More

    ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಹಳೇ ವಿದ್ಯಾರ್ಥಿ ಸಂಘ ಉದ್ಘಾಟನೆ

    ಕಡಬ: ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳ ಸಾಧನೆ ನೋಡಿ ಹೆಮ್ಮೆ ಎನಿಸುತ್ತಿದೆ. ಹಳೇ ವಿದ್ಯಾರ್ಥಿ ಸಂಘದ ಮೂಲಕ ಸಂಸ್ಥೆಯಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳು ನಡೆಯಲಿ ಎಂದು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಹೇಳಿದರು.

    ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಹಳೇ ವಿದ್ಯಾರ್ಥಿ ಸಂಘ, ಆರೋಗ್ಯ ತಪಾಸಣಾ ಉಚಿತ ಶಿಬಿರ ಮತ್ತು ಜ್ಞಾನ ಸಿಂಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಕ್ಷಿತ್ ಕೆ.ಜೆ ಬಂಡಾಜೆ ಅಧ್ಯಕ್ಷತೆ ವಹಿಸಿದ್ದರು. ಡಾ.ಉದಯ ಕುಮಾರ್, ಸಂಘದ ಗೌರವ ಸಲಹೆಗಾರ ಗಿರಿಶಂಕರ ಸುಲಾಯ, ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ, ಮುಖ್ಯಶಿಕ್ಷಕರಾದ ನಾರಾಯಣ ಭಟ್, ವಿನಯ ವಿ.ಶೆಟ್ಟಿ, ಸಹ ಆಡಳಿತಾಧಿಕಾರಿ ಹೇಮಾ ನಾಗೇಶ್ ರೈ ಮಾಳ ಶುಭ ಹಾರೈಸಿದರು.

    ಡಾ.ಧನ್ಯಶ್ರೀ ಬಿ.ವಿ ಪ್ರಾರ್ಥಿಸಿದರು. ಜತೆ ಕಾರ್ಯದರ್ಶಿ ಅಕ್ಷರ ಅಭಿಕಾರ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಶೋಭಿತ್ ರೈ ಎಂ ವಂದಿಸಿದರು. ಕೋಶಾಧಿಕಾರಿ ಲಿಖಿತ್ ರೈ ಎಸ್. ಕಾರ್ಯಕ್ರಮ ನಿರೂಪಿಸಿದರು.

    ಸಂಸ್ಥೆಯ ಗ್ರಂಥಾಲಯಕ್ಕೆ ಪುಸ್ತಕ ಹಸ್ತಾಂತರಿಸಿ ಜ್ಞಾನ ಸಿಂಚನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹಿರಿಯ ವಿದ್ಯಾರ್ಥಿ ವೇದಿಕ್ ರೈ ಹಸ್ತಾಂತರಿಸಿದರು.

    ಹಳೇ ವಿದ್ಯಾರ್ಥಿ ವೈದ್ಯರಿಂದ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಡಾ.ಸುಧೀರ್ ಕೆ, ಡಾ.ಶೌರೀ ಕೆ.ಆರ್, ಡಾ.ಶ್ರೀಕರಿ, ಡಾ. ಕಾವ್ಯ ಭಟ್, ಡಾ.ವಿಶಾಲ್ ಯು.ಪಡೀಲ್,ಡಾ.ಸೌರಭ್ ಎಸ್ ರೈ, ಡಾ.ಕೀರ್ತನಾ ಎನ್, ಡಾ.ಕೀರ್ತನ್ ಭಟ್, ಡಾ.ಅಜಯ್ ರೈ, ಡಾ. ರಕ್ಷಾ ರೈ ಎಚ್, ಡಾ.ಸ್ವಾತಿ ಯು.ಕೆ, ಡಾ.ಧನ್ಯಾ ಶ್ರೀ ಬಿ.ವಿ, ಡಾ.ಸ್ವಸ್ತಿ ರೈ, ಡಾ.ಚೈತ್ರಾ ಜಿ.ಜಿ ಭಾಗವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts