More

    ಕಾಲಕಾಲಕ್ಕೆ ದೇಹದ ಆರೋಗ್ಯ ಪರೀಕ್ಷೆ ಉತ್ತಮ- ಸುರೇಶ್ ಬೈಂದೂರ್ ಸಲಹೆ

    ಬಂಟ್ವಾಳ: ಮನುಷ್ಯ ತನ್ನ ದೈನಂದಿನ ಜೀವನದಲ್ಲಿ ಯಾವುದೇ ದುಶ್ಚಟಗಳಿಗೆ ಒಳಗಾಗದೆ ಕಾಲಕಾಲಕ್ಕೆ ತನ್ನ ದೇಹದ ಆರೋಗ್ಯದಲ್ಲಿ ಆಗುವ ಏರುಪೇರುಗಳ ಬಗ್ಗೆ ಪರೀಕ್ಷೆ ಮಾಡುವುದು ಉತ್ತಮ. ಇದರಿಂದ ದೇಹದಲ್ಲಿ ಆಗುವ ಅನಾಹುತಗಳನ್ನು ತಪ್ಪಿಸಿ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ ಎಂದು ಶ್ರೀ ಸತ್ಯಸಾಯಿ ಬಾಲ ವಿಕಾಸ ಕೇಂದ್ರ ಮಂಗಳಾದೇವಿ ಇದರ ಸಂಚಾಲಕ ಸುರೇಶ್ ಬೈಂದೂರ್ ಅಭಿಪ್ರಾಯ ಪಟ್ಟರು.

    ಬಂಟ್ವಾಳ ತಾಲೂಕು ಕರ್ಪೆ ಗ್ರಾಮದ ಸಮಾಜ ಮಂದಿರದಲ್ಲಿ ಜರುಗಿದ ವೈದ್ಯಕೀಯ ಶಿಬಿರ, ದಂತ ಶಿಬಿರ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತಾನಾಡಿದರು.

    ಅಧ್ಯಕ್ಷತೆ ವಹಿಸಿದ್ದ ಶ್ರೀಶ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಗುರುರಾಜ್ ಶುಭ ಹಾರೈಸಿದರು. ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ, ರೋಟರಿ ಕ್ಲಬ್ ಫಲ್ಗುಣಿ ಸಿದ್ದಕಟ್ಟೆಯ ಗಣೇಶ್ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕರ್ಪೆ ಒಕ್ಕೂಟದ ಸೇವಾ ಪ್ರತಿನಿಧಿ ಪ್ರತೀಕ್ಷಾ, ಪ್ರಮುಖರಾದ ರಂಜಿನಿ ದಿವಾಕರ್, ಭಾರತೀಯ ರೆಡ್‌ಕ್ರಾಸ್‌ನ ಪ್ರವೀಣ್, ಕೆ.ಎಂ.ಸಿ ಆಸ್ಪತ್ರೆಯ ಡಾ.ರಿತ್ವಿಕ್, ಯೆನೆಪೋಯ ಡೆಂಟಲ್ ಕಾಲೇಜಿನ ಡಾ. ಲೂಪುನ, ವೈಭವ ಮೆಡಿಕಲ್‌ನ ಸಚ್ಚಿದಾನಂದ ಭಟ್, ಗ್ರಾಮ ಪಂಚಾಯತಿ ಅಧ್ಯಕ್ಷೆ ರಾಜೀವಿ ಪೂಜಾರಿ, ಸದಸ್ಯರಾದ ವಿದ್ಯಾ ಪ್ರಭು, ದೇವಪ್ಪ ಕರ್ಕೇರ, ಹೇಮಲತಾ, ಸುಬ್ರಹ್ಮಣ್ಯ ಭಟ್, ನೀಲಕಂಠ ಭಟ್, ಕೆ.ರಾಮಕೃಷ್ಣ ನಾಯಕ್, ರವೀಂದ್ರ ನಾಯಕ್, ದಾಮೋದರ ಪೂಜಾರಿ, ಭಾಸ್ಕರ ಪ್ರಭು, ಮಹಾಬಲ ನಾಯ್ಕ ಉಪಸ್ಥಿತರಿದ್ದರು.

    ಪ್ರಭಾಕರ ಪ್ರಭು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀಶ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕರ್ಪೆ, ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ, ರೋಟರಿ ಕ್ಲಬ್ ಫಲ್ಗುಣಿ ಸಿದ್ದಕಟ್ಟೆ, ಪೇರಳಬೆಟ್ಟು ಫ್ರೆಂಡ್ಸ್ ಕರ್ಪೆ, ಹಿಂದೂ ಜಾಗರಣ ವೇದಿಕೆ ಕರ್ಪೆ ಘಟಕ, ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ನೆಕ್ಕರೆಗುರಿ, ಶ್ರೀ ರಾಮಾಂಜನೇಯ ಭಜನಾ ಮಂದಿರ ಕರ್ಪೆ, ಮಹಾಗಣಪತಿ ಸೇವಾ ವೃಂದ ಕರ್ಪೆ, ಕುಂಭಕಂಠಿಣಿ ಆಟೋ-ರಿಕ್ಷಾ ಪಾರ್ಕ್ ಕರ್ಪೆ, ಬ್ರಹ್ಮ ಮುಗೇರ ಮಹಾಕಾಳಿ ದೇವಸ್ಥಾನ ಮುಗೇರು ಗುಡ್ಡೆ, ಸಿದ್ದಕಟ್ಟೆ ಹಾಲು ಉತ್ಪಾದಕರ ಸಂಘ, ವೈಭವ ಮೆಡಿಕಲ್ ಸಿದ್ದಕಟ್ಟೆ, ಶ್ರೀ ಸತ್ಯಸಾಯಿ ಬಾಬಾರವರ ಆರಾಧನಾ ಮಹೋತ್ಸವ ಪ್ರಯುಕ್ತ ಶ್ರೀ ಸತ್ಯಸಾಯಿ ಬಾಲವಿಕಾಸ ಕೇಂದ್ರ ಮಂಗಳಾದೇವಿ ಇವರ ಸಹಕಾರದೊಂದಿಗೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts