21 ರನ್ ಗಳಿಸಿ ಔಟ್ ಆದರು. 16 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿ 22 ರನ್ ಗಳಿಸಿದ ನಂತರ ಕೊಹ್ಲಿಯನ್ನು ಔಟ್ ಮಾಡಿದರು.

    ಐಪಿಎಲ್ ಪದಾರ್ಪಣೆಯ ಪಂದ್ಯದಲ್ಲೇ ಅತಿವೇಗದ ಎಸೆತಗಳಿಂದ ಗಮನಸೆಳೆದಿದ್ದ ದೆಹಲಿಯ 21 ವರ್ಷದ ಮಯಾಂಕ್ ಯಾದವ್ ಬಗ್ಗೆ ಮಾತನಾಡಿದ ಸಿದ್ಧಾರ್ಥ್, ಅವರ ಬೌಲಿಂಗ್‌ ಅನ್ನು ನಾನು ನೆಟ್ಸ್‌ನಲ್ಲಿ ನೋಡಿದ್ದೇನೆ. ಲಖನೌ ಸೂಪರ್‌ ಜಯಂಟ್ಸ್‌ ಅವರ ಪ್ರದರ್ಶನವನ್ನು ನೋಡಲು ಸಂತೋಷವಾಗು ತ್ತಿದೆ. ಐಪಿಎಲ್ 2024 ಆವೃತ್ತಿಯಲ್ಲಿ ಸತತ ಎರಡನೇ ಪಂದ್ಯದಲ್ಲೂ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿಗೆ ಭಾಜನರಾದರು. ಐಪಿಎಲ್ 2024 ರಲ್ಲಿ ಬೆಂಗಳೂರಿನಲ್ಲಿ 156.7 ಕಿಮೀ ವೇಗದಲ್ಲಿ ಬೌಲ್ ಮಾಡಿದ ಅತ್ಯಂತ ವೇಗದ ಬಾಲ್‌ಗಾಗಿ ಅವರು ತಮ್ಮದೇ ಆದ ದಾಖಲೆಯನ್ನು ಮುರಿದರು.

    ಮಯಾಂಕ್ ದಾಳಿಗೆ ಆರ್​ಸಿಬಿ ತತ್ತರ: ಮಯಾಂಕ್ ದಾಳಿಗೆ ಆರ್​ಸಿಬಿ ತತ್ತರ: ಐಪಿಎಲ್ ಪದಾರ್ಪಣೆಯ ಪಂದ್ಯದಲ್ಲೇ ಅತಿವೇಗದ ಎಸೆತಗಳಿಂದ ಗಮನಸೆಳೆದಿದ್ದ ದೆಹಲಿಯ 21 ವರ್ಷದ ಮಯಾಂಕ್ ಯಾದವ್ ತನ್ನ 2ನೇ ಪಂದ್ಯದಲ್ಲೂ ಅಂಥದ್ದೇ ಮಾರಕ ದಾಳಿ ನಡೆಸಿ ಆರ್​ಸಿಬಿ ಬ್ಯಾಟರ್​ಗಳನ್ನು ಕಂಗೆಡಿಸಿದರು. ಪ್ಲೆಸಿಸ್-ಕೊಹ್ಲಿ ಜೋಡಿ ಮೊದಲ ವಿಕೆಟ್​ಗೆ 26 ಎಸೆತಗಳಲ್ಲಿ 40 ರನ್ ಸೇರಿಸಿ ಉತ್ತಮ ಆರಂಭ ಒದಗಿಸಲು ಪ್ರಯತ್ನಿಸಿತು. ಆದರೆ, ಎಡಗೈ ಸ್ಪಿನ್ನರ್ ಎಂ. ಸಿದ್ಧಾರ್ಥ್ ಎಸೆತದಲ್ಲಿ ವಿರಾಟ್ (22) ಔಟ್ ಆಗುವುದರೊಂದಿಗೆ ಆರ್​ಸಿಬಿ ಕುಸಿತ ಆರಂಭಗೊಂಡಿತು.
    ನಾಯಕ ಪ್ಲೆಸಿಸ್ (19) ರನೌಟ್ ಆದರೆ, ಆಸೀಸ್ ಆಟಗಾರರಾದ ಗ್ಲೆನ್ ಮ್ಯಾಕ್ಸ್​ವೆಲ್ (0) ಮತ್ತು ಕ್ಯಾಮರಾನ್ ಗ್ರೀನ್ (9) ವಿಕೆಟ್ ಕಬಳಿಸಿದ ಮಯಾಂಕ್ ಆರ್​ಸಿಬಿ ಸಂಕಷ್ಟ ಹೆಚ್ಚಿಸಿದರು.

    Virat Kohli: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಶೇಷ ದಾಖಲೆ ಬರೆದ ಕಿಂಗ್ ಕೊಹ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts